ಬೆಂಗಳೂರು ಮತ್ತು ಮೈಸೂರಿನ ಹಲವು ಸ್ಥಳಗಳಲ್ಲಿ ಐಟಿ ದಾಳಿ ನಡೆದಿದೆ.. ಫೈನಾನ್ಸಿಯರ್ ಮನೆ ಮೇಲೆ ದಾಳಿ ಮಾಡಲಾಗಿದೆ. ಬೆಂಗಳೂರು ಹಾಗೂ ಮೈಸೂರು ಭಾಗದಲ್ಲಿ ಸುಮಾರು 20 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ.. 5 ಕೋಟಿ ಬೆಲೆಬಾಳುವ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಖರ್ಗೆ ಅವರ ಬೆಳವಣಿಗೆ ಸಹಿಸದೇ ಮಲ್ಲಿಕಾರ್ಜುನ್ ಖರ್ಗೆ, ಪತ್ನಿ ಹತ್ಯೆಗೆ ಸಂಚು ನಡೆಸಿದ್ದಾರೆ ಎಂದು ಕೈ ನಾಯಕ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದಾರೆ.. ಈ ಬಗ್ಗೆ ಸುರ್ಜೇವಾಲಾ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ, ಕುಟುಂಬಸ್ಥರ ಹತ್ಯೆ ಆಡಿಯೋ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ ಆ ಆಡಿಯೋ ತಿರುಚಲಾಗಿದೆಯೋ ಏನೋ ನೋಡಬೇಕಿದೆ. ಆಡಿಯೋ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಹಿನ್ನೆಲೆ ಸಚಿವೆ ಶಶಿಕಲಾ ಜೋಲ್ಲೆ ನೇತೃತ್ವದಲ್ಲಿ ಹುನುಮಾನ್ ಚಾಲೀಸ ಪಠಣ ಮಾಡಲಾಗಿದೆ. ನಿಪ್ಪಾಣಿ ಪಟ್ಟಣದ ಸಾಕರವಾಡಿ ಹನುಮಾನ ಮಂದಿರದಲ್ಲಿ 300ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರು ಹನುಮಾನ್ ಚಾಲೀಸ ಪಠಣ ಮಾಡಿದ್ದಾರೆ..
ಬಳ್ಳಾರಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಮಳೆ ಆತಂಕ. ಇಂದು ಮಧ್ಯಾಹ್ನ 2 ಗಂಟೆಗೆ ಬಳ್ಳಾರಿಯಲ್ಲಿ ಮೋದಿ ಕಾರ್ಯಕ್ರಮ. ರಾತ್ರಿ ಸುರಿದ ಮಳೆಯಿಂದಾಗಿ ವೇದಿಕೆ ಸಂಪೂರ್ಣ ಕೆಸರುಮಯ. ಇನ್ನೂ ಮೋಡ ಕವಿದ ವಾತಾವರಣ ಹಿನ್ನೆಲೆ ಮತ್ತೆ ಮಳೆ ಆತಂಕ. ರಾತ್ರಿ ಸುರಿದ ಮಳೆಗೆ ವೇದಿಕೆ ಸರಿಪಡಿಸುತ್ತಿರುವ ಸಿಬ್ಬಂದಿ.
ಬಜರಂಗದಳ ಬ್ಯಾನ್ ಮಾಡುವ ಪ್ರಣಾಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ. ಈ ಬಗ್ಗೆ ನಮ್ಮ ಪಕ್ಷದ ಹಿರಿಯ ನಾಯಕರು ಈಗಾಗಲೇ ಮಾತನಾಡಿದ್ದಾರೆ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ರು. ಅಲ್ಲದೇ ಬಿಜೆಪಿ ಕಟ್ಟಿದ ನನಗೆ ಪಕ್ಷ ಮೋಸ ಮಾಡಿದೆ. ಬಿ.ಎಲ್.ಸಂತೋಷ್ ನನ್ನ ಟಿಕೆಟ್ ತಪ್ಪಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇನ್ನು ಈ ಕುರಿತು ನಮ್ಮ ಪ್ರತಿನಿಧಿ ವಿಶ್ವನಾಥ್ ಹರಿಹರ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.
ಇಂದು ಗಣಿನಾಡು ಬಳ್ಳಾರಿ ಜಿಲ್ಲೆಗೆ ನಮೋ ಎಂಟ್ರಿ. ಬಿಜೆಪಿ ಅಭ್ಯರ್ಥಿ ಪರ ಮತ ಬೇಟೆ ನಡೆಸಲಿರೋ ಮೋದಿ. ಜಿಲ್ಲೆಯ 5 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಪರ ಮೋದಿ ಮತಬೇಟೆ. ಜಿಲ್ಲೆಯ ಮೀಸಲು ಕ್ಷೇತ್ರಗಳಲ್ಲಿ ಗರಿಗೆದರಿದ ಚುನಾವಣಾ ಕಾವು. ನಗರದ ಸತ್ಯಂ ಶಾಲೆ ಎದುರುಗಡೆ ಮೈದಾನದಲ್ಲಿ ಬಹಿರಂಗ ಸಭೆ. ಬಹಿರಂಗ ಸಭೆಯಲ್ಲಿ ಲಕ್ಷಾಂತರ ಜನ ಭಾಗಿಯಾಗುವ ಸಾಧ್ಯತೆ.
