ಮುಂದಿನ ಐದು ವರ್ಷಗಳಲ್ಲಿ 8 ಲಕ್ಷ ಇ.ವಿ. ಬಸ್ ಸೇವೆ ಲಭ್ಯ

ಯಾವುದೇ ಬದಲಾವಣೆ ಜನಕೇಂದ್ರಿತವಾಗಿರಬೇಕು. ಬಳಕೆದಾರರಿಗೆ ಹೊಸ ಪರಿವರ್ತನೆಯು ಕೊಡುವ ಹಿತಕರ ಅನುಭವ ಮುಖ್ಯವಾಗುತ್ತದೆ. ಸಂಚಾರ ದಟ್ಟಣೆ ಮತ್ತು ಮಾಲಿನ್ಯದಿಂದ ಬಳಲುತ್ತಿರುವ ಭಾರತಕ್ಕೆ ಸುಗಮ ಸಂಚಾರ ವ್ಯವಸ್ಥೆಗೆ ಇ.ವಿ. ಅನಿವಾರ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.  

Written by - Prashobh Devanahalli | Last Updated : Nov 20, 2024, 07:35 PM IST
    • ಮುಂದಿನ ಐದು ವರ್ಷಗಳಲ್ಲಿ 8 ಲಕ್ಷ ವಿದ್ಯುತ್ ಚಾಲಿತ ಬಸ್ಸುಗಳು ರಸ್ತೆಗಿಳಿಯಲಿವೆ
    • ನಮ್ಮ ಯಾತ್ರಿ' ಕಂಪನಿಯ ಮುಖ್ಯಸ್ಥ ಎಂ ಎಸ್ ಶಾನ್ ಹೇಳಿಕೆ
    • 'ಇ.ವಿ. ಮತ್ತು ಭವಿಷ್ಯದ ಸಂಚಾರ ವ್ಯವಸ್ಥೆ' ಗೋಷ್ಠಿ
ಮುಂದಿನ ಐದು ವರ್ಷಗಳಲ್ಲಿ 8 ಲಕ್ಷ ಇ.ವಿ. ಬಸ್ ಸೇವೆ ಲಭ್ಯ title=
File Photo

ಬೆಂಗಳೂರು: ಭಾರತದಲ್ಲಿ ಇ.ವಿ. ವಾಹನಗಳು ಜನಪ್ರಿಯವಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ 8 ಲಕ್ಷ ವಿದ್ಯುತ್ ಚಾಲಿತ ಬಸ್ಸುಗಳು ರಸ್ತೆಗಿಳಿಯಲಿವೆ ಎಂದು 'ನಮ್ಮ ಯಾತ್ರಿ' ಕಂಪನಿಯ ಮುಖ್ಯಸ್ಥ ಎಂ ಎಸ್ ಶಾನ್ ಬುಧವಾರ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ನಡೆದ 'ಇ.ವಿ. ಮತ್ತು ಭವಿಷ್ಯದ ಸಂಚಾರ ವ್ಯವಸ್ಥೆ' ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: ಅಭಿಮಾನಿ ದೇವರುಗಳಿಗೆ ಥ್ಯಾಂಕ್ಸ್‌ ಹೇಳಿದ ʼಭೈರತಿ ರಣಗಲ್ʼ ಶಿವಣ್ಣ..! 

