ಡಿಕೆಶಿ ವಿರುದ್ಧ ಯತ್ನಾಳ್ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಕೆ. ಯತ್ನಾಳ್ ಕಾನೂನು ಹೋರಾಟಕ್ಕೆ ಬೆಳಗಾವಿ ಸಾಹುಕಾರ್ ಸಾಥ್. ಸಾಹುಕಾರ್ ಬೆಂಬಲದೊಂದಿಗೆ ಕೋರ್ಟ್ಗೆ ದಾವೆ ಹೂಡಿದ ಯತ್ನಾಳ್. ಅರ್ಜಿ ಸಲ್ಲಿಸುವ ಮುನ್ನ ಯತ್ನಾಳ್-ರಮೇಶ್ ಜಾರಕಿಹೊಳಿ ಚರ್ಚೆ. ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿರುವ ಉಭಯ ನಾಯಕರು .
DK Shivakumar : ನಾನೇನು ತಪ್ಪು ಮಾಡಿಲ್ಲ. ಎಲ್ಲಾ ಬೆಳವಣಿಗೆಗಳನ್ನು ನೀವು (ಮಾಧ್ಯಮದವರು) ಜನರು ನೋಡಿದ್ದಾರೆ. ನಾನು ಕೇವಲ ಪಕ್ಷದ ಕೆಲಸ ಮಾತ್ರ ಮಾಡಿದ್ದೇನೆ. ಪಕ್ಷದ ಕೆಲಸ ಮಾಡಿದ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಮುಂದಕ್ಕೂ ತೊಂದರೆ ಕೊಟ್ಟರೆ ಕಾಪಾಡಲು ಆ ಭಗವಂತನಿದ್ದಾನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ
ಡಿಸಿಎಂ ಡಿಕೆಶಿ ಪಾಲಿಗೆ ಇಂದು ಮಹತ್ವದ ದಿನ
ಇಂದು ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ
ಸಿಬಿಐ ತನಿಖೆ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಅರ್ಜಿ
ಕಾಂಗ್ರೆಸ್ನ ಭ್ರಷ್ಟಾಚಾರ, ಗೂಂಡಾಗಳ ಮಹಾಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಭ್ರಷ್ಟರ ಪಾಲಿನ ಆಲದಮರ ಹಾಗೂ ಪೋಷಕ. ಅರಸಿ ಬಂದವರಿಗೆಲ್ಲ ನೀರು, ನೆಳಲನ್ನು ಒದಗಿಸುವ ಮಹಾಸಂರಕ್ಷಕರ ಭ್ರಷ್ಟ ಸಾಧನೆಯ ಪಕ್ಷಿನೋಟವೆಂದು ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ತಮ್ಮ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಪೋಷಣೆಯ ಕ್ರಮವನ್ನು ಸಮರ್ಥಿಸಲು ವ್ಯರ್ಥ ಪ್ರಯತ್ನ ನಡೆಸಿರುವುದು ಅವರ ನೈತಿಕತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಸ್ವಘೋಷಿತ ಸಂವಿಧಾನ ತಜ್ಞ ಸಿಎಂ ಸಿದ್ದರಾಮಯ್ಯನವರು ಅಕ್ರಮ ಆಸ್ತಿ ಗಳಿಕೆ ಆರೋಪಿ ಡಿ.ಕೆ.ಶಿವಕುಮಾರ್ ಅವರನ್ನು ರಕ್ಷಿಸಲು ಸಂವಿಧಾನವನ್ನೇ ಗಾಳಿಗೆ ತೂರಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.