ಪ್ರತಿ ವರ್ಷ ಪ್ರಪಂಚದಾದ್ಯಂತ ಮಾರ್ಚ್ ತಿಂಗಳನ್ನು ಮಹಿಳಾ ಇತಿಹಾಸದ ತಿಂಗಳು ಎಂದು ಗುರುತಿಸಲಾಗಿದೆ, ಈ ತಿಂಗಳನ್ನು ಪ್ರಮುಖವಾಗಿ ಮಹಿಳೆಯರ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಸಾಧನೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಮಾರ್ಚ್ 8 ತಾರೀಖನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.
ಯುನೆಸ್ಕೋ ಪ್ರಕಾರ, ಅಂತರಾಷ್ಟ್ರೀಯ ಮಹಿಳಾ ದಿನವು (International Women's Day) ಮೊದಲು ಉತ್ತರ ಅಮೇರಿಕಾ ಮತ್ತು ಯುರೋಪ್‌ನಾದ್ಯಂತ ಇಪ್ಪತ್ತನೇ ಶತಮಾನದ ಆರಂಭದಲ್ಲಿ ತೀವ್ರಗೊಂಡ ಕಾರ್ಮಿಕ ಚಳುವಳಿಗಳ ಹಿನ್ನಲೆಯಲ್ಲಿ ಆಚರಣೆಗೆ ಬಂದಿತು.ಇದನ್ನು ಸಮಾಜವಾದಿ ಪಕ್ಷ ಆಫ್ ಅಮೇರಿಕಾ ನ್ಯೂಯಾರ್ಕ್‌ನಲ್ಲಿ 1908 ರಲ್ಲಿ ಗಾರ್ಮೆಂಟ್ ಕಾರ್ಮಿಕರ ಮುಷ್ಕರದ ಗೌರವಾರ್ಥವಾಗಿ ಸಮರ್ಪಿಸಲಾಯಿತು.ಗಾರ್ಮೆಂಟ್ ನಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಈ ಸಂದರ್ಭದಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು ಅಮೇರಿಕಾದಲ್ಲಿ ಫೆಬ್ರವರಿ 28 1909 ರಂದು ಆಚರಿಸಲಾಯಿತು.
1917 ರಲ್ಲಿ, ರಷ್ಯಾದಲ್ಲಿ ಮಹಿಳೆಯರು ಫೆಬ್ರವರಿಯ ಕೊನೆಯ ಭಾನುವಾರದಂದು "ಬ್ರೆಡ್ ಮತ್ತು ಪೀಸ್ (Bread and Peace)" ಘೋಷಣೆಯಡಿಯಲ್ಲಿ ಪ್ರತಿಭಟನೆ ಮತ್ತು ಮುಷ್ಕರವನ್ನು ಆಯ್ಕೆ ಮಾಡಿದರು (ಇದು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ 8 ಕ್ಕೆ ಬರುತ್ತದೆ).ಕೊನೆಗೆ ಈ ಚಳುವಳಿ ಅಂತಿಮವಾಗಿ ರಷ್ಯಾದಲ್ಲಿ ಮಹಿಳೆಯರ ಮತದಾನ ಹಕ್ಕು ಜಾರಿಗೆ ಬರಲು ಕಾರಣವಾಯಿತು.
