ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ಕೊನೆಗೂ ಮೈಸೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗುಜರಾತ್ನಲ್ಲಿ ಅಡಗಿ ಕುಳಿತಿದ್ದ ಕಿರಾತಕ ರವಿಯನ್ನ ಮೈಸೂರಿನ ಎಸಿಪಿ ಎಂ.ಶಿವಶಂಕರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ 2 ದಿನಗಳ ಕಾಲ ರಾಮನಗರದಲ್ಲೇ ಅಡಗಿ ಕುಳಿತಿದ್ದ ಅನ್ನೋದು ಬಯಲಾಗಿದೆ. ಮೈಸೂರು ಪೊಲೀಸರ ತಂಡ ಸ್ಯಾಂಟ್ರೋ ರವಿ ಬಂಧನಕ್ಕೆ ಆಗಮಿಸಿದ್ದು, ಪೊಲೀಸರು ಬರುತ್ತಿರುವ ವಿಚಾರ ತಿಳಿದು ಸ್ಯಾಂಟ್ರೋ ಎಸ್ಕೇಪ್ ಆಗಿದ್ದಾನೆ.
ವೇಶ್ಯಾವಾಟಿಕೆಯ ಮಧ್ಯವರ್ತಿ ಸ್ಯಾಂಟ್ರೋ ರವಿ ಹಾಗೂ ಆತನೊಂದಿಗೆ ಸಂಬಂಧ ಹೊಂದಿದ್ದ ಜನಪ್ರತಿನಿಧಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕವು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬುಧವಾರದಂದು ಪ್ರತಿಭಟನೆ ನಡೆಸಿತು.
ಸ್ಯಾಂಟ್ರೋ ರವಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯ ಕೇಳಿ ಬಂದಿದೆ. ಸ್ಯಾಂಟ್ರೋ ರವಿ ವಿರುದ್ಧ ಮೈಸೂರು ಒಡನಾಡಿ ಸಂಸ್ಥೆ ED, ITಗೆ ದೂರು ನೀಡಿದೆ. ಕೇಂದ್ರ ಗೃಹ ಸಚಿವ ʻಅಮಿತ್ ಶಾʼಗೂ ದೂರು ನೀಡಲಾಗಿದೆ. ಅನೈತಿಕ ಚಟುವಟಿಗಳಿಕೆಗಾಗಿ ಹೆಣ್ಣು ಮಕ್ಕಳ ಬಳಕೆ ಆರೋಪ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.
ವೇಶ್ಯಾವಾಟಿಕೆ ಮತ್ತು ವರ್ಗಾವಣೆ ದಂಧೆಯ ಕಿಂಗ್ ಪಿನ್ ಎನಿಸಿಕೊಂಡಿರುವ ಸ್ಯಾಂಟ್ರೊ ರವಿ ಹೆಸರು ಈಗ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ರಾಜಕೀಯ ಕಿತ್ತಾಟ ಶುರುವಾಗಿದ್ದು ಬಿಜೆಪಿ ನಾಯಕರ ವಿರುದ್ಧ ವಿಪಕ್ಷ ನಾಯಕರು ಕೆಂಡಕಾರುತ್ತಿದ್ದಾರೆ. ಈ ಬಗ್ಗೆ ಗೃಹ ಸಚಿವರು ಕೂಡ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ
ಪ್ರಭಾವಿಗಳೊಂದಿಗೆ ಸ್ಯಾಂಟ್ರೋ ರವಿ ಲಿಂಕ್ ಕೇಸ್ ವಿಚಾರ..
ಯಾರು ಏನೆ ಹೇಳಿದ್ರು ತನಿಖೆಯಲ್ಲಿ ಸಂಪೂರ್ಣ ಮಾಹಿತಿ...
ಬೀದರ್ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ...
20 ವರ್ಷದಲ್ಲಿ ಯಾರ ಯಾರ ಜೊತೆಗೆ ರವಿಗೆ ಸಂಬಂಧವಿದೆ...
ಈ ಬಗ್ಗೆ ತನಿಖೆಯಾಗಲಿ ಅಂತ ಹೇಳಿದ್ದೆನೆ ಎಂದ ಸಿಎಂ...