ಯಾವುದೇ ಬದಲಾವಣೆ ಜನಕೇಂದ್ರಿತವಾಗಿರಬೇಕು. ಬಳಕೆದಾರರಿಗೆ ಹೊಸ ಪರಿವರ್ತನೆಯು ಕೊಡುವ ಹಿತಕರ ಅನುಭವ ಮುಖ್ಯವಾಗುತ್ತದೆ. ಸಂಚಾರ ದಟ್ಟಣೆ ಮತ್ತು ಮಾಲಿನ್ಯದಿಂದ ಬಳಲುತ್ತಿರುವ ಭಾರತಕ್ಕೆ ಸುಗಮ ಸಂಚಾರ ವ್ಯವಸ್ಥೆಗೆ ಇ.ವಿ. ಅನಿವಾರ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇ.ವಿ. ವಾಹನಗಳು ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತಿದೆ. ಈ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಬಂಡವಾಳ ಹೂಡಿಕೆ  ಹೆಚ್ಚಾಗಬೇಕಾದುದು ಅನಿವಾರ್ಯ. ಇದು ಅಂತಿಮವಾಗಿ ಸುಸ್ಥಿರ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂಡೋಫಾಸ್ಟ್ ಎನರ್ಜಿ ಕಂಪನಿಯ ಸಿಇಒ ಅನಂತ್ ಬಡಿಜಾತ್ಯ ಮಾತನಾಡಿ, “ಭಾರತವು ಇ.ವಿ. ವಾಹನಗಳಿಗೆ ಒಂದು ಅನನ್ಯ ಮಾರುಕಟ್ಟೆ ಆಗಿದೆ. ಇಲ್ಲಿ ಶೇ.7ರಷ್ಟು ದ್ವಿಚಕ್ರ ವಾಹನಗಳು ಇವಿ ಆಗಿದ್ದು, ತ್ರಿಚಕ್ರ ವಾಹನಗಳು ಮತ್ತು ಕಾರುಗಳು ಕೂಡ ಹೆಚ್ಚಾಗಿ ಇ.ವಿ.ಗೆ ಹೊರಳಿ ಕೊಳ್ಳುತ್ತಿವೆ. ಈಗ ಕೇವಲ ಎರಡು ನಿಮಿಷಗಳಲ್ಲಿ ಬ್ಯಾಟರಿ ಚಾರ್ಜಿಂಗ್ ಮಾಡುವಂಥ ತಂತ್ರಜ್ಞಾನ ಬಂದಿದೆ ಎಂದರು.

2 ಮತ್ತು 3ನೇ ಸ್ತರದ ನಗರಗಳಲ್ಲಿ ಕೂಡ ಈಗ ಇ.ವಿ. ವಾಹನಗಳು ವ್ಯಾಪಕವಾಗುತ್ತಿವೆ. ಆದರೆ ಶೇ.18ರಷ್ಟಿರುವ ಜಿ.ಎಸ್.ಟಿ. ಗ್ರಾಹಕರಿಗೆ ಹೊರೆಯಾಗಿದೆ. ಸರಕಾರಗಳು ಇದನ್ನು ಬಗೆಹರಿಸಬೇಕು ಎಂದು ಅಭಿಪ್ರಾಯಪಟ್ಟರು.

ರ್‍ಯಾಪಿಡೋ ಕಂಪನಿಯ ಸಿಇಒ ಅರವಿಂದ್ ಸಂಕಾ ಮಾತನಾಡಿ, ಸಂಚಾರ ಸಮಸ್ಯೆಗೆ ಇ.ವಿ. ವಾಹನಗಳೇ ಪರಿಹಾರ. ಇವು ಜತೆಯಲ್ಲೇ ಸಂಪಾದನೆಯ ಅವಕಾಶಗಳನ್ನೂ ಸೃಷ್ಟಿಸುತ್ತಿವೆ. ಕಟ್ಟಕಡೆಯ ಜಾಗಕ್ಕೆ ಸಂಪರ್ಕ ವ್ಯವಸ್ಥೆ ಒದಗಿಸುವ ಸಾಧ್ಯತೆ ಇ.ವಿ. ಕ್ಷೇತ್ರಕ್ಕಿದೆ ಎಂದರು.

ರೆವ್ ಫಿನ್ ಕಂಪನಿಯ ಸಂಸ್ಥಾಪಕ ಸಮೀರ್ ಅಗರವಾಲ್, ಒಂದು ಉತ್ಪನ್ನದ ಸುತ್ತ ಇರುವ ಮೂಲಸೌಕರ್ಯ ಯಾವಾಗಲೂ ಮುಖ್ಯ ಪಾತ್ರ ವಹಿಸುತ್ತದೆ. ಇ.ವಿ.ಯಲ್ಲಿ ಬ್ಯಾಟರಿ ಚಾರ್ಜಿಂಗ್, ಸ್ವಾಪಿಂಗ್, ವಿಮೆ ಮತ್ತು ದುರಸ್ತಿಯ ಸವಾಲುಗಳಿವೆ ಎಂದು ಗಮನ ಸೆಳೆದರು.

ಇದನ್ನೂ ಓದಿ: ಇದೇ ವಿಚಾರಕ್ಕೆ ಬಾಯ್ಸ್‌ಗೆ ʼಚೋಟಿ.. ಮೋಟಿ ಹುಡ್ಗಿರುʼ ಅಂದ್ರೆ ತುಂಬಾ ಇಷ್ಟ..!

ಬೌನ್ಸ್  ಸಹ ಸಂಸ್ಥಾಪಕ ವಿವೇಕಾನಂದ ಹಲ್ಲೇಕೆರೆ ಗೋಷ್ಠಿಯನ್ನು ನಿರ್ವಹಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News