WhatsApp ಮಿಸ್ಸಡ್ ಕಾಲ್ ಗಳ ಮೇಲೆ ಬಹುದೊಡ್ಡ ಕ್ರಮ ಕೈಗೊಳ್ಳಲು ಮುಂದಾದ ಕೇಂದ್ರ ಸರ್ಕಾರ

WhatsApp Alert: ಕಳೆದ ಕೆಲವು ದಿನಗಳಿಂದ ವಾಟ್ಸಾಪ್ ಬಳಕೆದಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಅಪರಿಚಿತ ಸಂಖ್ಯೆಗಳಿಂದ ಮಿಸ್ಡ್ ಕಾಲ್‌ಗಳು ಬರುತ್ತಿವೆ. ಈ ಎಲ್ಲಾ ಕರೆಗಳನ್ನು ವಿದೇಶಿ ಸಂಖ್ಯೆಗಳಿಂದ ಮಾಡಲಾಗುತ್ತಿದೆ.  

Written by - Nitin Tabib | Last Updated : May 11, 2023, 05:38 PM IST
  • WhatsApp ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಮಿಸ್ ಕಾಲ್‌ಗಳು ಬರುತ್ತಿವೆ.
  • ಈ ಎಲ್ಲಾ ಕರೆಗಳನ್ನು ವಿದೇಶಿ ಸಂಖ್ಯೆಗಳಿಂದ ಮಾಡಲಾಗುತ್ತಿದೆ ಮತ್ತು ಇದು ಏಕೆ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಳಕೆದಾರರಿಗೆ ಸಾಧ್ಯವಾಗುತ್ತಿಲ್ಲ.
  • ಇದೀಗ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದು, ಅನಗತ್ಯ ಕರೆಗಳು ಮತ್ತು ರೆಕಾರ್ಡಿಂಗ್ ವಿಷಯಗಳ ಕುರಿತು
  • ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ವಾಟ್ಸಾಪ್ ನಲ್ಲಿ ನೋಟಿಸ್ ಕಳುಹಿಸಲು ಸರ್ಕಾರ ಸಿದ್ಧತೆ ನಡೆಸಿದೆ.
WhatsApp ಮಿಸ್ಸಡ್ ಕಾಲ್ ಗಳ ಮೇಲೆ ಬಹುದೊಡ್ಡ ಕ್ರಮ ಕೈಗೊಳ್ಳಲು ಮುಂದಾದ ಕೇಂದ್ರ ಸರ್ಕಾರ title=
ವಾಟ್ಸ್ ಆಪ್ ಅಲರ್ಟ್!

WhatApp Missed Call: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸ್ಂದೆಶಗಳನ್ನು ಕಳುಹಿಸಲು ಮತ್ತು ಚಾಟ್‌ ಮಾಡಲು WhatsApp ಅನ್ನು ಬಳಸುತ್ತಿದ್ದಾರೆ, ಆದರೆ ಕಳೆದ ಕೆಲವು ದಿನಗಳಿಂದ ಬಳಕೆದಾರರು ಇದರಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು WhatsApp ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಮಿಸ್ ಕಾಲ್‌ಗಳು ಬರುತ್ತಿವೆ. ಈ ಎಲ್ಲಾ ಕರೆಗಳನ್ನು ವಿದೇಶಿ ಸಂಖ್ಯೆಗಳಿಂದ ಮಾಡಲಾಗುತ್ತಿದೆ ಮತ್ತು ಇದು ಏಕೆ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಳಕೆದಾರರಿಗೆ ಸಾಧ್ಯವಾಗುತ್ತಿಲ್ಲ. ಇದೀಗ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದು, ಅನಗತ್ಯ ಕರೆಗಳು ಮತ್ತು ರೆಕಾರ್ಡಿಂಗ್ ವಿಷಯಗಳ ಕುರಿತು ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ವಾಟ್ಸಾಪ್ ನಲ್ಲಿ ನೋಟಿಸ್ ಕಳುಹಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಸರ್ಕಾರ ವಾಟ್ಸಾಪ್ ನಿಂದ ಮಾಹಿತಿಯನ್ನು ಪಡೆದುಕೊಳ್ಳಲಿದೆ
ಮೈಕ್ರೊಫೋನ್ ರೆಕಾರ್ಡಿಂಗ್ ವಿಷಯದಲ್ಲಿಯೂ ಕೂಡ ವಾಟ್ಸಾಪ್ ಗೆ ನೋಟಿಸ್ ಕಳುಹಿಸಲು ಸಿದ್ಧತೆ ನಡೆದಿದೆ. ಕಂಪನಿಯ ಅಧಿಕೃತ ಉತ್ತರದ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ. ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಅನಗತ್ಯ ಕರೆಗಳ ಸಂದರ್ಭದಲ್ಲಿ, ಸರ್ಕಾರವು ನೋಟಿಸ್‌ಗಳನ್ನು ಕಳುಹಿಸುತ್ತದೆ ಮತ್ತು ಕಂಪನಿಯಿಂದ ಉತ್ತರಗಳನ್ನು ಪಡೆಯುತ್ತದೆ. ಅವರ ಕಡೆಯಿಂದ ಯಾವುದೇ ಡೇಟಾ ಸೋರಿಕೆಯಾಗಿದೆಯೇ ಎಂದು ಕಂಪನಿಯಿಂದ ಮಾಹಿತಿ ಕೇಳಲಾಗುತ್ತದೆಯೇ? ಒಂದು ವೇಳೆ ಯಾದೃಚ್ಛಿಕ ಕರೆ ನಡೆದಿದ್ದಾರೆ, ಅದನ್ನು ತಡೆಯಲು ಕಂಪನಿಯಿಂದಲೇ ಯಾವ ಪ್ರಯತ್ನಗಳು ನಡೆಯುತ್ತಿವೆ. ನಿರ್ದಿಷ್ಟ ಸ್ಥಳಗಳಿಂದ ಕರೆ ಮಾಡುವುದು ಏನನ್ನಾದರೂ ಸೂಚಿಸುತ್ತದೆಯೇ ಎಂಬುದನ್ನೂ ಸರಕಾರ ಪರಿಶೀಲಿಸುತ್ತಿದೆ.

