Zinnia Flower: ಈ ಹೂವು ಬಾನಂಗಳದಲ್ಲಿ ಅರಳಿದೆಯಂತೆ! ಹೇಗೆ ಸಾಧ್ಯ ಅಂತೀರಾ? ವಿಜ್ಞಾನಿಗಳಿಗೂ ಇದೆ ಪ್ರಶ್ನೆ ಕಾಡುತ್ತಿದೆ

Zinnia Flower: ಮೊದಲನೆಯದಾಗಿ ಈ ಹೂವು ಒಂದು ಸಾಮಾನ್ಯ ಹೂವಲ್ಲ ಎಂಬುದು ನೀವು ತಿಳಿಯಬೇಕಾದ ಸಂಗತಿ, ಆದರೆ ಇದು 2015 ರಿಂದ ಈ ಸಂಶೋಧನೆಯ ಭಾಗವಾಗಿದೆ. 2015 ರಲ್ಲಿ, ಗಗನಯಾತ್ರಿ ಕೆಜೆಲ್ ಲಿಂಡ್‌ಗ್ರೆನ್ ಅವರು ಬಾಹ್ಯಾಕಾಶದಲ್ಲಿ ಈ ಸಸ್ಯವನ್ನು ಬೆಳೆಸುವ ಪ್ರಯೋಗವನ್ನು ನಡೆಸಿದ್ದರು.  

Written by - Nitin Tabib | Last Updated : Jul 13, 2023, 10:49 PM IST
  • ಈ ಹೂವಿನ ಬೆಳವಣಿಗೆಯು ಕೇವಲ ಒಂದು ಅಂಶವಾಗಿದೆ, ವಾಸ್ತವದಲ್ಲಿ ಬಾಹ್ಯಾಕಾಶ ಸಂಸ್ಥೆ ನಾಸಾ ಬಾಹ್ಯಾಕಾಶದಲ್ಲಿ ಹಲವು ರೀತಿಯ ಬೆಳೆಗಳನ್ನು ಬೆಳೆಯಲು ಯೋಜಿಸುತ್ತಿದೆ
  • ಮತ್ತು ಅವುಗಳಲ್ಲಿ ಕೆಲವು ಬೆಳೆಯುತ್ತಿದೆ. ಭೂಮಿಯ ಹೊರಗೆ ಮಾನವ ಬಳಕೆಗೆ ಸೂಕ್ತವಾದ ಆಹಾರವನ್ನು ಹೇಗೆ ಬೆಳೆಯುವುದು ಎಂಬುದರ ಕುರಿತು ನಾಸಾ ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಈ ಪ್ರಯೋಗ ಯಶಸ್ವಿಯಾದರೆ ಮನುಷ್ಯರು ಬೇರೊಂದು ಗ್ರಹದಲ್ಲಿ ಕೃಷಿ ಮಾಡುವ ದಿನ ದೂರವಿಲ್ಲ ಎಂದರೆ ತಪ್ಪಾಗಲಾರದು.
Zinnia Flower: ಈ ಹೂವು ಬಾನಂಗಳದಲ್ಲಿ ಅರಳಿದೆಯಂತೆ! ಹೇಗೆ ಸಾಧ್ಯ ಅಂತೀರಾ? ವಿಜ್ಞಾನಿಗಳಿಗೂ ಇದೆ ಪ್ರಶ್ನೆ ಕಾಡುತ್ತಿದೆ title=
ಚಿತ್ರ ಕೃಪೆ - ನಾಸಾ ಟ್ವೀಟ್

Zinnia Flower: ಬಾಹ್ಯಾಕಾಶವು ಯಾವಾಗಲೂ ಮಾನವರಿಗೆ ಭವಿಷ್ಯದ ಸಾಧ್ಯತೆಗಳನ್ನು ಹುಡುಕುವ ಸ್ಥಳವಾಗಿದೆ, ಇದರೊಂದಿಗೆ ಮಾನವರು ತಮ್ಮ ಅಸ್ತಿತ್ವದ ಕಥೆಯನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಹೀಗಿರುವಾಗ ಬಾಹ್ಯಾಕಾಶದಲ್ಲಿ ವಿಶಿಷ್ಟವಾದ ಹೂವೊಂದು ಅರಳಿದೆ ಎಂದು ನಾಸಾ ವರದಿ ಮಾಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ವಿಶ್ವಾದ್ಯಂತದ ಎಲ್ಲಾ ವಿಜ್ಞಾನಿಗಳು ಈ ಹೂವು ಬಾಹ್ಯಾಕಾಶದಲ್ಲಿ ಹೇಗೆ ಅರಳಿತು ಎಂದು ತಿಳಿಯಲು ಇದೀಗ ಬಯಸುತ್ತಿದ್ದಾರೆ.

