ನವದೆಹಲಿ: ಚೀನಾ ದೇಶವು ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ಸುದ್ದಿ ಆಂಕರ್ ನ್ನು ಅನಾವರಣ ಮಾಡಿದೆ. ಚೀನಾದ ಕ್ಸಿನ್ಹುಆ ಸುದ್ದಿ ಸಂಸ್ಥೆ ಬುಧವಾರ ವುಝೆನ್ ವಿಶ್ವ ಇಂಟರ್ನೆಟ್ ಸಮ್ಮೇಳನದಲ್ಲಿ ಆಂಕರ್ ಅನ್ನು ಪರಿಚಯಿಸಿತು. ಕ್ಸಿನ್ಹುಆ ಮತ್ತು ಚೀನೀ ಸರ್ಚ್ ಇಂಜಿನ್ ಕಂಪನಿ ಸೊಗೊರಿಂದ ಕೃತಕ ಬುದ್ಧಿಮತ್ತೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ.
ಇಂಗ್ಲಿಷ್-ಮಾತನಾಡುವ AI ಆಂಕರ್ ಸ್ವತಃ ಕ್ಯಾಮೆರಾ ಮುಂದೆ ಸ್ಕ್ರಿಪ್ಟ್ ಅನ್ನು ಓದುವ ಮೂಲಕ ಸ್ವತಃ ತನ್ನ ಪರಿಚಯವನ್ನು ಹೇಳಿಕೊಂಡನು. ಕ್ಸಿನ್ಹುಆ ಜೊತೆಯಲ್ಲಿ ನಿಜವಾದ ಆಂಕರ್ ಆಗಿರುವ ಜಾಂಗ್ ಝಾವೊ ಮೇಲೆ ಈ ರೊಬೊಟ್ ರೂಪಿಸಲ್ಪಟ್ಟಿದೆ.
Xinhua's first English #AI anchor makes debut at the World Internet Conference that opens in Wuzhen, China Wednesday pic.twitter.com/HOkWnnfHdW
— China Xinhua News (@XHNews) November 7, 2018
"ಹಲೋ, ನಾನು ಇಂಗ್ಲಿಷ್ ಕೃತಕ ಬುದ್ಧಿಮತ್ತೆ ಆಂಕರ್ ಆಗಿದ್ದೇನೆ. ಕ್ಸಿನ್ಹುಆ ನ್ಯೂಸ್ ಏಜೆನ್ಸಿಯಲ್ಲಿ ಇದು ನನ್ನ ಮೊದಲ ದಿನ. ಕ್ಸಿನ್ಹುಆ ಜೊತೆಗಿನ ನೈಜ ಆಂಕರ್, ಜಾಂಗ್ ಝಾವೋನಲ್ಲಿ ನನ್ನ ಧ್ವನಿ ಮತ್ತು ನೋಟವನ್ನು ರೂಪಿಸಲಾಗಿದೆ "ಎಂದು ರೋಬೋಟ್ ಸ್ವತಃ ಪರಿಚಯಿಸಿಕೊಂಡನು.
"ಮಾಧ್ಯಮ ಉದ್ಯಮದ ಅಭಿವೃದ್ಧಿಯು ಅಂತರರಾಷ್ಟ್ರೀಯ ಮುಂದುವರಿದ ತಂತ್ರಜ್ಞಾನಗಳ ಜೊತೆಗೆ ನಿರಂತರವಾದ ಹೊಸತನ ಅವಶ್ಯಕವಾಗಿರುತ್ತೆ. ಈ ಹಿನ್ನಲೆಯಲ್ಲಿ ಟೆಕ್ಸ್ಟ್ ಗಳನ್ನು ನನ್ನ ಸಿಸ್ಟಮ್ನಲ್ಲಿ ನಿರಂತರವಾಗಿ ಟೈಪ್ ಮಾಡಲಾಗುವುದು ಎಂದು ಆ ರೋಬೋಟ್ ತಿಳಿಸಿದೆ.
ಆಂಕರ್ ಅನ್ನು ಧ್ವನಿ, ನಡವಳಿಕೆ ಮತ್ತು ನೈಜ ಆಂಕರ್ ಮುಖದ ಅಭಿವ್ಯಕ್ತಿಗಳನ್ನು ಅನುಕರಿಸುವ ಮೂಲಕ ಅಭಿವೃದ್ಧಿಪಡಿಸಲಾಗಿದೆ ಎಂದು ಕ್ಸಿನ್ಹುಆ ಹೇಳಿದರು, ಅದು ರೋಬಾಟ್ನಂತೆ ಕಾಣಿಸುವುದಿಲ್ಲ ಎಂದು ಹೇಳಲಾಗಿದೆ.