8ನೇ ವೇತನ ಆಯೋಗ ಜಾರಿ ಬಗ್ಗೆ ಬಿಗ್ ಅಪ್ಡೇಟ್ ! ಸರ್ಕಾರಿ ನೌಕರರ ವೇತನದಲ್ಲಿ 44% ದಷ್ಟು ಹೆಚ್ಚಳ

8th Pay Cimmission : 8 ನೇ ವೇತನ ಆಯೋಗವನ್ನು ಸರ್ಕಾರ ಶೀಘ್ರದಲ್ಲೇ ಜಾರಿಗೆ ತರಲಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ. ಮುಂಬರುವ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಶೇ.44ಕ್ಕಿಂತ ಹೆಚ್ಚು ಹೆಚ್ಚಾಗಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ

Written by - Ranjitha R K | Last Updated : May 19, 2023, 02:10 PM IST
  • ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದರೆ ಶೀಘ್ರದಲ್ಲೇ ಸಿಹಿ ಸುದ್ದಿ
  • ಪಿಂಚಣಿದಾರರಿಗೆ ಕೂಡಾ ಆಗುವುದು ಹೆಚ್ಚಿನ ಲಾಭ
  • ಶೀಘ್ರದಲ್ಲೇ 8 ನೇ ವೇತನ ಆಯೋಗ ರಚನೆ
 8ನೇ ವೇತನ ಆಯೋಗ ಜಾರಿ ಬಗ್ಗೆ ಬಿಗ್ ಅಪ್ಡೇಟ್ ! ಸರ್ಕಾರಿ ನೌಕರರ ವೇತನದಲ್ಲಿ 44% ದಷ್ಟು ಹೆಚ್ಚಳ   title=

ಬೆಂಗಳೂರು : ನೀವು ಕೇಂದ್ರ ಉದ್ಯೋಗಿಯಾಗಿದ್ದರೆ ಈ ಸಂದೇಶವು ನಿಮಗೆ ತುಂಬಾ ಉಪಯುಕ್ತವಾಗಿರುತ್ತದೆ. ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದರೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ಇದರೊಂದಿಗೆ ಪಿಂಚಣಿದಾರರು ಕೂಡಾ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಸರ್ಕಾರದ 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಪ್ರಮುಖ ಅಪ್‌ಡೇಟ್‌ ಹೊರಬಿದ್ದಿದೆ. ಅದರಲ್ಲಿ ಸರ್ಕಾರ 8ನೇ ವೇತನ ಆಯೋಗವನ್ನು ಅತಿ ಶೀಘ್ರದಲ್ಲಿ ಜಾರಿಗೆ ತರಲಿದೆ ಎಂದು ತಿಳಿಸಲಾಗಿದೆ.

ಶೀಘ್ರದಲ್ಲೇ 8 ನೇ ವೇತನ ಆಯೋಗ ರಚನೆ : 
8ನೇ ವೇತನ ಆಯೋಗವನ್ನು ಸರ್ಕಾರ ಶೀಘ್ರದಲ್ಲೇ ಜಾರಿಗೆ ತರಲಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ. ಮುಂಬರುವ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಶೇ.44ಕ್ಕಿಂತ ಹೆಚ್ಚು ಹೆಚ್ಚಾಗಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ, ಫಿಟ್‌ಮೆಂಟ್ ಅಂಶವನ್ನು ಹೊರತುಪಡಿಸಿ, ಇತರ ರೀತಿಯಲ್ಲಿ ವೇತನವನ್ನು ಹೆಚ್ಚಿಸುವ ಸಾಧ್ಯತೆಯಿದೆ. 8ನೇ ವೇತನ ಆಯೋಗ  ಜಾರಿಯಾದ ನಂತರ ನೌಕರರ ಮಾಸಿಕ ವೇತನದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆ.

ಇದನ್ನೂ ಓದಿ : ಎರಡು ದಿನಗಳಲ್ಲಿ 1000 ರೂಪಾಯಿಗಳಷ್ಟು ಅಗ್ಗವಾಯಿತು ಚಿನ್ನ !

ಉದ್ಯೋಗಿಗಳ ವೇತನದಲ್ಲಿ ಆಗಲಿದೆ ಭಾರೀ ಏರಿಕೆ : 
7 ನೇ ವೇತನ ಆಯೋಗದ ಬ್ಯಾಂಡ್‌ನಲ್ಲಿ ಫಿಟ್‌ಮೆಂಟ್ ಅಂಶವು 2.57 ಪಟ್ಟು ಇತ್ತು. ಇದಾದ ನಂತರ ನೌಕರರ ವೇತನ ಶೇ.14.29ರಷ್ಟು ಏರಿಕೆಯಾಗಿ ಮೂಲ ವೇತನ 18 ಸಾವಿರ ರೂ.ಗೆ ತಲುಪಿತ್ತು. ಇದೀಗ  8ನೇ ವೇತನ ಆಯೋಗ ಜಾರಿಗೆ ಬಂದರೆ ಈ ಬಾರಿ ಫಿಟ್ ಮೆಂಟ್ ಅಂಶ 3.68 ಪಟ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಆಗ ನೌಕರರ ವೇತನವನ್ನು ಶೇ.44.44ರಷ್ಟು ಹೆಚ್ಚಿಸಲಾಗುವುದು. ಈ ಏರಿಕೆಯ ನಂತರ ನೌಕರರ ವೇತನ ಮೂಲ ವೇತನ 18 ಸಾವಿರದಿಂದ 26 ಸಾವಿರವಾಗಲಿದೆ. 

