ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ನವಾಜ್ ಷರೀಫ್‌ಗೆ ಅನುಮತಿ ನೀಡಿದ ಲಾಹೋರ್ ಹೈಕೋರ್ಟ್

ನವಾಜ್ ಷರೀಫ್‌ಗೆ ನಾಲ್ಕು ವಾರಗಳ ಕಾಲ ವಿದೇಶ ಪ್ರವಾಸ ಮಾಡಲು ಅನುಮತಿ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Last Updated : Nov 18, 2019, 01:20 PM IST
ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ನವಾಜ್ ಷರೀಫ್‌ಗೆ ಅನುಮತಿ ನೀಡಿದ ಲಾಹೋರ್ ಹೈಕೋರ್ಟ್  title=
File Image IANS

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‌ಗೆ ಚಿಕಿತ್ಸೆಗಾಗಿ ನಾಲ್ಕು ವಾರಗಳ ಕಾಲ ವಿದೇಶ ಪ್ರವಾಸ ಮಾಡಲು ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ್ದು, ವೈದ್ಯಕೀಯ ವರದಿಗಳ ಆಧಾರದ ಮೇಲೆ ಈ ಅವಧಿಯನ್ನು ವಿಸ್ತರಿಸಬಹುದು ಎಂದು ತಿಳಿಸಿದೆ. ಡಾನ್ ನ್ಯೂಸ್ ಪ್ರಕಾರ, ಷರೀಫ್ ಅವರ ಭೇಟಿಗೆ ನಷ್ಟ ಪರಿಹಾರ ಬಾಂಡ್‌ಗಳನ್ನು ಭರ್ತಿ ಮಾಡಲು ಷರತ್ತು ವಿಧಿಸಿದ್ದ ಪ್ರಸಕ್ತ ಸರ್ಕಾರಕ್ಕೆ ಆಘಾತ ನೀಡಿರುವ ನ್ಯಾಯಾಲಯವು ಅವರ ಹೆಸರನ್ನು ನಿರ್ಗಮನ ನಿಯಂತ್ರಣ ಪಟ್ಟಿಯಿಂದ (ಇಸಿಎಲ್) ತೆಗೆದುಹಾಕುವಂತೆ ಆದೇಶಿಸಿದೆ.

ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನವಾಜ್ ಷರೀಫ್ ಅರ್ಜಿಯನ್ನು ಆಲಿಸಲು ಪ್ರಾರಂಭಿಸಿದ ದ್ವಿ ಸದಸ್ಯ ಪೀಠ ಸಂಜೆ 6 ರ ಸುಮಾರಿಗೆ ತೀರ್ಪು ನೀಡಿತು. ನ್ಯಾಯಾಲಯದ ಆದೇಶದಲ್ಲಿ, "ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಷರೀಫ್‌ಗೆ ನಾಲ್ಕು ವಾರಗಳ ಮಧ್ಯಂತರ ವ್ಯವಸ್ಥೆಯಾಗಿ ವಿದೇಶ ಪ್ರವಾಸಕ್ಕೆ ಒಂದು ಬಾರಿ ಅನುಮತಿ ನೀಡಲಾಗಿದೆ ಮತ್ತು ಅವರ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರಿಂದ ಪ್ರಮಾಣೀಕರಿಸಲ್ಪಟ್ಟ ನಂತರ ಅವರು ಪಾಕಿಸ್ತಾನಕ್ಕೆ ಹಿಂದಿರುಗಲಿದ್ದಾರೆ" ಎನ್ನಲಾಗಿದೆ.

ಪಿಎಂಎಲ್-ಎನ್ ಅಧ್ಯಕ್ಷ ಶಹಬಾಜ್ ಷರೀಫ್ ಈ ನಿರ್ಧಾರವನ್ನು ಒಪ್ಪಿಕೊಂಡರು ಮತ್ತು ನಾಲ್ಕು ವಾರಗಳಲ್ಲಿ ಅಥವಾ ವೈದ್ಯರು ಷರೀಫ್ ಅವರ ಆರೋಗ್ಯವನ್ನು ಪ್ರಮಾಣೀಕರಿಸಿದ ಬಳಿ ಷರೀಫ್ ಸ್ವತಃ ಪಾಕಿಸ್ತಾನಕ್ಕೆ ಮರಳಲು ಯೋಗ್ಯರಾಗಿದ್ದಾರೆ ಎಂದು ಹೇಳುವ ಅಫಿಡವಿಟ್ಗೆ ಸಹಿ ಹಾಕಿದರು. 

ಏರ್ ಆಂಬುಲೆನ್ಸ್ ನವಾಜ್ ಷರೀಫ್ ಅವರನ್ನು ಕರೆದೊಯ್ಯುತ್ತದೆ ಎಂದು ಶಹಬಾಜ್ ಷರೀಫ್ ಹೇಳಿದ್ದಾರೆ. ನವಾಜ್ ಸೋಮವಾರ ಲಂಡನ್‌ಗೆ ಹೋಗುವ ನಿರೀಕ್ಷೆಯಿದೆ. ತೀರ್ಪಿಗೆ ಪ್ರತಿಕ್ರಿಯಿಸಿದ ಆಡಳಿತಾರೂಢ ಪಿಟಿಐನ ಸೆನೆಟರ್ ಫೈಸಲ್ ಜಾವೇದ್ ಅವರು ಲಿಖಿತ ಆದೇಶ ಲಭ್ಯವಾದ ನಂತರ ನ್ಯಾಯಾಲಯದ ತೀರ್ಪನ್ನು ಮೇಲ್ಮನವಿ ಸಲ್ಲಿಸಬೇಕೆ/ಬೇಡವೇ ಎಂದು ನಿರ್ಧರಿಸಲಾಗುವುದು ಎಂದು ಹೇಳಿದರು.

ನ್ಯಾಯಾಲಯದ ತೀರ್ಪುಗಳನ್ನು ಸರ್ಕಾರ ಯಾವಾಗಲೂ ಗೌರವಿಸುತ್ತದೆ ಎಂದು ಮಾಹಿತಿ ವಿಷಯಗಳಲ್ಲಿ ಪ್ರಧಾನ ಮಂತ್ರಿಗಳ ವಿಶೇಷ ಸಹಾಯಕ ಫಿರ್ದೌಸ್ ಆಶಿಕ್ ಅವನ್ ಜಿಯೋ ನ್ಯೂಸ್‌ಗೆ ತಿಳಿಸಿದರು. 
 

Trending News