ಇತ್ತೀಚೆಗೆ ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಅವರು ಸದರಿ ಜಾಗ ಸೇರಿದಂತೆ ಇನ್ನಿತರೆ ಒತ್ತುವರಿ ಮತ್ತು ಬಿಡಿಎ ಜಾಗವನ್ನು ಕಬ್ಜ ಮಾಡಿಕೊಂಡಿರುವ ಪ್ರದೇಶಗಳಿಗೆ ಭೇಟಿ ನೀಡಿ, ಕೂಡಲೇ ಇಂತಹ ಜಾಗಗಳನ್ನು ಮರುವಶಕ್ಕೆ ಪಡೆದುಕೊಳ್ಳಬೇಕೆಂದು ಬಿಡಿಎ ಅಧಿಕಾರಿಗಳು ಮತ್ತು ಎಂಜಿನಿಯರ್ ಗಳಿಗೆ ಸೂಚನೆ ನೀಡಿದ್ದರು.
ಬೆಂಗಳೂರಿನಲ್ಲಿ ಮತ್ತೆ ಧಾರಾಕಾರ ಮಳೆಯಾಗಿದ್ದು ಸಂಜೆ ಸುರಿದ ಮಳೆಗೆ ಸುಲ್ತಾನ್ ಪೇಟೆ ರಸ್ತೆ ಜಲಾವೃತವಾಗಿದೆ. ಚಿಕ್ಕಪೇಟೆಯಿಂದ ಕಾಟನ್ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೂರು ಅಡಿಯಷ್ಟು ನೀರು ನಿಂತಿದೆ..
ರಸ್ತೆಗುಂಡಿಗಳು ಸಾವಿನ ಗುಂಡಿಗಳಾಗಿವೆ. ನಗರದ ಲುಲೂ ಮಾಲ್ ಎದುರಿನ ರಸ್ತೆಯಲ್ಲಿ ಗುಂಡಿಗೆ ಇನ್ನೊಂದು ಜೀವ ಬಲಿಯಾದ ಮೇಲೆ ಎಚ್ಚೆತ್ತುಕೊಳ್ಳುವ ನಾಟಕ ನಡೆದಿದೆ. ಶಾಶ್ವತ ಪರಿಹಾರ ಎಲ್ಲಿ? ಬೆಂಗಳೂರಿನಲ್ಲಿ ಕೊಲೆಪಾತಕ ಗುಂಡಿಕೂಪಗಳು ಸರಣಿ ಸಾವುಗಳಿಗೆ ಕಾರಣವಾಗಿದ್ದರೆ, ಅದೇ ಗುಂಡಿಗಳು ಕೆಲವರಿಗೆ ಕಲ್ಪವೃಕ್ಷವಾಗಿವೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ನಲ್ಲಿ ಬರೆದಿದ್ದಾರೆ.
ಸಿಲಿಕಾನ್ ಸಿಟಿಯನ್ನು ಬಿಟ್ಟೂ ಬಿಡದೆ ಕಾಡ್ತಿದೆ ರಣಚಂಡಿ ಮಳೆ! ಧಾರಾಕಾರ ಮಳೆಗೆ ನಗರದ ಹಲವು ರಸ್ತೆಗಳು ಜಲಾವೃತವಾಗಿದ್ದು ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ. ಬೆಂಗಳೂರಿನಲ್ಲಿ ಧೋ ಎಂದು ಸುರಿದ ಮಳೆಗೆ ಜನ ತತ್ತರ. ಬೆಂಗಳೂರಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ. ವೀಕೆಂಡ್ ಮೂಡ್ನಲ್ಲಿದ್ದ ಸಿಲಿಕಾನ್ ಸಿಟಿ ಮಂದಿಗೆ ಮಳೆ ಅಡ್ಡಿ.
ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಗರ್ಜಿಸಲಿದೆ.. ದಸರಾ ಹಬ್ಬ ಮುಗಿದ ಬೆನ್ನಲ್ಲೇ ಡೆಮಾಲಿಷನ್ 2.O ನಡೆಯುತ್ತಿದೆ. ಸ್ಟೇ ತಂದವರ ಮೇಲೆ ಬಿಬಿಎಂಪಿ ಬುಲ್ಡೋಜರ್ ಬ್ರಹ್ಮಾಸ್ತ್ರ ಪ್ರಯೋಗಿಸಿದೆ..
ಸೆ.26 ರಿಂದ 28ರವರೆಗೆ ಗಣ್ಯ ವ್ಯಕ್ತಿಗಳು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಕಂಟ್ರೋಲ್ಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಕಬ್ಬನ್ ಪಾರ್ಕ್, ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಏಕಮುಖ ರಸ್ತೆಗಳನ್ನು ದ್ವಿಮುಖ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮತ್ತೆ ಹೆಚ್ಚಾಗಿದ್ದು ಸೋಶಿಯಲ್ ಮೀಡಿಯಾ ಸೆಲ್ ಇದ್ರೂ ಪ್ರಯೋಜನಕ್ಕೆ ಬಾರದಂತಾಗಿದೆ. ಪ್ರಾಣವನ್ನು ಲೆಕ್ಕಿಸದೆ ವ್ಹೀಲಿಂಗ್ ಮಾಡುವ ಪುಂಡರು ಒಂದೆಡಯಾದರೆ ಅವರ ಡೆಡ್ಲಿ ವ್ಹೀಲಿಂಗ್ ಮಾಡುವ ವಿಡಿಯೋಗಳನ್ನು ಸೆರೆ ಹಿಡಿಯುವವರೂ ಮತ್ತೊಂದೆಡೆ... ಹಾಡು ಹಗಲೇ ವ್ಹೀಲಿಂಗ್ ಮಾಡುವ ಪುಂಡರಿಗಿಲ್ಲವೇ ಭಯ... ಪೊಲೀಸ್ ಇಲಾಖೆಗೆ ಇವರನ್ನು ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲವೇ?
SWAT ತಂಡವು ತುರ್ತು ಪರಿಸ್ಥಿತಿ, ವಿಶೇಷ ಕರ್ತವ್ಯಗಳು, ಭಯೋತ್ಪಾದಕ ಮತ್ತು ನಕ್ಸಲ್ ಚಟುವಟಿಕೆಗಳು, ಸಮಾಜವಿರೋಧಿ ಚಟುವಟಿಕೆಗಳು, ರಾಜ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮತ್ತು ಭದ್ರತೆಯನ್ನು ಖಚಿತಪಡಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.