Indian Railways Rules : ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಇದಲ್ಲದೆ, ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ಭಾರತದಲ್ಲಿ ಪ್ರತಿದಿನ ಸುಮಾರು 2.5 ಕೋಟಿ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಖರೀದಿಸುವುದು ಕಡ್ಡಾಯವಾಗಿದೆ.
ರೈಲು ಹೊರಡುವ ಹಂತದಲ್ಲಿದ್ದು, ಟಿಕೆಟ್ ಕೌಂಟರ್ನಲ್ಲಿ ಸರತಿ ಸಾಲುಗಳು ಉದ್ದವಾದಾಗ, ಜನರು ಟಿಕೆಟ್ ಖರೀದಿಸುವುದು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಜನರು ಟಿಕೆಟ್ ಇಲ್ಲದೆ ರೈಲುಗಳನ್ನು ಹತ್ತುತ್ತಾರೆ. ಹೀಗೆ ಟಿಕೆಟ್ ಇಲ್ಲದೆ ರೈಲು ಹತ್ತಿದ ನಂತರ ಸಿಕ್ಕಿಬಿದ್ದರೆ ಸಮಸ್ಯೆಗಳನ್ನು ಎದುರಿಸುತ್ತಾರೆ.
ರೈಲ್ವೇಗೆ ಸಂಬಂಧಿಸಿದ ನಿಯಮ :
ಇನ್ನು ಮುಂದೆ ರೈಲು ಹತ್ತುವಾಗ ನಿಮ್ಮ ಕೈಯ್ಯಲ್ಲಿ ಟಿಕೆಟ್ ಇಲ್ಲ ಎಂದಾದರೆ ಭಯ ಪಡುವ ಅಗತ್ಯವಿಲ್ಲ. ಅಪರಾಧ ತನಿಖಾ ಬ್ಯೂರೋ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಭಾರತೀಯ ರೈಲ್ವೇಗೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳನ್ನು ಹಂಚಿಕೊಂಡಿದೆ. ಇದರ ಪ್ರಕಾರ ಪ್ರಯಾಣಿಕರು ರೈಲು ಹತ್ತುವ ವೇಳೆ ಟಿಕೆಟ್ ಖರೀದಿಸದೆ ಇದ್ದರೂ ಸಮಸ್ಯೆಯಾಗುವುದಿಲ್ಲ.
ಇದನ್ನೂ ಓದಿ : ಬೆಂಗಳೂರಿನಲ್ಲಿ ವಿನೂತನ ಜಿಯೊಂಗಿ ಬಿಸಿನೆಸ್ ಸೆಂಟರ್ ಉದ್ಘಾಟನೆ
ಟಿಟಿಇಯಿಂದ ಟಿಕೆಟ್ ಪಡೆಯಿರಿ :
ಹೊಸ ನಿಯಮಗಳ ಪ್ರಕಾರ ರೈಲಿನೊಳಗೆ ಟಿಕೆಟ್ ನೀಡುವ ಸೌಲಭ್ಯವನ್ನೂ ರೈಲ್ವೇ ಆರಂಭಿಸಿದೆ. ಈ ಸೌಲಭ್ಯದ ಅಡಿಯಲ್ಲಿ ಟಿಕೆಟ್ ಇಲ್ಲದ ಪ್ರಯಾಣಿಕರು ಟಿಟಿಇಯನ್ನು ಸಂಪರ್ಕಿಸಿ ಟಿಕೆಟ್ ಪಡೆಯಬಹುದಾಗಿದೆ. ನಿಮ್ಮ ಕೈಯ್ಯಲ್ಲಿ ಟಿಕೆಟ್ ಇಲ್ಲ ಎಂದಾದರೆ ನೀವು ರೈಲು ಹತ್ತಿದ ಕೂಡಲೇ ಟಿಟಿಇಯನ್ನು ಸಂಪರ್ಕಿಸಿ ನಿಮ್ಮ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಸಬೇಕು. ಆಗ ಮಾತ್ರ ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, ನಿಮ್ಮ ಟಿಕೆಟ್ ಅನ್ನು ಟಿಟಿಇಯಿಂದ ಪಡೆಯಬಹುದು.
