Bajaj CNG Bike: ಶೀಘ್ರದಲ್ಲೇ ಮಾರುಕಟ್ಟೆಗಿಳಿಯಲಿದೆ ವಿಶ್ವದ ಮೊಟ್ಟಮೊದಲ CNG Bike

Bajaj CNG Bikeಭಾರತದ ಮುಂಚೂಣಿಯಲ್ಲಿರುವ ಆಟೋಮೊಬೈಲ್ ಕಂಪನಿ ಬಜಾಜ್ ಆಟೋ ವಿಶ್ವದ ಮೊಟ್ಟಮೊದಲ ಸಿಎನ್ಜಿ ಬೈಕ್ (World's First CNG Bike) ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಹಿಂದೆ ಈ ಬೈಕ್ ಅನ್ನು 2025 ರಲ್ಲಿ ಬಿಡುಗಡೆಯಾಗುವುದರ ಕುರಿತು ಚರ್ಚೆಗಳು ನಡೆದಿದ್ದವು , ಆದರೆ ಇದೀಗ  ಕಂಪನಿಯು ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುವ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. (Technology News In Kannada)  

Written by - Nitin Tabib | Last Updated : Mar 9, 2024, 05:58 PM IST
  • ಈ ಬೈಕ್ ಹೇಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಅತ್ಯಂತ ವಿಶೇಷವಾದ ಸಿಎನ್‌ಜಿ ತಂತ್ರಜ್ಞಾನವನ್ನು
  • ಈ ಬೈಕ್‌ನಲ್ಲಿ ಸುರಕ್ಷಿತ ರೀತಿಯಲ್ಲಿ ಅಳವಡಿಸಬೇಕಾಗುತ್ತದೆ ಎಂದು ಬಜಾಜ್ ಕಂಪನಿ ಹೇಳಿದೆ.
  • ಬೈಕ್‌ನ ಎಂಜಿನ್‌ನ ಸಾಮರ್ಥ್ಯ ಏನೆಂದು ಕಂಪನಿಯು ಇನ್ನೂ ಹೇಳಿಲ್ಲ,
  • ಆದರೆ ಭವಿಷ್ಯದಲ್ಲಿ ಒಂದಕ್ಕಿಂತ ಹೆಚ್ಚು ಸಿಎನ್‌ಜಿ ಬೈಕ್‌ಗಳನ್ನು ತರಬಹುದು ಎಂದು ಅದು ಖಂಡಿತವಾಗಿಯೂ ಹೇಳಿದೆ.
Bajaj CNG Bike: ಶೀಘ್ರದಲ್ಲೇ ಮಾರುಕಟ್ಟೆಗಿಳಿಯಲಿದೆ ವಿಶ್ವದ ಮೊಟ್ಟಮೊದಲ CNG Bike title=

Bajaj CNG Bike: ಭಾರತದಲ್ಲಿ ಸಿಎನ್ಜಿ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅನೇಕ ಜನರು CNG ಬಳಕೆಯ ವಾಹನಗಳನ್ನು ಖರೀದಿಸಲು ಬಯಸುತ್ತಿದ್ದಾರೆ.  ಜನರ ಈ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಬಹುತೇಕ ಕಂಪನಿಗಳು ಸಿಎನ್‌ಜಿ ಅಳವಡಿಸಿದ ವಾಹನಗಳನ್ನು (CNG Vehicles) ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿವೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆಯ ಬಿಸಿ ಜನರಿಗೆ ಅಷ್ಟೊಂದು ತಟ್ಟುವುದಿಲ್ಲ ಮತ್ತು ಮಾಲಿನ್ಯವೂ ಕಡಿಮೆಯಾಗುತ್ತದೆ. (Technology News In Kannada)

ಸಿಎನ್ಜಿ ವಾಹನಗಳ ಜೊತೆಗೆ ಇದೀಗ ಸಿಎನ್‌ಜಿ ಚಾಲಿತ ಮೋಟಾರ್‌ಸೈಕಲ್‌ಗಳೂ ಮಾರುಕಟ್ಟೆಗೆ ಬರಲಿವೆ. ಬಜಾಜ್ ಆಟೋ (Baja Auto) ವಿಶ್ವದ ಮೊದಲ ಸಿಎನ್‌ಜಿ ಚಾಲಿತ ಮೋಟಾರ್‌ಸೈಕಲ್ (CNG Motor Cycle In India) ಅನ್ನು ಬಿಡುಗಡೆ ಮಾಡಲಿದೆ. ಈ ಹಿಂದೆ ಈ ಬೈಕ್ ಅನ್ನು 2025 ರಲ್ಲಿ ಬಿಡುಗಡೆಯಾಗಲಿದೆ ಎಂಬುದರ ಕುರಿತು ಚರ್ಚೆಗಳು ನಡೆದಿದ್ದವು. ಆದರೆ ಇದೀಗ ಕಂಪನಿಯು ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. 

ಬೈಕ್ ಯಾವಾಗ ಬಿಡುಗಡೆಯಾಗಲಿದೆ?
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಈ ಕುರಿತು ಸಿಎನ್‌ಬಿಸಿ ಟಿವಿ 18 ಗೆ ಸಂದರ್ಶನ ನೀಡಿದ್ದು, ತಮ್ಮ ಕಂಪನಿ ಈ ಸಿಎನ್‌ಜಿ ಚಾಲಿತ ಬೈಕನ್ನು ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದಿದ್ದಾರೆ. ಸಿಎನ್‌ಜಿ ಚಾಲಿತ ಬೈಕ್‌ಗಳನ್ನು ತಯಾರಿಸುವುದರ ಬಜಾಜ್ ಕಂಪನಿಯ ಉದ್ದೇಶ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವುದಾಗಿದೆ ಎಂದು ಅವರು ಹೇಳಿದ್ದಾರೆ.ಇದು ನಿಮ್ಮ ಬೈಕ್ ರೈಡಿಂಗ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಮಾಲಿನ್ಯ ಕೂಡ ಇದರಿಂದ ಕಡಿಮೆಯಾಗುತ್ತದೆ. 

