Affordable 7-Seater Cars : 5 ಕ್ಕಿಂತ ಹೆಚ್ಚು ಜನರನ್ನು ಹೊಂದಿರುವ ಕುಟುಂಬಗಳಿಗೆ 7-ಸೀಟರ್ ಕಾರುಗಳು ಉತ್ತಮ ಆಯ್ಕೆಯಾಗಿದೆ. ಈ ಕಾರುಗಳು ಸಾಮಾನ್ಯವಾಗಿ ದೊಡ್ಡದಾಗಿರುತ್ತವೆ ಮತ್ತು ಮೂರು ರೋಗಳನ್ನು (ಸಾಲುಗಳನ್ನು ) ಹೊಂದಿರುತ್ತವೆ. MPV (ಮಲ್ಟಿಪರ್ಪಸ್ ವೆಹಿಕಲ್), SUV (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಮತ್ತು ಮಿನಿವ್ಯಾನ್ನಲ್ಲಿ 7-ಸೀಟಿಂಗ್ ಲೇಔಟ್ ಅನ್ನು ಪಡೆಯುತ್ತೀರಿ. ಆದರೆ, ಬೇರೆ ಕಾರುಗಳಿಗೆ ಹೋಲಿಸಿದರೆ 7 ಸೀಟರ್ ಕಾರುಗಳು ತುಸು ದುಬಾರಿಯಾಗಿರುವ ಸಾಧ್ಯತೆ ಹೆಚ್ಚು. ದೇಶದಲ್ಲಿ ಅಗ್ಗದ 7 ಸೀಟರ್ ಕಾರುಗಳೂ ಇವೆ. ದೇಶದ ಅತ್ಯಂತ ಅಗ್ಗದ 7-ಸೀಟರ್ ಕಾರುಗಳು ಯಾವುವು ಎಂದು ನೋಡುವುದಾದರೆ..
1.ರೆನಾಲ್ಟ್ ಟ್ರೈಬರ್ :
ಟ್ರೈಬರ್ ಮಾರುಕಟ್ಟೆಯಲ್ಲಿ ಹೆಚ್ಚು ಪಾಕೆಟ್ ಸ್ನೇಹಿ MPV ಮಾತ್ರವಲ್ಲದೆ ಇದು ಭಾರತದಲ್ಲಿ ರೆನಾಲ್ಟ್ನ ಹೆಚ್ಚು ಮಾರಾಟವಾಗುವ ಮಾದರಿಯಾಗಿದೆ. ಟ್ರೈಬರ್ 96Nm ಮತ್ತು 71bhp ಜೊತೆಗೆ 1-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಮತ್ತು 5-ಸ್ಪೀಡ್ AMT ಆಯ್ಕೆಯನ್ನು ಹೊಂದಿದೆ. ಗ್ಲೋಬಲ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ನಲ್ಲಿ ಇದು 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇನ್ನು ಹತ್ತು ಹಲವು ಅಗತ್ಯ ವೈಶಿಷ್ಟ್ಯಗಳೂ ಇದರಲ್ಲಿ ಲಭ್ಯವಿವೆ. ಇದರ ಬೆಲೆ 6.34 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.
ಇದನ್ನೂ ಓದಿ : ವಿದ್ಯುತ್ ಬಿಲ್ ಉಳಿಸುವ ಸುಲಭ ಮಾರ್ಗಗಳು ಇವು ! ಇಂದೇ ಟ್ರೈ ಮಾಡಿ
2. ಮಾರುತಿ ಸುಜುಕಿ ಎರ್ಟಿಗಾ/ಟೊಯೋಟಾ ರೂಮಿಯಾನ್ :
ಎರ್ಟಿಗಾ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ MUV ಆಗಿದೆ. ಟೊಯೊಟಾ ರೂಮಿಯಾನ್ ಇದನ್ನು ಆಧರಿಸಿದೆ. ಇವೆರಡೂ 102bhp ಮತ್ತು 136.8Nm ಜನರೇಟ್ ಮಾಡುವ 1.5-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತವೆ. ಇವುಗಳು ಪ್ಯಾಡಲ್ ಶಿಫ್ಟರ್ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ಬಾಕ್ಸ್ನ ಆಯ್ಕೆಯನ್ನು ಹೊಂದಿವೆ. ಎರ್ಟಿಗಾ ಬೆಲೆ 8.64 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ರೂಮಿಯಾನ್ ಬೆಲೆ 10.29 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.
3. ಮಹೀಂದ್ರ ಬೊಲೆರೊ/ಬೊಲೆರೊ ನಿಯೋ :
ಬೊಲೆರೊ ನಿಯೋ ಅತ್ಯಂತ ಕೈಗೆಟುಕುವ 7- ಸೀಟರ್ ಡೀಸೆಲ್ SUV ಆಗಿದೆ. ಇದು ಬಾಡಿ-ಆನ್-ಫ್ರೇಮ್ SUV ಆಗಿದೆ. ಇದರಲ್ಲಿ ಕೇವಲ ಒಂದು ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ. ಇದು 1.5-ಲೀಟರ್ ಡೀಸೆಲ್ ಯೂನಿಟ್ ಆಗಿದೆ. ಇದು 99bhp ಮತ್ತು 260Nm ಜನರೇಟ್ ಮಾಡುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಆದರೆ, ಬೊಲೆರೊ mHawk D75 1.5 ಲೀಟರ್ ಡೀಸೆಲ್ ಅನ್ನು ಹೊಂದಿದೆ. ಇದು 76 PS ಮತ್ತು 210 Nm ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಸಹ ಹೊಂದಿದೆ. ಬೊಲೆರೊ ನಿಯೊ ಬೆಲೆ 9.63 ಲಕ್ಷದಿಂದ ಆರಂಭವಾಗುತ್ತದೆ. ಬೊಲೆರೊ ಬೆಲೆ 9.78 ಲಕ್ಷದಿಂದ ಪ್ರಾರಂಭವಾಗುತ್ತದೆ.
ಇದನ್ನೂ ಓದಿ : ಫೋನ್ ನಲ್ಲಿ ಪದೇ ಪದೇ ಬರುವ ಜಾಹೀರಾತುಗಳಿಂದ ತಲೆ ಚಿಟ್ಟು ಹಿಡಿದಿದೆಯಾ? ಈ ಸಣ್ಣ ಸೇಟ್ಟಿಂಗ್ ಮಾಡ್ಕೊಳ್ಳಿ ಸಾಕು!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