ಹ್ಯಾಂಡ್ ಹೆಲ್ಡ್ ಮಿಶಿನ್ ಮೂಲಕ ಟಿಕೆಟ್ :
ಈ ಸೌಲಭ್ಯದಡಿಯಲ್ಲಿ ಟಿಟಿಇ ಬಳಿ ಹ್ಯಾಂಡ್ ಹೆಲ್ಡ್ ಮಿಶಿನ್ ಇದ್ದು, ಇದರ ಸಹಾಯದಿಂದ ಟಿಟಿಇ ರೈಲಿನೊಳಗೆ ಪ್ರಯಾಣಿಕರಿಗೆ ಟಿಕೆಟ್ ನೀಡಲಿದ್ದಾರೆ. ನೆನಪಿರಲಿ ನೀವು ಮೊದಲೇ ಟಿಕೆಟ್ ಪಡೆಯದೆ ಇದ್ದಲ್ಲಿ 250 ರೂಪಾಯಿ ದಂಡ ಮತ್ತು ನೀವು ರೈಲು ಹತ್ತಿದ ಸ್ಥಳದಿಂದ ಗಮ್ಯಸ್ಥಾನಕ್ಕೆ ಪ್ರಯಾಣ ದರವನ್ನು ಪಾವತಿಸಬೇಕು.
ಟಿಟಿಇ ಬಳಿ ಇರುವ ಮೆಷಿನ್ ಅನ್ನು ರೈಲ್ವೇ ಪ್ರಯಾಣಿಕರ ರಿಸರ್ವೇಶನ್ ಸಿಸ್ಟಮ್ ಸರ್ವರ್ಗೆ ಕನೆಕ್ಟ್ ಮಾಡಲಾಗಿರುತ್ತದೆ. ಪ್ರಯಾಣಿಕರು ಟಿಕೆಟ್ ಪಡೆಯಲು ಯಂತ್ರದಲ್ಲಿ ಹೆಸರು ಮತ್ತು ಸ್ಥಳವನ್ನು ನಮೂದಿಸಿದ ತಕ್ಷಣ ಟಿಕೆಟ್ ಹೊರಬರುತ್ತದೆ. ಈ ಮೆಷಿನ್ ಮೂಲಕ ರೈಲಿನಲ್ಲಿ ಖಾಲಿ ಇರುವ ಬರ್ತ್ಗಳ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು.
ಇದನ್ನೂ ಓದಿ : ಅಕೌಂಟ್ ನಂಬರ್ ಇಲ್ಲದೆಯೇ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ಫೀಚರ್ ಫೋನ್ನಲ್ಲಿಯೂ ತಿಳಿಯಬಹುದು!
ಟಿಕೆಟ್ ಕನ್ಫರ್ಮ್ ಮಾಡಿಸಲೂ ಬಹುದು :
ಯಾವುದೇ ಪ್ರಯಾಣಿಕರ ವೇಟಿಂಗ್ ಲಿಸ್ಟ್ ಕ್ಲಿಯರ್ ಆಗದೇ ಇದ್ದಲ್ಲಿ ಟಿಟಿಇ ಬಳಿ ಹೋಗಿ ಟಿಕೆಟ್ ತೋರಿಸಿ ಖಾಲಿ ಇರುವ ಸೀಟಿನ ಮಾಹಿತಿ ಪಡೆದು ಕನ್ಫರ್ಮ್ ಮಾಡಿಕೊಳ್ಳಬಹುದು. ಸೀಟು ಖಾಲಿಯಿದ್ದರೆ ಅಥವಾ ಯಾವುದೇ ಸೀಟಿನಲ್ಲಿ ಪ್ರಯಾಣಿಕರು ಬರದಿದ್ದರೆ ಟಿಟಿಇ ನಿಮಗೆ ಆ ಬರ್ತ್ ಅನ್ನು ನೀಡುತ್ತಾರೆ.
ಭಾರತೀಯ ರೈಲ್ವೆಯ ಅಧಿಕೃತ ಟಿಕೆಟಿಂಗ್ ಅಪ್ಲಿಕೇಶನ್ ಯುಟಿಎಸ್ ಅನ್ನು ನಿಮ್ಮ ಫೋನ್ನಲ್ಲಿ ಡೌನ್ಲೋಡ್ ಮಾಡಬಹುದು. ಈ ಅಪ್ಲಿಕೇಶನ್ ಮೂಲಕ ಪ್ಲಾಟ್ಫಾರ್ಮ್ ಟಿಕೆಟ್ಗಳು ಮತ್ತು ಟಿಕೆಟ್ಗಳನ್ನು ಬುಕ್ ಮಾಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.