ಇದನ್ನೂ ಓದಿ-'WhatsApp ಅನ್ನು ನಂಬುವುದು ಸಾಧ್ಯವಿಲ್ಲ' ಅಂತ ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾದರು ಏಕೆ?

ಈ ದೇಶಗಳಿಂದ ಬಳಕೆದಾರರಿಗೆ WhatsApp ನಲ್ಲಿ ಕರಗಳು ಬರುತ್ತಿವೆ
ಕಳೆದ ಕೆಲವು ದಿನಗಳಿಂದ WhatsApp ಬಳಕೆದಾರರು ಅಪರಿಚಿತ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಮಿಸ್ಡ್ ಕಾಲ್‌ಗಳನ್ನು ಪಡೆಯುತ್ತಿದ್ದಾರೆ. ಮಿಸ್ಸಡ್ ಕಾಲ್ ಬರುತ್ತಿರುವ ಪಟ್ಟಿಯಲ್ಲಿ  ಮಲೇಷ್ಯಾ (+60), ಇಂಡೋನೇಷ್ಯಾ (+62), ವಿಯೆಟ್ನಾಂ (+84), ಇಥಿಯೋಪಿಯಾ (+251), ಕೀನ್ಯಾ (+254) ಮತ್ತು ಇನ್ನೂ ಹಲವು ದೇಶಗಳ ಸಂಖ್ಯೆಗಳೂ ಒಳಗೊಂಡಿವೆ. 

ಇದನ್ನೂ ಓದಿ-Recharge Plan: ಬಿಎಸ್ಎನ್ಎಲ್ ಕಂಪನಿಯ 22 ರೂ.ಗಳ ಪ್ಲಾನ್ ಸಕ್ಕತ್ತಾಗಿದೆ, ಸಿಗುತ್ತೆ 90 ದಿನಗಳ ವ್ಯಾಲಿಡಿಟಿ!

ಫ್ರೀಲೋಡ್ ಮಾಡಿದ ಆಪ್‌ಗಳ ಮೇಲೂ ಸರ್ಕಾರದ ಕಣ್ಣು
ಸ್ಮಾರ್ಟ್‌ಫೋನ್ ಖರೀದಿಸಿದ ನಂತರ, ಕೆಲವು ಅಪ್ಲಿಕೇಶನ್‌ಗಳು ಸ್ಮಾರ್ಟ್ ಫೋನ್ ಜೊತೆಗೆ ಫ್ರೀಲೋಡ್ ಆಗಿಯೇ ಬರುತ್ತವೆ, ಇದು ಕೆಲವು ಬಳಕೆದಾರರಿಗೆ ಉಪಯುಕ್ತವಾಗಿದ್ದರೆ, ಕೆಲವು ಬಳಕೆದಾರರಿಗೆ ನಿಷ್ಪ್ರಯೋಜಕವಾಗಿವೆ. ಮೊಬೈಲ್ ಫೋನ್‌ಗಳು ಮತ್ತು ಇತರ ಸಾಧನಗಳಲ್ಲಿ ಒಳಗೊಂಡಿರುವ ಈ ಅಪ್ಲಿಕೇಶನ್‌ಗಳ ಮೇಲೆ ಸರ್ಕಾರವು ಕಣ್ಣಿಡಲಿದೆ ಮತ್ತು ಸರ್ಕಾರವು ಶೀಘ್ರದಲ್ಲೇ ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸಲಿದೆ. ಈ ಆ್ಯಪ್‌ಗಳು ಯಾವ ಡೇಟಾವನ್ನು ತೆಗೆದುಕೊಳ್ಳುತ್ತಿವೆ ಮತ್ತು ಅವುಗಳ ಡೇಟಾವನ್ನು ಎಲ್ಲಿ ಸಂಗ್ರಹಿಸಲಾಗುತ್ತಿದೆ ಎಂಬುದನ್ನು ಸರ್ಕಾರವು ಗಮನಿಸಲಿದೆ. ಇದರೊಂದಿಗೆ, ಅಪ್ಲಿಕೇಶನ್‌ಗಳು ಏಕೆ ಅನಗತ್ಯ ಡೇಟಾವನ್ನು ಸಂಗ್ರಹಿಸುತ್ತವೆ ಎಂಬುದನ್ನೂ ಸ್ಪಷ್ಟಪಡಿಸಬೇಕಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News