ರಮೇಶ್ ಜಾರಕಿಹೊಳಿ ಅವರು ಮಂತ್ರಿ ಸ್ಥಾನ ಕಳೆದುಕೊಂಡಿದ್ದು, ಈಗ ಅದು ಮತ್ತೆ ಸಿಗುತ್ತಿಲ್ಲವಲ್ಲ ಎಂಬ ಹತಾಶೆಯಲ್ಲಿ ಮಾತನಾಡಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಅವರ ಪಕ್ಷದವರು ಅವರಿಗೆ ಉತ್ತಮವಾದ ಚಿಕಿತ್ಸೆ ಕೊಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ನಾನೇ ಟಿಕೆಟ್ ಕೊಡ್ಸಿದ್ದೆ. ಗ್ರಾಮೀಣ ಶಾಸಕಿ ಸಂಬಂಧ ರಾಜ್ಯದಲ್ಲಿ ಕಾಂಗ್ರೆಸ್ ಹಾಳಾಗಿದೆ. ಕಾಂಗ್ರೆಸ್ ರಾಜಕಾರಣ ಮುಂದೆಯು ಹಾಳಾಗುತ್ತೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಡಿಕೆಶಿ ಆಂಡ್ ಕಂಪನಿಯಿಂದ ರಾಜಕೀಯ ಹಾಳಾಯ್ತು. ಸಿಡಿ ವಿಚಾರದಲ್ಲಿ ತಪ್ಪಿದ್ರೆ ನನ್ನ ರುಂಡ ತೆಗೆಯುತ್ತೇನೆ. ಸಿಡಿ ಪ್ರಕರಣವನ್ನ ಸಂಪೂರ್ಣವಾಗಿ ತನಿಖೆ ಮಾಡಲಿ. ನಾಳೆಯಿಂದ ಜಾತಿ ಸಂಘರ್ಷ ಆದ್ರೆ ಅವರಿಬ್ರು ಕಾರಣ. ಡಿಕೆ ಶಿವಕುಮಾರ್ ಮತ್ತು ಗ್ರಾಮೀಣ ಶಾಸಕಿ ಕಾರಣ ಅಂತ ರಮೇಶ್ ಜಾರಕಿಹೊಳಿ ಹೇಳಿದ್ರು.
ಇದು ಪಕ್ಷದ ಯುದ್ಧ ಅಲ್ಲ, ಇದೊಂದು ವ್ಯಕ್ತಿಯ ಯುದ್ಧ. ಡಿಕೆಶಿ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಯುದ್ಧ. ಮಿಸ್ಟರ್ ಶಿವಕುಮಾರ್ ರಾಜಕಾರಣಿ ಆಗೋಕೆ ಯೋಗ್ಯರಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದ ನಾ* ಡಿಕೆಶಿ ಎಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಮಾಡಿ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಹೇಳಿದ ಪ್ರತಿ ಶಬ್ದವೇ ನಮ್ಮ ಮಾತು ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ರು. ಅಮಿತ್ ಶಾ ಅವರು 15 ಕ್ಷೇತ್ರ ಗೆಲ್ಲಲು ಸಲಹೆ ಕೊಟ್ಟಿದ್ದಾರೆ. ಅಮಿತ್ ಶಾ ಸಲಹೆಯಂತೆ ನಾವು ಕೆಲಸ ಮಾಡ್ತೇವೆ ಎಂದ್ರು.
ಬಿಜೆಪಿಗರು ಪ್ರತಿ ಮತದಾರನಿಗೆ 6000 ರೂಪಾಯಿ ಲಂಚದ ಬಹಿರಂಗ ಆಮಿಷದ ಮೂಲಕ ರಾಜ್ಯದ 5 ಕೋಟಿ ಮತದಾರರನ್ನು ಒಟ್ಟು 30 ಸಾವಿರ ಕೋಟಿ ಕೊಟ್ಟು ಖರೀದಿ ನಡೆಸುತ್ತಿದ್ದಾರೆ ಎಂಬ ಆರೋಪ ಮಾಡಿರುವ ಕಾಂಗ್ರೆಸ್ ಇಂದು ನಗರದ ಹೈ ಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಮೈದಾನದಲ್ಲಿ ರಮೇಶ್ ಜಾರಕಿಹೊಳಿ ಅಭಿಮಾನಿ ಬಳಗದಿಂದ 'ಅಭಿಮಾನದ ಕಾರ್ಯಕರ್ತರ ಸಮಾವೇಶ' ಹೆಸರಿನಲ್ಲಿ ಅದ್ಧೂರಿ ಸಮಾವೇಶ ಕಾರ್ಯಕ್ರಮವೊಂದನ್ನು ಈ ಕಾರ್ಯಕ್ರಮವು ಆಯೋಜನೆ ಮಾಡಲಾಗಿತ್ತು.
ಸಚಿವ ಸ್ಥಾನ ಸಿಗಲಿ ಬಿಡಲಿ, ನನಗೆ ಪಕ್ಷ ಸಂಘಟನೆ ಮುಖ್ಯ. ಇದರಿಂದ ಬೆಳಗಾವಿ ಗ್ರಾಮೀಣದಿಂದ ಪ್ರಾರಂಭ ಮಾಡಲಾಗಿದೆ. ಜನಸಾಮಾನ್ಯರ ಪ್ರಾಮಾಣಿಕ ಕೆಲವನ್ನು ಮಾಡಬೇಕು. ಹಣದಿಂದ ಚುನಾವಣೆಯಲ್ಲಿ ಆಯ್ಕೆ ಆಗುತ್ತೇನೆ ಎಂದರೆ ಆಗುವುದಿಲ್ಲ.
ರಮೇಶ್ ಜಾರಕಿಹೊಳಿ ಈ ಭಾಗದ ಪ್ರಬಲ ಹಿಂದುಳಿದ ನಾಯಕ. ಫೋನ್ಲ್ಲಿ ಮಾತನಾಡಿದ್ದೇವೆ. ಆದರೆ ಜೆಡಿಎಸ್ ಸೇರ್ಪಡೆ ಬಗ್ಗೆ ಚರ್ಚೆ ಆಗಿಲ್ಲ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಜೆಡಿಎಸ್ ಸೇರ್ಪಡೆ ಆಗುವವರ ಪಟ್ಟಿ ದೊಡ್ಡದಿದೆ. ಈಗಾಗಲೇ ಬಹಿರಂಗ ಪಡಿಸಲ್ಲ ಎಂದಿದ್ದಾರೆ.
ಉಮೇಶ್ ಕತ್ತಿ ನಿಧನದ ಬಳಿಕ ಬೆಳಗಾವಿ ಉಸ್ತುವಾರಿ ಗದ್ದುಗೆ ಯಾರಿಗೆ..? ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇವರಿಬ್ಬರಲ್ಲಿ ಯಾರಿಗೆ ಸಿಗುತ್ತೆ ಮಂತ್ರಿಸ್ಥಾನ..? ಯಾರು ಬೆಳಗಾವಿ ಅಧಿಪತಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.