ಮುಂಬೈ: ಈಗ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ ಈಗ ಬೃಹತ್ ವಿಶ್ವ ದಾಖಲೆಯ ಹೊಸ್ತಿಲಲ್ಲಿದ್ದಾರೆ.36 ವರ್ಷ ವಯಸ್ಸಿನ ಕೊಹ್ಲಿ, ಟೂರ್ನಿಯ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಕೇವಲ 263 ರನ್‌ಗಳ ಅವಶ್ಯಕತೆಯಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ರಿಸ್ ಗೇಲ್ 17 ಪಂದ್ಯಗಳಿಂದ 52.73 ಸರಾಸರಿಯಲ್ಲಿ 791 ರನ್ ಗಳಿಸಿದ್ದಾರೆ ಮತ್ತು 88.77 ಸ್ಟ್ರೈಕ್-ರೇಟ್ ಹೊಂದಿದ್ದು, ಇದರಲ್ಲಿ ಮೂರು ಶತಕಗಳು ಮತ್ತು ಒಂದು ಅರ್ಧಶತಕಗಳು ಸೇರಿವೆ. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ಹಿರಿಮೆ ಗೇಲ್ ಅವರದ್ದಾಗಿದೆ.ಇನ್ನೊಂದೆಡೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ 13 ಪಂದ್ಯಗಳಿಂದ ಕೊಹ್ಲಿ 88.16 ರ ಅದ್ಭುತ ಸರಾಸರಿಯಲ್ಲಿ 529 ರನ್ ಗಳಿಸಿದ್ದಾರೆ ಮತ್ತು ಐದು ಅರ್ಧಶತಕಗಳೊಂದಿಗೆ 92.32 ಸ್ಟ್ರೈಕ್-ರೇಟ್ ಹೊಂದಿದ್ದಾರೆ.
ಇದನ್ನೂ ಓದಿ: ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ.. ಮಹಾಕುಂಭ ಮೇಳಕ್ಕೆ ಹೊರಟಿದ್ದ 18 ಜನ ಸಾವು.. !
ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
ಕ್ರಿಸ್ ಗೇಲ್ - 17 ಪಂದ್ಯಗಳಿಂದ 791 ರನ್
ಮಹೇಲ ಜಯವರ್ಧನ - 22 ಪಂದ್ಯಗಳಿಂದ 742 ರನ್
ಶಿಖರ್ ಧವನ್ - 10 ಪಂದ್ಯಗಳಿಂದ 701 ರನ್
ಕುಮಾರ್ ಸಂಗಕ್ಕಾರ - 22 ಪಂದ್ಯಗಳಿಂದ 683 ರನ್
ಸೌರವ್ ಗಂಗೂಲಿ - 13 ಪಂದ್ಯಗಳಿಂದ 665 ರನ್
ಜಾಕ್ವೆಸ್ ಕಾಲಿಸ್ - 17 ಪಂದ್ಯಗಳಿಂದ 653 ರನ್
ರಾಹುಲ್ ದ್ರಾವಿಡ್ - 19 ಪಂದ್ಯಗಳಿಂದ 627 ರನ್
ರಿಕಿ ಪಾಂಟಿಂಗ್ - 18 ಪಂದ್ಯಗಳಿಂದ 593 ರನ್
ಶಿವನರೈನ್ ಚಂದ್ರಪಾಲ್ - 16 ಪಂದ್ಯಗಳಿಂದ 587 ರನ್
ಸನತ್ ಜಯಸೂರ್ಯ - 20 ಪಂದ್ಯಗಳಿಂದ 536 ರನ್
ವಿರಾಟ್ ಕೊಹ್ಲಿ - 13 ಪಂದ್ಯಗಳಿಂದ 529 ರನ್
ಇದನ್ನೂ ಓದಿ: ಮದುವೆ ಮಂಟಪದ ಬಾಡಿಗೆ ದುಬಾರಿನಾ? ಹಾಗಾದ್ರೆ ಇಲ್ಲಿದೆ ಕೇವಲ 2 ಸಾವಿರ ರೂ. ಮಂಟಪ..!
ವಿರಾಟ್ ಕೊಹ್ಲಿ ಈಗ ನಿರಂತರವಾಗಿ ಸುದೀರ್ಘ ಇನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ.ಇತ್ತೀಚಿಗೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿಯೂ ಅವರು ನಿರಾಶಾದಾಯಕ ಪ್ರದರ್ಶನ ನೀಡಿದ್ದರು.ಇದಾದ ನಂತರ ಅವರು 12 ವರ್ಷಗಳ ಬಳಿಕ ರಣಜಿ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು ಅಲ್ಲಿಯೂ ಕೂಡ ಅವರು ಬ್ಯಾಟಿಂಗ್ ವೈಫಲ್ಯವನ್ನು ಮುಂದುವರೆಸಿದರು.ಈಗ ಫೆಬ್ರವರಿ 19 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಾದರೂ ಅವರು ತಮ್ಮ ಎಂದಿನ ಫಾರ್ಮ್ ಗೆ ಬರುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.