PM Modi Deal For Fighter Aircraft Engine: ಮಹತ್ವದ ಒಪ್ಪಂದವೊಂದರ ಅಡಿಯಲ್ಲಿ, ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ)-ಎಂಕೆ-2 ತೇಜಸ್‌ಗಾಗಿ ಜೆಟ್ ಎಂಜಿನ್‌ಗಳು ಇನ್ಮುಂದೆ ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಎನ್ನಲಾಗಿದೆ. ಅವುಗಳ ಜಂಟಿ ಉತ್ಪಾದನೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮತ್ತು ಅಮೆರಿಕದ ಜಿಇ ಏರೋಸ್ಪೇಸ್ ಗುರುವಾರ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ವೇಳೆ ಈ ಒಪ್ಪಂದವನ್ನು ಘೋಷಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ (ಪಿಎಂ ಮೋದಿ) ಪ್ರಸ್ತುತ ಅಮೆರಿಕ ಪ್ರವಾಸದಲ್ಲಿದ್ದಾರೆ.
ಹೇಳಿಕೆ ನೀಡಿದ ಸಿಇಒ ಎಚ್. ಲಾರೆನ್ಸ್ ಕಲ್ಪ್ ಜೂನಿಯರ್
ಒಪ್ಪಂದವು ಭಾರತದಲ್ಲಿ GE ಏರೋಸ್ಪೇಸ್‌ನಿಂದ F414 ಎಂಜಿನ್‌ಗಳ ಜಂಟಿ ಉತ್ಪಾದನೆ ಒಳಗೊಂಡಿದೆ ಎಂದು US ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ ಮತ್ತು GE ಏರೋಸ್ಪೇಸ್ ಈ ಉದ್ದೇಶಕ್ಕಾಗಿ ಅಗತ್ಯ ರಫ್ತು ಅಧಿಕಾರವನ್ನು ಪಡೆಯಲು US ಸರ್ಕಾರದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರಕ್ಕೆ ಎಚ್‌ಎಎಲ್ ಜೊತೆಗಿನ ತಿಳುವಳಿಕಾ ಒಪ್ಪಂದವು ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ. ಭಾರತ ಮತ್ತು ಎಚ್ ಎಎಲ್ ಜತೆಗಿನ ದೀರ್ಘಾವಧಿಯ ಒಡನಾಟದಿಂದಾಗಿ ಈ ಐತಿಹಾಸಿಕ ಒಪ್ಪಂದ ಸಾಧ್ಯವಾಗಿದೆ ಎಂದು ಜಿಇ ಏರೋಸ್ಪೇಸ್ ನ ಸಿಇಒ ಎಚ್.ಲಾರೆನ್ಸ್ ಕಲ್ಪ್ ಜೂನಿಯರ್ ಹೇಳಿದ್ದಾರೆ.
ಭಾರತದೊಂದಿಗೆ ಸಂಬಂಧವನ್ನು ಬಲಪಡಿಸುವ ಪ್ರಯತ್ನ
ಈ ಒಪ್ಪಂದವು ಭಾರತದಲ್ಲಿ ಪ್ರಸ್ತುತ LCA MK-1 ಮತ್ತು LCA MK-1A ವಿಮಾನಗಳಲ್ಲಿ ಬಳಸುತ್ತಿರುವ F404 ಎಂಜಿನ್ ಸೇರಿದಂತೆ ಹಲವಾರು ಉತ್ಪನ್ನಗಳನ್ನು ತಯಾರಿಸಲು ಕಂಪನಿಯನ್ನು ಅನುಮತಿಸುತ್ತದೆ. ಹಾಗೆಯೇ ನಮ್ಮ M414-INS6 ಎಂಜಿನ್‌ನೊಂದಿಗೆ AMCA ಪ್ರೋಗ್ರಾಂ ಅನ್ನು ವಿನ್ಯಾಸಗೊಳಿಸಲು, ಪರೀಕ್ಷಿಸಲು ಮತ್ತು ಪ್ರಮಾಣೀಕರಿಸಲು GE ಏರೋಸ್ಪೇಸ್ ಅನ್ನು ಆಯ್ಕೆಮಾಡುವುದಾಗಿದೆ.
ಇದನ್ನೂ ಓದಿ-PM Modi In US: ಪ್ರಧಾನಿ ಮೋದಿ ಭಾಷಣ ಬಹಿಷ್ಕರಿಸಲು ಮುಂದಾದ ಇಬ್ಬರು ಅಮೆರಿಕ ಸಂಸದರು
ಬೇರೆ ದೇಶಗಳ ಮೇಲೆ ಅವಲಂಬನೆ ಕಡಿಮೆಯಾಗಲಿದೆ
ಭಾರತ ಇದುವರೆಗೆ ರಷ್ಯಾ ಮತ್ತು ಯುರೋಪಿಯನ್ ಒಕ್ಕೂಟದಿಂದ ಮಿಲಿಟರಿ ಜೆಟ್‌ಗಳನ್ನು ಪಡೆಯುತ್ತಿದೆ. ಇತ್ತೀಚೆಗಷ್ಟೇ ಭಾರತವು ಫ್ರೆಂಚ್ ಯುದ್ಧ ವಿಮಾನ ತಯಾರಕ ಡೆಸಾನ್‌ನಿಂದ ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನವನ್ನು ಖರೀದಿಸಿತ್ತು. ಇದೇ ವೇಳೆ, ಸುಧಾರಿತ ಮಧ್ಯಮ ಯುದ್ಧ ವಿಮಾನದ (AMCA) MK2 ಎಂಜಿನ್ ಕಾರ್ಯಕ್ರಮಕ್ಕಾಗಿ GE ಏರೋಸ್ಪೇಸ್ ಭಾರತ ಸರ್ಕಾರದೊಂದಿಗೆ ಸಹಯೋಗವನ್ನು ಮುಂದುವರೆಸಲಿದೆ
ಇದನ್ನೂ ಓದಿ-United Nations ನಲ್ಲಿ ಭಾರತ-ಅಮೆರಿಕಾದ ಶತ್ರು ಮತ್ತು ಲಷ್ಕರ್ ಉಗ್ರನನ್ನು ರಕ್ಷಿಸಲು ವೀಟೋ ಬಳಸಿದ ಚೀನಾ
ಪ್ರಸ್ತುತ ಸ್ಥಿತಿ ಹೇಗಿದೆ?
ಗಮನಾರ್ಹವಾಗಿ, ಭಾರತೀಯ ವಾಯುಪಡೆಗಾಗಿ 83 ಲಘು ಯುದ್ಧ ವಿಮಾನಗಳನ್ನು ತಯಾರಿಸಲು HAL GE 404 ಎಂಜಿನ್ ಅನ್ನು ಬಳಸುತ್ತಿದೆ. GE ಏರೋಸ್ಪಸೆ ಭಾಟದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿದೆ ಮತ್ತು ಇಂಜಿನ್‌ಗಳು, ಏವಿಯಾನಿಕ್ಸ್, ಸೇವೆ, ಎಂಜಿನಿಯರಿಂಗ್, ಉತ್ಪಾದನೆ ಸೇರಿದಂತೆ ವ್ಯಾಪಕ ಶ್ರೇಣಿಯ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