ಈ ಹೂವಿನ ಬಗ್ಗೆ ನಾಸಾ ಹೇಳಿದ್ದೇನು?
ನಾಸಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹೂವಿನ ಚಿತ್ರ ಹಂಚಿಕೊಂಡಿದ್ದು, ಈ ಹೂವಿನ ಹೆಸರು ಜಿನಿಯಾ ಹೂವು. ಜುಲೈ 12 ರ ರಾತ್ರಿ, ನಾಸಾ ಈ ಚಿತ್ರವನ್ನು ಹಂಚಿಕೊಂಡಿದೆ ಮತ್ತು ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮಗಳ ಭಾಗವಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭೂಮಿಯ ಹೊರಗೆ ಇದನ್ನು ಬೆಳೆಸಲಾಗಿದೆ ಎಂದು ಬರೆದುಕೊಂಡಿದೆ. ಈ ಹೂವು ಸಾಮಾನ್ಯ ಹೂವಲ್ಲ ಎಂಬುದು ಇಲ್ಲಿ ನೀವು ತಿಳಿಯಬೇಕಾದ ಸಂಗತಿ, ಆದರೆ ಇದು 2015 ರಿಂದ ಈ ಸಂಶೋಧನೆಯ ಭಾಗವಾಗಿದೆ. 2015 ರಲ್ಲಿ, ಗಗನಯಾತ್ರಿ ಕೆಜೆಲ್ ಲಿಂಡ್‌ಗ್ರೆನ್ ಅವರು ಬಾಹ್ಯಾಕಾಶದಲ್ಲಿ ಈ ಸಸ್ಯವನ್ನು ಬೆಳೆಸುವ ಪ್ರಯೋಗವನ್ನು ಆರಂಭಿಸಿದ್ದರು.

ನಾಸಾದ ವಿಶಿಷ್ಟ ಸಂಶೋಧನೆ
ಈ ಹೂವಿನ ಬೆಳವಣಿಗೆಯು ಕೇವಲ ಒಂದು ಅಂಶವಾಗಿದೆ, ವಾಸ್ತವದಲ್ಲಿ ಬಾಹ್ಯಾಕಾಶ ಸಂಸ್ಥೆ ನಾಸಾ ಬಾಹ್ಯಾಕಾಶದಲ್ಲಿ ಹಲವು ರೀತಿಯ ಬೆಳೆಗಳನ್ನು ಬೆಳೆಯಲು ಯೋಜಿಸುತ್ತಿದೆ ಮತ್ತು ಅವುಗಳಲ್ಲಿ ಕೆಲವು ಬೆಳೆಯುತ್ತಿದೆ. ಭೂಮಿಯ ಹೊರಗೆ ಮಾನವ ಬಳಕೆಗೆ ಸೂಕ್ತವಾದ ಆಹಾರವನ್ನು ಹೇಗೆ ಬೆಳೆಯುವುದು ಎಂಬುದರ ಕುರಿತು ನಾಸಾ ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ ಮನುಷ್ಯರು ಬೇರೊಂದು ಗ್ರಹದಲ್ಲಿ ಕೃಷಿ ಮಾಡುವ ದಿನ ದೂರವಿಲ್ಲ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ-BSNL ಕಂಪನಿ ಈ ಅಗ್ಗದ ಯೋಜನೆಯಲ್ಲಿ 105 ದಿನಗಳ ವ್ಯಾಲಿಡಿಟಿ ನೀಡುತ್ತಿದೆ, ನಿತ್ಯ 2ಜಿಬಿ ಡೇಟಾ!

ಈ ಹೂವು ವೈರಲ್ ಆಗಿದೆ
ನಾಸಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹೂವಿನ ಚಿತ್ರವನ್ನು ಪೋಸ್ಟ್ ಮಾಡಿದಾಗಿನಿಂದ, ಅದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕೆಲವೇ ಗಂಟೆಗಳಲ್ಲಿ, ಈ ಚಿತ್ರಕ್ಕೆ 9 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿವೆ. ಇಡೀ ವಿಶ್ವಾದ್ಯಂತ ಜನರು  ಈ ಹೂವನ್ನು ಇಷ್ಟಪಡುತ್ತಿದ್ದಾರೆ ಮತ್ತು ಅದನ್ನು ತಮ್ಮ ಹತ್ತಿರದ ಮತ್ತು ಸ್ನೇಹಿತರು ಹಾಗೂ ಬಂಧು ಬಾಂಧವರ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ. ಮನುಷ್ಯನು ವಿಜ್ಞಾನದೊಂದಿಗೆ ಸರಿಯಾದ ದಿಕ್ಕಿನಲ್ಲಿ ನಡೆದರೆ ಅವನು ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನು ಈ ಹೂವು ಹೇಳುತ್ತದೆ.

ಇದನ್ನೂ ಓದಿ-Amazon ಪ್ರೈಮ್ ಡೇ ಸೆಲ್ ನಲ್ಲಿ ಒನ್ ಪ್ಲಸ್ ಕಂಪನಿಯ ಈ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳ ಮೇಲೆ ಭಾರಿ ರಿಯಾಯಿತಿ!

 
 
 
 

 
 
 
 
 
 
 
 
 
 
 

A post shared by NASA (@nasa)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News