Rain Effect: ಕಲ್ಪತರು ನಾಡಿನಲ್ಲಿ ಮಳೆಯ ಅಬ್ಬರದಿಂದಾಗಿ ರೈಲ್ವೆ ಭೂಕುಸಿತ ಕಂಡು ಬಂದಿದ್ದು ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿತ್ತು. ನೂತನ ಕೆ.ಎಸ್.ಆರ್ ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದರೆ, ಮಳೆಯಲ್ಲಿ ಕೊಚ್ಚಿ ಹೋಗಿರೋ.. ವಾಹನಗಳು, ಮನೆಯ ಒಳಗೆ ನುಗ್ಗಿರೋ ನೀರು ಜನರನ್ನು ಪರದಾಡುವಂತೆ ಮಾಡಿತು. ಜನ ನೀರು ಹೊರ ಹಾಕಲು ಹರಸಾಹಸ ಪಟ್ಟರು.
Byparjoy Cyclone: ಅರಬ್ಬಿ ಸಮುದ್ರದಲ್ಲಿ ಹುಟ್ಟಿಕೊಂಡಿರುವ ಬೈಪರ್ಜೋಯ್ ಚಂಡಮಾರುತ ನಾಳೆ ವೇಳೆಗೆ ಗುಜರಾತ್ ಕರಾವಳಿಯನ್ನು ಪ್ರವೇಶಿಸಬಹುದು ಎಂದು ಊಹಿಸಲಾಗಿದೆ. ಇದರ ಪರಿಣಾಮವಾಗಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನಲೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ ಭಾರತೀಯ ರೈಲ್ವೆ ಪರಿಸ್ಥಿತಿಯನ್ನು ನಿಭಾಯಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ.
ಚಿಕ್ಕಬಳ್ಳಾಪುರದ ಜಿಲ್ಲೆಯಲ್ಲಿ ಸುರಿದ ಮಳೆಯ ಭೂಮಿಯ ತೇವಾಂಶಕ್ಕೆ ಹೂ ಹೊಳಪು ಕಳೆದುಕೊಂಡಿದ್ರೆ, ಅತ್ತ ಜಿಲ್ಲೆಯಲ್ಲಿ ಹೂ ಇಳುವರಿ ದುಪ್ಟಟ್ಟಾಗಿದೆ.. ಹೊರ ರಾಜ್ಯ ಹಾಗು ಹೊರ ದೇಶಗಳಿಗೆ ರಪ್ತಾಗುತ್ತಿದ್ದ ಹೂಗಳನ್ನು ಮಾರುಕಟ್ಟೆಯಲ್ಲಿ ಕೇಳೋರೆ ಇಲ್ಲದೆ ತಾನು ತಂದ ಹೂಗಳನ್ನು ತಿಪ್ಪೆಗೆ ಸುರಿದು ಬರಿಗೈಯಲ್ಲಿ ಮನೆಕಡೆ ನಡೆಯುವಂತಾಗಿದೆ..
Rain Effect: ಕಿಮ್ಸ್ ಆಸ್ಪತ್ರೆಯ ನಿರ್ವಹಣೆಗಾಗಿ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಅನುದಾನ ಹರಿದು ಬಂದರು ಕೂಡಾ ಆ ಅನುದಾನ ಹರಿದು ಎಲ್ಲೋ ಸೇರುವುದರಿಂದ, ಮಳೆಯ ನೀರು ಮಾತ್ರ ಕಿಮ್ಸ್ ಆಸ್ಪತ್ರೆಯ ಒಳಗಡೆ ಸೇರುತ್ತಿದ್ದು ಕಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಇಲ್ಲಿನ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕೆ.ಆರ್ ಸರ್ಕಲ್ ಅಂಡರ್ ಪಾಸ್ನಲ್ಲಿ ಮುಳುಗಿ ಯುವತಿ ಮೃತಪಟ್ಟ ಹಿನ್ನಲೆ
ಅಂಡರ್ ಪಾಸ್ಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಜಾರಿಗೆ ಮುಂದಾದ ಬಿಬಿಎಂಪಿ
ನಗರದ ಅಂಡರ್ಪಾಸ್ಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆಹಾಕಿದ ಪಾಲಿಕೆ
ಅಂಡರ್ಪಾಸ್ಗಳಲ್ಲಿ ಸಿಸಿಟಿವಿ ಮೂಲಕ ನಿಗಾವಹಿಸುವಂತೆ ಡಿಸಿಎಂ ಸೂಚನೆ
ಮಳೆಯ ರೌದ್ರಾವತಾರಕ್ಕೆ ಟೆಕ್ಕಿ ಯುವತಿ ಸಾವು. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಡರ್ ಪಾಸ್ನಲ್ಲಿ ನೀರು ಆರೋಪ. ಮಳೆ ನೀರು ಸರಾಗ ಹೋಗಲು ಕ್ರಮ ಕೈಗೊಳ್ಳದ ಆರೋಪ. ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಬಿಬಿಎಂಪಿ ವಿರುದ್ಧ ಎಫ್ಐಆರ್. ಹಲಸೂರು ಗೇಟ್ ಠಾಣೆಗೆ ದೂರು ನೀಡಿದ ಮೃತಳ ಸಹೋದರ.