ಸರ್ಕಾರವು ಹಳೆಯ ಪೇ ಬ್ಯಾಂಡ್‌ನ ಆಧಾರದ ಮೇಲೆ 8 ನೇ ವೇತನ ಪಟ್ಟಿಯನ್ನು ಅನುಷ್ಟಾನಗೊಳಿಸಿದರೆ ಫಿಟ್‌ಮೆಂಟ್ ಅಂಶವನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಈ ಆಧಾರದ ಮೇಲೆ ಫಿಟ್ಮೆಂಟ್ ಅಂಶ 3.68ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಆಧಾರದ ಮೇಲೆ ನೌಕರರ ಕನಿಷ್ಠ ವೇತನ ಶೇ.44.44ರಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Credit-Debit Card ಗಳಿಂದ ಹಣ ಖರ್ಚು ಮಾಡುವ ನಿಯಮಗಳಲ್ಲಿ ಬದಲಾವಣೆ, ವಿತ್ತ ಸಚಿವಾಲಯದಿಂದ ಹೊಸ ನಿಯಮಗಳು ಜಾರಿ

ಸರ್ಕಾರ 8ನೇ ವೇತನ ಆಯೋಗವನ್ನು ಯಾವಾಗ ಜಾರಿಗೆ ತರಲಿದೆ?  :
ಸದ್ಯ 8ನೇ ವೇತನ ಆಯೋಗದ ಕುರಿತು ಕೇಂದ್ರ ಸರ್ಕಾರದ ಮುಂದೆ  ಯಾವುದೇ ಪ್ರಸ್ತಾವನೆ ಇಲ್ಲ. ಮತ್ತೊಂದು ಮೂಲಗಳ ಪ್ರಕಾರ, ಸರ್ಕಾರವು 2024 ರ ವೇಳೆಗೆ 8 ನೇ ವೇತನ ಆಯೋಗ ರಚನೆ ಮಾಡಿ 2026ರ ವೇಳೆಗೆ ಜಾರಿಗೆ ತರುತ್ತದೆ. ಈ ಹೊಸ ವೇತನ ಆಯೋಗವನ್ನು 2024 ರಲ್ಲಿ ಪರಿಚಯಿಸಲಾಗುವುದು ಎನ್ನುತ್ತಾರೆ ಅನೇಕ ಅರ್ಥಶಾಸ್ತ್ರಜ್ಞರು. ಮತ್ತೊಂದೆಡೆ, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು 8ನೇ ವೇತನ ಆಯೋಗದ ರೂಪದಲ್ಲಿ ನೌಕರರಿಗೆ ದೊಡ್ಡ ಮಟ್ಟದ ಉಡುಗೊರೆಯನ್ನು ನೀಡಲೂಬಹುದು ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ. 

ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗ ಜಾರಿಗೆ :
2013ರಲ್ಲಿ 7ನೇ ವೇತನ ಆಯೋಗ ರಚನೆಯಾಗಿರುವುದು ಗಮನಾರ್ಹ. ಅದರ ನಂತರ 2016 ರಲ್ಲಿ ಅದನ್ನು ಜಾರಿಗೆ ತರಲಾಯಿತು. ಇದಾದ ನಂತರ ನೌಕರರ ವೇತನದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಹೊಸ ವೇತನ ಆಯೋಗದ ಶಿಫಾರಸುಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಜಾರಿಗೆ ತರಲಾಗುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.  

ಹೆಚ್ಚುವುದು ವೇತನ ಮತ್ತು ಪಿಂಚಣಿ  :
1947 ರಿಂದ ಅನೇಕ ವೇತನ ಆಯೋಗಗಳನ್ನು ರಚಿಸಲಾಗಿದೆ. ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗವನ್ನು ರಚಿಸುತ್ತದೆ. ಈ ವೇತನ ಆಯೋಗದ ಶಿಫಾರಸಿನ ಆಧಾರದ ಮೇಲೆ ಕೇಂದ್ರ ನೌಕರರ ವೇತನ ಮತ್ತು ಪಿಂಚಣಿದಾರರ ಪಿಂಚಣಿಯನ್ನು ಹೆಚ್ಚಿಸಲಾಗುತ್ತದೆ. 

ಇದನ್ನೂ ಓದಿ : RBI Money: 535 ಕೋಟಿ ಹೊತ್ತೋಯ್ಯುತ್ತಿದ್ದ ಲಾರಿ, ದಾರಿಯಲ್ಲಿ ಇದ್ದಕ್ಕಿದಂತೆ ಇಂಜಿನ್ ನಿಂದ ಹೊಗೆ ಬರಲಾರಂಭಿಸಿತು... ಮುಂದೇನಾಯ್ತು?

 2016 ರಲ್ಲಿ 7ನೇ ವೇತನ ಆಯೋಗ ಜಾರಿಗೆ : 
ಏಳನೇ ವೇತನ ಆಯೋಗವನ್ನು ಯುಪಿಎ ಸರ್ಕಾರವು 24 ಫೆಬ್ರವರಿ 2014 ರಂದು ರಚಿಸಿತು. 2006 ಮತ್ತು 2016 ರಲ್ಲಿ, ಆರನೇ ಮತ್ತು ಏಳನೇ ವೇತನ ಆಯೋಗಗಳು ಕೇಂದ್ರ ನೌಕರರ ವೇತನದಲ್ಲಿ ಭಾರಿ ಹೆಚ್ಚಳವನ್ನು ಶಿಫಾರಸು ಮಾಡಿದ್ದವು . ಸರ್ಕಾರಗಳು ಅದನ್ನು ಒಪ್ಪಿಕೊಂಡು ಸರ್ಕಾರದ ಸಂಬಳವನ್ನು ಹೆಚ್ಚಿಸಿದವು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News