ನವದೆಹಲಿ : ಕಳಪೆ ಗುಣಮಟ್ಟದ ಔಷಧಿ ಸರಬರಾಜಿಗೆ ಸಂಬಂಧಿಸಿದಂತೆ ಚೀನಾದ 8 ಔಷಧಿ ತಯಾರಿಕಾ ಕಂಪನಿಗಳಿಗೆ ಭಾರತ ಸರ್ಕಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಅವು ಶೀಘ್ರದಲ್ಲಿಯೇ ಕಪ್ಪು ಪಟ್ಟಿಗೆ ಸೇರುವ ಸಾಧ್ಯತೆಯಿದೆ.
ಡ್ರಗ್ ನಿಯಂತ್ರಕ ಜನರಲ್ ಆಫ್ ಇಂಡಿಯಾದ (ಡಿಸಿಜಿಐ) ವಿಶೇಷ ತಪಾಸಣೆ ತಂಡವು ಚೀನಾದಲ್ಲಿ ಎಂಟು ಕಂಪನಿಗಳನ್ನು ಪರಿಶೀಲಿಸಿದ ನಂತರ ನೋಟೀಸ್ ನೀಡಿದೆ.
ಎಂಎನ್ಎಸ್ಎಸ್ ದಾಖಲೆಗಳ ಪ್ರಕಾರ, ಎಂಟು ಕಂಪನಿಗಳಾದ ಕ್ವಿಲು ಟಿನ್ಹೆ ಫಾರ್ಮಾಸ್ಯುಟಿಕಲ್ಸ್, ಎಂ /ಎಸ್ ಹಿನಾನ್ ಕ್ಸಿನ್ಷಿಯಾಂಗ್ ಫಾರ್ಮಾಸ್ಯುಟಿಕಲ್ಸ್, ಎಂ/ಎಸ್ ಝುಹೈ ಯುನೈಟೆಡ್ ಲಾಬ್ರೊಟರೀಸ್, ಎಮ್/ಎಸ್ ಗುವಾಂಗ್ಝೌ ಬೈಯಿನ್ಷಾನ್ ಫಾರ್ಮಾಸ್ಯುಟಿಕಲ್ಸ್, ಎಮ್/ಎಸ್ ಶೌಗಾಂಗ್ ಫುಕಾಂಗ್ ಫಾರ್ಮಾಸ್ಯುಟಿಕಲ್ಸ್, ಎಂ/ಎಸ್ ಕ್ಯುಲು ಆಂಟಿಬಯೋಟಿಕ್ಸ್ (ಲಿನಿ) ಫಾರ್ಮಾಸ್ಯುಟಿಕಲ್ಸ್, ಎಂ/ಎಸ್ ಕಿಂಡಾವೊ ಬ್ರೈಟ್ಮೂನ್ ಸೀವುಡ್ಸ್ ಮತ್ತು ಎಂ/ಎಸ್ ಶಾಂಗ್ಹೋಯಿ ಕ್ಸಿಯಾಂಡಿಯಾ ಹ್ಯಾಸೆನ್ (ಶಾಂಗ್ಕಿಯು) ಫಾರ್ಮಾಸ್ಯುಟಿಕಲ್ಸ್ ಗಳಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ಡಿಸಿಜಿಐ ಮೂಲದ ಪ್ರಕಾರ, ಕಪ್ಪುಪಟ್ಟಿಯನ್ನು ಪಡೆಯುವ ಅಂಚಿನಲ್ಲಿರುವ ಕಂಪನಿಗಳು ಪ್ರಸ್ತುತ ಭಾರತೀಯ ಔಷಧ ತಯಾರಕರಿಗೆ ದೊಡ್ಡ ಪ್ರಮಾಣದ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುತ್ತಿವೆ.
"ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಕಂಪನಿಗಳು ಒದಗಿಸುತ್ತಿವೆ ಮತ್ತು ಅವುಗಳ ವಿರುದ್ಧ ಕ್ರಮ ಶೀಘ್ರದಲ್ಲೇ ಸರಕಾರ ನಿರ್ಧರಿಸಲಿದೆ. ಭಾರತಕ್ಕೆ ಔಷಧಿಗಳ ಗುಣಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವಿಲ್ಲದ ಕಾರಣ ಇದು ಕಠಿಣ ಕ್ರಮ ಕೈಗೊಳ್ಳಲಾಗಿದೆ" ಎಂದು ಹಿರಿಯ DCGI ಅಧಿಕಾರಿ ಹೇಳಿದ್ದಾರೆ.
ಚೀನಾ ಕಂಪನಿಗಳ ವಿರುದ್ಧ ಭಾರತ ತೆಗೆದುಕೊಂಡಿರುವ ಕ್ರಮದಿಂದಾಗಿ ಕ್ಯಾನ್ಸರ್ ನಂತಹ ಪ್ರಮುಖ ಖಾಯಿಲೆಗಳಳನ್ನು ಒಳಗೊಂಡಂತೆ ಭಾರತ ಔಷಧಿಗಳ ಸಮಸ್ಯೆಯನ್ನು ಎದುರಿಸಲಿದೆ ಎಂದು ಮೂಲಗಳು ತಿಳಿಸಿವೆ.
ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಶೇ.70 ರಷ್ಟು ಔಷಧಿಗಳ ತಯಾರಿಕೆಗೆ ಚೀನಾದಿಂದ ಶೇಕಡಾ 70 ಕಚ್ಚಾವಸ್ತುಗಳ ಪೂರೈಕೆಯಾಗುತ್ತಿತ್ತು ಎನ್ನಲಾಗಿದೆ.
ಸಂಸತ್ತಿಗೆ ನೀಡಲಾದ ಅಂಕಿ ಅಂಶಗಳ ಪ್ರಕಾರ, 2016-17ರಲ್ಲಿ 12,254.97 ಕೋಟಿ ರೂಪಾಯಿಗಳ ಸಕ್ರಿಯ ಔಷಧೀಯ ಪದಾರ್ಥಗಳನ್ನು (ಎಪಿಐಗಳು) ಆಮದು ಮಾಡಿಕೊಳ್ಳಲಾಗಿತ್ತು. 2015-16ರ ಅಂಕಿ ಅಂಶಗಳು 13,853.20 ಕೋಟಿ ರೂಪಾಯಿಗಳಾಗಿವೆ. (ಎಪಿಐ ಔಷಧಿ ಉತ್ಪನ್ನದ ಜೈವಿಕವಾಗಿ ಕ್ರಿಯಾತ್ಮಕ ಅಂಶವನ್ನು ಉಲ್ಲೇಖಿಸುತ್ತದೆ.)
2014-15ರಲ್ಲಿ ಎಪಿಐ ಆಮದು 12,757.96 ಕೋಟಿ ರೂ. ಮತ್ತು 2013-14ನೇ ಸಾಲಿನಲ್ಲಿ 12,061.53 ಕೋಟಿ ರೂ.ಗಳಾಗಿತ್ತು.