ಅಂಡರ್ ಪಾಸ್ನಲ್ಲಿ ನೀರು ನಿಂತು ಇನ್ಪೋಸಿಸ್ ಉದ್ಯೋಗಿ ಸಾವು ಪ್ರಕರಣ. ಇಂದು ಬಾನುರೇಖಾ ಮೃತದೇಹ ವಿಕ್ಟೋರಿಯಾಗೆ ಶಿಫ್ಟ್. ಮರಣೋತ್ತರ ಪರೀಕ್ಷೆಗೆ ಮೃತ ಬಾನುರೇಖಾ ಮೃತದೇಹ ರವಾನೆ. ಸದ್ಯ ಸೆಂಟ್ ಮಾರ್ಥಾಸ್ ಶವಾಗಾರದಲ್ಲಿ ಬಾನುರೇಖಾ ಮೃತದೇಹ. ಬೆಳಗ್ಗೆ 10 ಗಂಟೆಯ ನಂತರ ಬಾನುರೇಖಾ ಮರಣೋತ್ತರ ಪರೀಕ್ಷೆ. ಬಳಿಕ ಕುಟುಂಬಸ್ಥರಿಗೆ ಬಾನುರೇಖಾ ಮೃತದೇಹ ಹಸ್ತಾಂತರ.
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರು ಭಾಗದಲ್ಲಿ 2 ತಾಸಿಗೂ ಅಧಿಕ ಮಳೆಯಾಗಿದ್ದು ಹಲವೆಡೆ ರಸ್ತೆಗಳಿಗೆ ಮರಗಳು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು.
Bengaluru Rain: ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿ-ಬಿಟಿ ಹಬ್ ಎಂದೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರನ್ನು ಇಷ್ಟಪಡದವರೇ ಇಲ್ಲ. ಹಾಗೆಯೇ, ಮಳೆಗಾಲ ಬಂತೆಂದರೆ ಬೆಂಗಳೂರನ್ನು ಬೈಯ್ಯದವರೂ ಇಲ್ಲ. ಇದೀಗ ಬೆಂಗಳೂರಿನಲ್ಲಿ ಮಳೆಗಾಲದ ಎಫೆಕ್ಟ್ ಹೇಗಿರಲಿದೆ ಎಂಬ ಬಗ್ಗೆ ಬೆಚ್ಚಿಬೀಳಿಸಿರುವ ವರದಿಯೊಂದು ಬಿಡುಗಡೆ ಆಗಿದ್ದು, ಅದು ಬಿಬಿಎಂಪಿ ಅಧಿಕಾರಿಗಳ ನಿದ್ದೆಗೆಡಿಸಿದೆ.
ಗದಗದ ಹರ್ಲಾಪುರ ಗ್ರಾಮದಲ್ಲಿ ಮಳೆಯ ಅವಾಂತರ ಸೃಷ್ಟಿಸಿದೆ.. ಕಟಾವು ಆಗಿರುವ ಕಾಳುಗಳು ಹಾನಿಯಾಗಿದೆ.. ಪರಿಹಾರ ಸಿಗೋದು ಅನುಮಾನ ಎಂದು ಅಧಿಕಾರಿಗಳು ಹೇಳಿದ್ದು ಪರಿಹಾರ ಕೊಡಿಸಿ ಎಂದು ಹರ್ಲಾಪುರ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ. ಬೆಂಗಳೂರಿನಲ್ಲಿ ಧೋ ಎಂದು ಸುರಿದ ಮಳೆಗೆ ಜನ ತತ್ತರ. ಬೆಂಗಳೂರಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ. ವೀಕೆಂಡ್ ಮೂಡ್ನಲ್ಲಿದ್ದ ಸಿಲಿಕಾನ್ ಸಿಟಿ ಮಂದಿಗೆ ಮಳೆ ಅಡ್ಡಿ.
ಸಕ್ಕರೆ ನಾಡು ಮಂಡ್ಯದಲ್ಲಿ ಬಾರಿ ಮಳೆಯ ಅವಾಂತರ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರೋ ತೊಣ್ಣೂರು ಕೆರೆ. ಸ್ಥಳಕ್ಕೆ ಶಾಸಕ ಸಿ.ಎಸ್. ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಮೆಜೆಸ್ಟಿಕ್, ಕಾರ್ಪೊರೇಷನ್, ಶಾಂತಿನಗರ, ಚಾಮರಾಜಪೇಟೆ, ಟ್ರಿನಿಟಿ, MG ರೋಡ್, ಬಿಟಿಎಂ ಲೇಔಟ್, ಹೆಚ್ಎಸ್ಆರ್ ಲೇಔಟ್ ಸೇರಿದಂತೆ ಎಲ್ಲೆಡೆ ಭಾರೀ ಮಳೆಯಾಗಿದೆ..
ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿದ ರೈತಾಪಿ ವರ್ಗಕ್ಕೆ ಈಗ ಮತ್ತೆ ಗಾಯದ ಮೇಲೆ ಬರೆ ಬಿದ್ದಿದೆ. ಸಾಲಸೋಲ ಮಾಡಿ ರೈತರು ಬೆಳೆ ಬೆಳೆದಿದ್ದು, ಅತಿಯಾದ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಯಾದಗಿರಿ ರೈತರ ಸ್ಥಿತಿ.
ಅಥಣಿ ತಾಲೂಕಿನಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಯಲ್ಲಮ್ಮವಾಡಿ ಕೆರೆ ತುಂಬಿ ದೇವಸ್ಥಾನ ಮುಂಭಾಗದ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ದೇವಸ್ಥಾನ ಸುತ್ತಲೂ ನೀರು ಆವರಿಸಿದೆ. ನವರಾತ್ರಿ ಹಬ್ಬದ ಪ್ರಯುಕ್ತ ದಿನನಿತ್ಯ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಸದ್ಯ ದೇವಸ್ಥಾನ ಜಲ ದಿಗ್ಬಂಧನಗೊಂಡ ಹಿನ್ನೆಲೆ ಭಕ್ತರು ಹಳ್ಳ ದಾಟಿಕೊಂಡು ದೇವರ ದರ್ಶನವನ್ನು ಪಡೆಯುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.