ಕೊರೊನಾ​ ಹುಟ್ಟಿದ್ದು ಭಾರತದಲ್ಲೇ! ಚೀನಾ ಕೊಟ್ಟ 'ಶಾಕಿಂಗ್'​ ಕಾರಣ ಹೀಗಿದೆ!

ಚೀನಾದ ಸಂಶೋಧಕರು ಕೊರೊನಾ ವೈರಸ್​ ಹುಟ್ಟಿದ್ದು ಭಾರತದಲ್ಲಿ ಎಂದು ಹೊಸ ವಾದ

Last Updated : Nov 28, 2020, 12:06 PM IST
  • ಚೀನಾದ ಸಂಶೋಧಕರು ಕೊರೊನಾ ವೈರಸ್​ ಹುಟ್ಟಿದ್ದು ಭಾರತದಲ್ಲಿ ಎಂದು ಹೊಸ ವಾದ
  • ವೈರಸ್​ ನಮ್ಮ ಗಡಿಯಿಂದ ಆಚೆಯೇ ಹುಟ್ಟಿ ಬಂದಿದೆ ಎಂದು ಚೀನಾ ಹೊಸ ವರಸೆ
  • ಅಲ್ಲಗೆಳೆದ ಟ್​ಲೆಂಡ್​ನ ಗ್ಲಾಸ್ಗೋ ಯೂನಿವರ್ಸಿಟಿಯ ಪರಿಣಿತ ಸಂಶೋಧಕ ಡೇವಿಡ್​ ರಾಬರ್ಟ್​ಸನ್​
ಕೊರೊನಾ​ ಹುಟ್ಟಿದ್ದು ಭಾರತದಲ್ಲೇ! ಚೀನಾ ಕೊಟ್ಟ 'ಶಾಕಿಂಗ್'​ ಕಾರಣ ಹೀಗಿದೆ! title=

ಬೀಜಿಂಗ್​: ಇಡೀ ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್​ ಹುಟ್ಟಿನ ಬಗ್ಗೆ ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ. ಈವರೆಗೂ ಕೊರೊನಾ ತವರು ಚೀನಾ ಎಂದೇ ಎಲ್ಲರೂ ನಂಬಿದ್ದಾರೆ. ಅದಕ್ಕೆ ಕಾರಣ ವೈರಸ್​ ಮೊದಲ ಬಾರಿಗೆ ಕಾಣಿಸಿಕೊಂಡಿದ್ದೇ ಅಲ್ಲಿ. ಆದರೆ, ಚೀನಾ ಮಾತ್ರ ಕೊರೊನಾ ಹುಟ್ಟಿದ್ದು ನಮ್ಮಲ್ಲಲ್ಲ ಎಂದು ಹೇಳುತ್ತಲೇ ಬರುತ್ತಿದೆ. ಅಲ್ಲದೆ, ಈ ಹಿಂದೆ ಅಮೆರಿಕ ವಿರುದ್ಧ ದೂರಿದ್ದ ಚೀನಾ ಇದೀಗ ಭಾರತದತ್ತ ಬೊಟ್ಟು ಮಾಡಿದೆ.

ಹೌದು, ಚೀನಾದ ಸಂಶೋಧಕರು ಕೊರೊನಾ ವೈರಸ್(corona virus)​ ಹುಟ್ಟಿದ್ದು ಭಾರತದಲ್ಲಿ ಎಂದು ಹೊಸ ವಾದ ಮಂಡಿಸಿದ್ದಾರೆ. ವೈರಸ್​ ನಮ್ಮ ಗಡಿಯಿಂದ ಆಚೆಯೇ ಹುಟ್ಟಿ ಬಂದಿದೆ ಎಂದು ಚೀನಾ ಹೊಸ ವರಸೆ ತೆಗೆದಿದೆ.

ಹಲವು ರೋಗಗಳಿಗೆ ರಾಮಬಾಣ ಚಿಕಿತ್ಸೆ Marigold Flower, ಇಲ್ಲಿವೆ 10 ಲಾಭಗಳು

ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್​ನ ಒಂದು ತಂಡದ ವಾದದ ಪ್ರಕಾರ 2019ರ ಬೇಸಿಗೆ ಕಾಲದಲ್ಲಿ ವೈರಸ್​ ಭಾರತದಲ್ಲಿ ಹುಟ್ಟಿದೆ. ಕಲುಷಿತ ನೀರಿನ ಮೂಲಕ ಪ್ರಾಣಿಗಳಿಂದ ಮಾನವನಿಗೆ ಹರಡಿದೆ. ಬಳಿಕ ವುಹಾನ್​ಗೆ ವ್ಯಕ್ತಿಯೊಬ್ಬರ ಪ್ರಯಾಣದ ಮೂಲಕ ಹರಡಿದ್ದು, ಅದನ್ನು ಮೊದಲಿಗೆ ಪತ್ತೆಹಚ್ಚಲಾಯಿತು ಎಂದಿದ್ದಾರೆ.

ರೈಲ್ವೆ ಪ್ರಯಾಣಿಕರೇ ಎಚ್ಚರ! ನಿಲ್ದಾಣಕ್ಕೆ ತೆರಳುವ ಮುನ್ನ ನಿಮ್ಮ ಟಿಕೆಟ್ ಅಸಲಿಯೇ/ನಕಲಿಯೇ ಪರಿಶೀಲಿಸಿ

ಆದರೆ, ಇದನ್ನು ಸ್ಕಾಟ್​ಲೆಂಡ್​ನ ಗ್ಲಾಸ್ಗೋ ಯೂನಿವರ್ಸಿಟಿಯ ಪರಿಣಿತ ಸಂಶೋಧಕ ಡೇವಿಡ್​ ರಾಬರ್ಟ್​ಸನ್​ ಅಲ್ಲಗೆಳೆದಿದ್ದಾರೆ. ಸಂಶೋಧನೆ ದೋಷಪೂರಿತವಾಗಿದೆ ಎಂದಿರುವ ಡೇವಿಡ್​, ಇದು ಕೊರೊನಾ ವೈರಸ್ ಬಗೆಗಿನ ನಮ್ಮ ತಿಳುವಳಿಕೆಗೆ ಏನನ್ನೂ ಸೇರಿಸುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ 'ವಜ್ರ' ಪತ್ತೆ, ತನಿಖೆ ನಡೆಸುವಂತೆ ಭೂವಿಜ್ಞಾನಿಗಳಿಗೆ ಆದೇಶಿಸಿದ ಸರ್ಕಾರ

Trending News