ಯಾರಿದ್ದಾರೆ ಕಾದೂ ನೋಡಿ ಎಂದು ಬಾಂಬ್ ಹಾಕಿದ ಸಿಎಂ...
ಪರೋಕ್ಷವಾಗಿ ಮಾಜಿ ಸಿಎಂ ಎಚ್ಡಿಕೆ ಗೆ ಟಾಂಗ್ ಕೊಟ್ಟ ಸಿಎಂ
ಸದ್ಯ ರಾಜ್ಯದಲ್ಲಿ ಸುದ್ದಿಯಲ್ಲಿರುವ ಹೆಸರು ಸ್ಯಾಂಟ್ರೋ ರವಿ. ಕುಮಾರಸ್ವಾಮಿ ಸ್ಯಾಂಟ್ರೋ ರವಿಯ ಬಾಂಬ್ ಸಿಡಿಸಿದ್ದೇ ತಡ ಎಲ್ಲರ ಬಾಯಲ್ಲೂ ಅದೇ ಮಾತು. ಸ್ಯಾಂಟ್ರೋ ರವಿಯ ವಿರುದ್ಧ ಆತನ ಪತ್ನಿ ಮಾಡಿರುವ ಆರೋಪ ಈಗ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ಗೆ ಉರುಳಾಗುವ ಸಾಧ್ಯತೆ ಇದೆ. ಸ್ಯಾಂಟ್ರೋ ರವಿಯ ಷಡ್ಯಂತ್ರದಿಂದ ಕಾಟನ್ ಪೇಟೆ ಠಾಣೆಯಲ್ಲಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಮೈಸೂರಿನ ವಿಜಯ ನಗರ ಠಾಣೆಯಲ್ಲಿ ಆತನ ಪತ್ನಿ ರಶ್ಮಿ ದೂರು ನೀಡಿದ್ದರು.
HDK ಮತ್ತು ಸಚಿವ ಆರಗ ನಡುವೆ ʻಸ್ಯಾಂಟ್ರೋʼ ಸಮರ ತಾರಕಕ್ಕೇರಿದೆ. HDK ಆರೋಪ ಸುಳ್ಳು.. ಸಾಕ್ಷಿ ನೀಡಲಿ ಎಂದು ಎಚ್ಡಿಕೆಗೆ ಆರಗ ಸವಾಲು ಹಾಕಿದ್ದಾರೆ. HDK ಅತ್ಯಂತ ಬೇಜವಾಬ್ದಾರಿಯಿಂದ ಹೇಳಿಕೆ ಕೊಟ್ಟಿದ್ದಾರೆ. ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎನ್ನವುದು ಸುಳ್ಳು ಎಂದು ಆರಗ ಹೇಳಿದ್ದಾರೆ..
ತಮ್ಮ ಮಗನ ಸ್ವೀಟ್ ಬ್ರದರ್ನನ್ನು ರಕ್ಷಿಸುತ್ತಿರುವುದು ಯಾರು ಸಿಎಂ ಬಸವರಾಜ ಬೊಮ್ಮಾಯಿಯವರೇ? ಆತನನ್ನು ಮುಟ್ಟಿದರೆ 'ಸಿಡಿ ಕ್ರಾಂತಿ' ಆಗಿಬಿಡುವ ಭಯವೇ? ಸರ್ಕಾರದ ಅಕ್ರಮಗಳು ಹೊರಬರುವ ಆತಂಕವೇ? ಎಂದು ಕಾಂಗ್ರೆಸ್ ಟೀಕಿಸಿದೆ.
ಇದುವರೆಗೂ ಚೀಫ್ ಮಿನಿಸ್ಟರ್, ಚೀಫ್ ಸಕ್ರೆಟರಿ ಎಂಬ ಸಾಂವಿಧಾನಿಕ ಹುದ್ದೆಗಳಿದ್ದವು. ಬಿಜೆಪಿ ಆಡಳಿತಕ್ಕೆ ಬಂದಮೇಲೆ "ಚೀಫ್ ಬ್ರೋಕರ್" ಎಂಬ ಹೊಸ ಹುದ್ದೆ ಸೃಷ್ಟಿಸಿ, ಅದಕ್ಕೆ ಸ್ಯಾಂಟ್ರೋ ರವಿಯನ್ನು ನೇಮಕ ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.