ಬೆಂಗಳೂರು: ಇಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಪದ್ಮನಾಭನಗರದ ಅವರ ನಿವಾಸದಲ್ಲಿ ಆಸ್ಟ್ರೇಲಿಯಾದ ಡೆಪ್ಯೂಟಿ ಕಾನ್ಸುಲೇಟ್ ಜನರಲ್ ಜಾನ್ ಬೋನಾರ್ ಅವರು ಭೇಟಿಯಾದರು. ಇದೇ ಸಂದರ್ಭದಲ್ಲಿ ಇಬ್ಬರು ಕರ್ನಾಟಕ ಚುನಾವಣೆಯ ಕುರಿತಾಗಿ ಚರ್ಚಿಸಿದರು.
ತಮ್ಮ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡೆಪ್ಯೂಟಿ ಕಾನ್ಸುಲೇಟ್ ಜನರಲ್ ಜಾನ್ ಬೋನಾರ್ ಆಸ್ಟ್ರೇಲಿಯಾ ಮತ್ತು ಭಾರತ ಎರಡೂ ದೇಶಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಆದ್ದರಿಂದ ಇಂದಿನ ಭೇಟಿಯ ವೇಳೆ ಚುನಾವಣೆಗೆ ಸಂಭಂದಿಸಿದ ವಿಷಯಗಳಲ್ಲದೇ ರಾಜ್ಯದಲ್ಲಿನ ಭ್ರಷ್ಟಾಚಾರ, ಕಾವೇರಿ ನದಿ ವಿವಾದ ಮಾತುಕತೆ ನಡೆಸಿದೆವು ಎಂದರು ಅಲ್ಲದೆ. ಅಲ್ಲದೆ ಕರ್ನಾಟಕದ ಜನರ ಬಗ್ಗೆ ದೇವೇಗೌಡ ಅಭಿಮಾನ ಮತ್ತು ಅವರು ಪ್ರಧಾನಿಯಾಗಿ ಮಾಡಿದ್ದ ಕೆಲಸಗಳನ್ನು ಅವರು ಶ್ಲಾಘಿಸಿದರು.
ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾತನಾಡುತ್ತಾ "ಚುನಾವಣೆಗಳು ನಡೆಯುವಾಗ ಹೀಗೆ ರಾಜಕೀಯ ಮುಖಂಡರೊಂದಿಗೆ ಅವರು ಚರ್ಚೆ ನಡೆಸುವುದು ಸಾಮಾನ್ಯ ವಿಷಯ ಚರ್ಚೆಯ ವೇಳೆ ರಾಜ್ಯದಲ್ಲಿರುವ ಲೋಕಾಯುಕ್ತ, ಕೆಪಿಎಸ್ಸಿ ಅವ್ಯವಸ್ಥೆ ಬಗ್ಗೆ ವಿವರಿಸಿದ್ದೇನೆ" ಎಂದರು.