50-65% ವರೆಗೆ ಕಡಿಮೆ ವೆಚ್ಚ ಬರಲಿದೆ
ಹೀರೋ ಹೋಂಡಾ ಮಾದರಿಯಲ್ಲೇ ಈ ಬೈಕ್ ಮಾರುಕಟ್ಟೆಯಲ್ಲಿ ಬದಲಾವಣೆ ತರಬಲ್ಲದು ಎನ್ನುತ್ತಾರೆ ಬಜಾಜ್. ಸಿಎನ್‌ಜಿ ಬೈಕ್‌ನಿಂದ ಪೆಟ್ರೋಲ್ ವೆಚ್ಚವನ್ನು ಅರ್ಧಕ್ಕೆ ಇಳಿಸಬಹುದು. ಈ ಬೈಕ್ ಪರೀಕ್ಷೆಯಲ್ಲೂ ಪ್ರದರ್ಶನ ತೋರಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಪೆಟ್ರೋಲ್ ಬೆಲೆ ಶೇ.50-65ರಷ್ಟು ಕಡಿಮೆಯಾಗುವುದಲ್ಲದೆ ವಾಯು ಮಾಲಿನ್ಯವೂ ಕಡಿಮೆಯಾಗಲಿದೆ. ಸಿಎನ್‌ಜಿ ಬೈಕು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು 50%, ಇಂಗಾಲದ ಮೋನಾಕ್ಸೈಡ್ ಹೊರಸೂಸುವಿಕೆಯನ್ನು 75% ಮತ್ತು ಹೈಡ್ರೋಕಾರ್ಬನ್ ಹೊರಸೂಸುವಿಕೆಯನ್ನು 90% ಕಡಿಮೆ ಮಾಡುತ್ತದೆ. ಪೆಟ್ರೋಲ್ ಬೆಲೆ ಸಿಎನ್‌ಜಿಗಿಂತ ಕಡಿಮೆ ಇದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-WhastsApp ಶೀಘ್ರದಲ್ಲೇ ಜಾರಿಗೆ ತರಲಿದೆ ಹೊಸ ಅವತಾರ್ ಪ್ರೈವೆಸಿ ವೈಶಿಷ್ಟ್ಯ, ಹೇಗೆ ಬಳಸಬೇಕು, ಲಾಭ

ಬೈಕ್ ಲುಕ್ ಹೇಗಿದೆ?
ಈ ಬೈಕ್ ಹೇಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಅತ್ಯಂತ ವಿಶೇಷವಾದ ಸಿಎನ್‌ಜಿ ತಂತ್ರಜ್ಞಾನವನ್ನು ಈ ಬೈಕ್‌ನಲ್ಲಿ ಸುರಕ್ಷಿತ ರೀತಿಯಲ್ಲಿ ಅಳವಡಿಸಬೇಕಾಗುತ್ತದೆ ಎಂದು ಬಜಾಜ್ ಕಂಪನಿ ಹೇಳಿದೆ. ಬೈಕ್‌ನ ಎಂಜಿನ್‌ನ ಸಾಮರ್ಥ್ಯ ಏನೆಂದು ಕಂಪನಿಯು ಇನ್ನೂ ಹೇಳಿಲ್ಲ, ಆದರೆ ಭವಿಷ್ಯದಲ್ಲಿ ಒಂದಕ್ಕಿಂತ ಹೆಚ್ಚು ಸಿಎನ್‌ಜಿ ಬೈಕ್‌ಗಳನ್ನು ತರಬಹುದು ಎಂದು ಅದು ಖಂಡಿತವಾಗಿಯೂ ಹೇಳಿದೆ.

ಇದನ್ನೂ ಓದಿ-WiFi Tips: ಮೊಬೈಲ್ ಹಾಟ್ ಸ್ಪಾಟ್ ಮೂಲಕ ಮನೆಯ ಸ್ಮಾರ್ಟ್ ಟಿವಿ ಹೇಗೆ ಆಪರೇಟ್ ಮಾಡಬೇಕು? ವಿಧಾನ ಸುಲಭವಾಗಿದೆ!

ಈ CNG ಬೈಕ್‌ಗಳು 100 cc ಯಿಂದ 160 cc ವರೆಗೆ ಸಾಮರ್ಥ್ಯದ ಬೈಕುಗಳಾಗಿವೆ, ಆದ್ದರಿಂದ ಹೆಚ್ಚಿನ ಜನರು ಅವುಗಳನ್ನು ಖರೀದಿಸಬಹುದು. ಈ ಬೈಕ್‌ನೊಂದಿಗೆ ವಿಶ್ವಾದ್ಯಂತದ ಜನರಿಗೆ ಆರ್ಥಿಕ ಮತ್ತು ಪರಿಸರ ಸ್ನೇಹಿ ಆಯ್ಕೆಯನ್ನು  ಒದಗಿಸಲು ಬಯಸುವುದಾಗಿ ಬಜಾಜ್ ಆಟೋ ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News