ಇದನ್ನೂ ಓದಿ: International Women's Day 2022: ಭಾರತದಲ್ಲಿ ಎಲ್ಲಾ ಮಹಿಳೆಯರು ತಿಳಿದಿರಬೇಕಾದ 5 ನಾಗರಿಕ ಹಕ್ಕುಗಳು
1945 ರಲ್ಲಿ ವಿಶ್ವಸಂಸ್ಥೆಯ ಸನ್ನದು ಪ್ರಕಾರ ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನತೆಯ ತತ್ವವನ್ನು ದೃಢೀಕರಿಸುವ ಮೊದಲ ಅಂತರರಾಷ್ಟ್ರೀಯ ಒಪ್ಪಂದವಾಯಿತು.ಆದರೆ 1975 ರ ಮಾರ್ಚ್ 8 ರಂದು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಮೊದಲ ಅಧಿಕೃತ ಮಹಿಳಾ ದಿನವನ್ನು ಆಚರಿಸಿತು.ನಂತರ ಡಿಸೆಂಬರ್ 1977 ರಲ್ಲಿ, ಸಾಮಾನ್ಯ ಸಭೆ ಮಹಿಳಾ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ಶಾಂತಿಗಾಗಿ ವಿಶ್ವಸಂಸ್ಥೆಯ ದಿನವನ್ನು ಸದಸ್ಯ ರಾಷ್ಟ್ರಗಳು ತಮ್ಮ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಗಳಿಗೆ ಅನುಗುಣವಾಗಿ ವರ್ಷದ ಯಾವುದೇ ದಿನದಂದು ಆಚರಿಸಲು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂತಿಮವಾಗಿ, 1977 ರಲ್ಲಿ ವಿಶ್ವಸಂಸ್ಥೆಯು ಅದನ್ನು ಅಳವಡಿಸಿಕೊಂಡ ನಂತರ, ಅಂತರರಾಷ್ಟ್ರೀಯ ಮಹಿಳಾ ದಿನನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ. ಅಂದಿನಿಂದ ಸದಸ್ಯ ರಾಷ್ಟ್ರಗಳು ಮಾರ್ಚ್ 8 ರಂದು ಮಹಿಳಾ ಹಕ್ಕುಗಳು ಮತ್ತು ವಿಶ್ವಶಾಂತಿಗಾಗಿ ಅಧಿಕೃತ ವಿಶ್ವಸಂಸ್ಥೆ ರಜಾದಿನವೆಂದು ಘೋಷಿಸಲು ಸದಸ್ಯ ರಾಷ್ಟ್ರಗಳಿಗೆ ಸೂಚಿಸಲಾಯಿತು.
ಅಂತರಾಷ್ಟ್ರೀಯ ಮಹಿಳಾ ದಿನದ ಕುರಿತಾಗಿ ಯುನೆಸ್ಕೋ " ಅಂತರರಾಷ್ಟ್ರೀಯ ಮಹಿಳಾ ದಿನವು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಸಾಧಿಸುವ ನಿಟ್ಟಿನಲ್ಲಿ ಸಾಧಿಸಿದ ಪ್ರಗತಿಯನ್ನು ಆಚರಿಸಲು ಒಂದು ಸಂದರ್ಭವಾಗಿದೆ, ಆದರೆ ಆ ಸಾಧನೆಗಳನ್ನು ವಿಮರ್ಶಾತ್ಮಕವಾಗಿ ಪ್ರತಿಬಿಂಬಿಸಲು ಮತ್ತು ವಿಶ್ವಾದ್ಯಂತ ಲಿಂಗ ಸಮಾನತೆಯ ಕಡೆಗೆ ಹೆಚ್ಚಿನ ಆವೇಗಕ್ಕಾಗಿ ಶ್ರಮಿಸುತ್ತದೆ.ಮಹಿಳೆಯರ ಅಸಾಧಾರಣ ಕಾರ್ಯಗಳನ್ನು ಗುರುತಿಸಲು ಮತ್ತು ಪ್ರಪಂಚದಾದ್ಯಂತ ಲಿಂಗ ಸಮಾನತೆಯನ್ನು ಮುನ್ನಡೆಸಲು ಒಂದು ಏಕ ಶಕ್ತಿಯಾಗಿ ಒಟ್ಟಾಗಿ ನಿಲ್ಲುವ ದಿನವಾಗಿದೆ" ಎಂದು ಹೇಳುತ್ತದೆ.
ಪ್ರತಿ ವರ್ಷ ಒಂದೊಂದು ವಿಷಯವನ್ನು ಕೇಂದ್ರಿಕರಿಸುವ ವಿಶ್ವಸಂಸ್ಥೆಯು ಈ ಸಾರಿ 'ಸುಸ್ಥಿರ ನಾಳೆಗಾಗಿ ಇಂದಿನ ಲಿಂಗ ಸಮಾನತೆ'ಎನ್ನುವ ವಿಷಯದ ಅಡಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.