Reliance Jio: ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ನವೆಂಬರ್‌ನಲ್ಲಿ ಸೆಕೆಂಡಿಗೆ 24.1 ಮೆಗಾಬಿಟ್‌ಗಳ (mbps) ಡೌನ್‌ಲೋಡ್ ವೇಗದೊಂದಿಗೆ 4G ಸೇವಾ ಪೂರೈಕೆದಾರರಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಡೌನ್‌ಲೋಡ್ ವೇಗ ಸುಧಾರಿಸಿದೆ:
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಜಿಯೋ ನವೆಂಬರ್‌ನಲ್ಲಿ 4G ಡೌನ್‌ಲೋಡ್ ವೇಗದಲ್ಲಿ ಮೊದಲ ಸ್ಥಾನದಲ್ಲಿದೆ. ಅದರ ನಂತರ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಮತ್ತು ಭಾರ್ತಿ ಏರ್‌ಟೆಲ್ ಸ್ಥಾನ ಪಡೆದುಕೊಂಡಿದೆ. ಆದಾಗ್ಯೂ, ಈ ಎರಡೂ ಕಂಪನಿಗಳ ಡೌನ್‌ಲೋಡ್ ವೇಗವು ನವೆಂಬರ್‌ನಲ್ಲಿ ಸುಧಾರಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ- ದುಬಾರಿಯಾಯಿತು Amazon Prime ಚಂದಾದಾರಿಕೆ, ಹೊಸ ಪ್ಲಾನ್ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ಜಿಯೋ ನೆಟ್‌ವರ್ಕ್‌ನ (Jio Network) ಸರಾಸರಿ 4G ಡೇಟಾ ಡೌನ್‌ಲೋಡ್ ವೇಗವು ನವೆಂಬರ್‌ನಲ್ಲಿ ಸುಮಾರು 10 ಪ್ರತಿಶತದಷ್ಟು ಹೆಚ್ಚಾಗಿದೆ, ಆದರೆ VIL ನ ವೇಗವು 8.9 ಶೇಕಡಾ ಮತ್ತು ಏರ್‌ಟೆಲ್ ಶೇಕಡಾ 5.3 ರಷ್ಟು ಹೆಚ್ಚಾಗಿದೆ. ಅಕ್ಟೋಬರ್‌ನಲ್ಲಿ 4G ಡೇಟಾ ಅಪ್‌ಲೋಡ್‌ನಲ್ಲಿ ವೊಡಾಫೋನ್ ಐಡಿಯಾ ಅಗ್ರಸ್ಥಾನದಲ್ಲಿದೆ. ಇದರ ನೆಟ್‌ವರ್ಕ್ 8 mbps ಅಪ್‌ಲೋಡ್ ವೇಗವನ್ನು ದಾಖಲಿಸಿದೆ, ಇದು ಕಳೆದ ಐದು ತಿಂಗಳುಗಳಲ್ಲಿ ಅತ್ಯಧಿಕವಾಗಿದೆ.
ಇದನ್ನೂ ಓದಿ- Flash Back 2021: ವರ್ಷ 2021ರಲ್ಲಿ ಭಾರಿ ಸದ್ದು ಮಾಡಿದ 5 ಸ್ಮಾರ್ಟ್ ಫೋನ್ ಗಳು ಇಲ್ಲಿವೆ
ವೇಗ ಹೇಗೆ ಕೆಲಸ ಮಾಡುತ್ತದೆ?
ಉತ್ತಮ ಡೌನ್‌ಲೋಡ್ ವೇಗವು ಗ್ರಾಹಕರಿಗೆ ಇಂಟರ್ನೆಟ್‌ನಲ್ಲಿ ಲಭ್ಯವಿರುವ ವಿಷಯವನ್ನು ಪ್ರವೇಶಿಸಲು ಸುಲಭಗೊಳಿಸುತ್ತದೆ, ಆದರೆ ಉತ್ತಮ ಅಪ್‌ಲೋಡ್ ವೇಗವು ಅವರ ಪರಿಚಯಸ್ಥರಿಗೆ ಡೇಟಾ ಅಥವಾ ಫೋಟೋಗಳನ್ನು ವೇಗವಾಗಿ ಕಳುಹಿಸಲು ಅನುವು ಮಾಡಿಕೊಡುತ್ತದೆ.
ಐದು ತಿಂಗಳಲ್ಲಿ ಏರ್‌ಟೆಲ್‌ನ ಅತ್ಯುತ್ತಮ ಅಪ್‌ಲೋಡ್ ವೇಗವು ನವೆಂಬರ್‌ನಲ್ಲಿ 5.6 mbps ಆಗಿದ್ದರೆ, Jio 7.1 mbps ಅನ್ನು ಗಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.