ಬಹುಮತದ ಸೀಟುಗಳನ್ನು ಗೆಲ್ಲುವುದೇ ನಮ್ಮ ಗುರಿ. 120 ದಾಟಿ 130 ಕ್ಷೇತ್ರಗಳವರೆಗೆ ಗೆಲ್ಲುವುದು ನಮ್ಮ ಗುರಿ. ಟ್ವಿಟರ್ ಸಂವಾದದಲ್ಲಿ ಬಿ.ಎಲ್.ಸಂತೋಷ ಹೇಳಿಕೆ. ಸಂತೋಷ, ಬಿಜೆಪಿ ರಾಷ್ಟ್ರೀಯ ಸಂಘಟನೆಯ ಪ್ರ.ಕಾರ್ಯದರ್ಶಿ. ಟ್ವಿಟರ್ ಸಂವಾದದಲ್ಲಿ BJP ಕಾರ್ಯಕರ್ತರ ಜೊತೆ ಸಂವಾದ.
ಇಂದು ಚಾಮರಾಜನಗರದ ಅಖಾಡಕ್ಕೆ ಕಿಚ್ಚ ಸುದೀಪ್ ಎಂಟ್ರಿ. ಜಿಲ್ಲೆಯ ನಾಲ್ಕೂ ಕ್ಷೇತ್ರದಲ್ಲಿ ನಟ ಕಿಚ್ಚ ಸುದೀಪ್ ರೋಡ್ ಶೋ. ನಾಯಕ ಸಮುದಾಯ, ಕಿಚ್ಚನ ಅಭಿಮಾನಿಗಳಿಗೆ ಬಿಜೆಪಿ ಗಾಳ. ಜಿಲ್ಲಾದ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸುದೀಪ್. ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಹನೂರಲ್ಲಿ ಪ್ರಚಾರ
Karnataka Assembly Election: ಗುಂಡ್ಲುಪೇಟಯಲ್ಲಿ ಚುನಾವಣಾ ಪ್ರಚಾರದ ಬಳಿಕ ಚಾಮರಾಜನಗರಕ್ಕೆ ಎಂಟ್ರಿ ಕೊಟ್ಟ ಸುದೀಪ್, ಸಚಿವ ವಿ. ಸೋಮಣ್ಣ ಪರ ಪ್ರಚಾರ ನಡೆಸಿದರು. ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳ ಜಮಾಯಿಸಿ ಕಿಚ್ಚ ಸುದೀಪ್ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.
ವಿಧಾನಸಭೆ ಚುನಾವಣೆಗೆ 6 ದಿನಗಳು ಬಾಕಿ ಇವೆ. ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ದಂಡೇ ರಾಜ್ಯದಲ್ಲಿ ಬೀಡು ಬಿಟ್ಟಿದೆ. ಮೇ 7ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮೂರು ದಿನಗಳು ಬಿಜೆಪಿ ನಾಯಕರು ಅಬ್ಬರದ ರೋಡ್ ಶೋ, ಸಭೆಗಳ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.
ಕಲ್ಬುರ್ಗಿಯಲ್ಲಿ ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ರ್ಯಾಲಿಗೆ ಜನಸಾಗರವೇ ಹರಿದುಬಂದಿದು, ರ್ಯಾಲಿ ವೇಳೆ ಪ್ರಿಯಾಂಕಾ ಗಾಂಧಿ ಭಾಷಣ ಸಾರ್ವಜನಿಕರು ಕೇಕೆ ಹಾಕುತ್ತಿರುವ ದೃಶ್ಯ ದಾರಿಯುದ್ದಕ್ಕೂ ಕಂಡು ಬಂದಿತು. ಇದೆ ವೇಳೆ ಪ್ರಿಯಾಂಕಾ ಗಾಂಧಿ ಮಾತನಾಡಿ ಶೇ.40ರಷ್ಟು ಸರಕಾರವನ್ನು ಕಿತ್ತೊಗೆಯಬೇಕಿದೆ ಎಂದು ಹೇಳಿದರು.
ದೇಶದಲ್ಲಿ ಯಾವ ಸಿಎಂ ದೊಡ್ಡಮಟ್ಟದಲ್ಲಿ ಸಾಲಮನ್ನಾ ಮಾಡಿಲ್ಲ. HDK ಏಕಾಂಗಿಯಾಗಿ ನಿಂತು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ರು. ದಯಮಾಡಿ ಜೆಡಿಎಸ್ ಪಕ್ಷದ ಬಗೆಗಿನ ಟೀಕೆಗಳನ್ನ ನಿಲ್ಲಿಸಿ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಬೆಂಬಲ ಇದೆ. ಇಲ್ಲಿಯೂ ಪ್ರಾದೇಶಿಕ ಪಕ್ಷ ಉಳಿಸಿ, ಬೆಳೆಸಿ ಎಂದು ಮನವಿ ಮಾಡಿದ್ರು.
ಬಜರಂಗದಳ ಬ್ಯಾನ್ ಮಾಡ್ತೀವಿ ಅನ್ನೋದೇ ಅಕ್ಷಮ್ಯ ಅಪರಾಧ. ಈ ವಿಚಾರದಲ್ಲಿ ಕಾಂಗ್ರೆಸ್ ತಕ್ಷಣ ಕ್ಷಮೆಯಾಚನೆ ಮಾಡಬೇಕು ಎಂದು ಚಿಕ್ಕಮಗಳೂರಲ್ಲಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಜರಂಗದಳ ಬ್ಯಾನ್ ವಿಚಾರ. 5 ವರ್ಷ ಅಧಿಕಾರದಲ್ಲಿದ್ದಾಗ ಬಜರಂಗದಳ ನೆನಪಾಗಲಿಲ್ವಾ ಎಂದು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ವಿರುದ್ಧ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.