ನವದೆಹಲಿ: ದೀಪಾವಳಿಯ ಮೊದಲು ಒಣ ಹಣ್ಣುಗಳು ಅಂದರ ಡ್ರೈ ಫ್ರೂಟ್ಸ್ ಬೆಲೆ ಅಗ್ಗವಾಗಿವೆ. ದೀಪಾವಳಿ ಹಬ್ಬದ ಸಮಯದಲ್ಲಿ ಇದೇ ಮೊದಲ ಬಾರಿಗೆ ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿ ಬೆಲೆಗಳು ಇಳಿಕೆಯಾಗಿರುವುದು ಕಂಡುಬಂದಿದೆ. ಕೊರೊನಾವೈರಸ್ (Coronavirus) ಸಾಂಕ್ರಾಮಿಕಕ್ಕೆ ಮುಂಚಿತವಾಗಿ ಒಣ ಹಣ್ಣುಗಳ ಬೆಲೆಗಳು ಇದ್ದದ್ದಕ್ಕಿಂತ ಈಗ ಬೆಲೆಗಳು ಸುಮಾರು 20 ಪ್ರತಿಶತದಷ್ಟು ಇಳಿದಿವೆ. ಈ ವರ್ಷದ ಆರಂಭದಿಂದ ಒಣ ಹಣ್ಣುಗಳ ಬೆಲೆಗಳ ಒಂದು ನೋಟ...
ಡ್ರೈಫ್ರೂಟ್ಸ್ | ಜನವರಿ (ರೂ / ಕೆಜಿ) | ನವೆಂಬರ್ (ರೂ / ಕೆಜಿ) |
ಗೋಡಂಬಿ | 800 | 650 |
ಒಣದ್ರಾಕ್ಷಿ | 240 | 220 |
ಕರ್ಜೂರ | 300 | 280 |
ಅಂಜೂರ | 750 | 800 |
ವಾಲ್ನಟ್ | 850 | 600 |
ಬಾದಾಮಿ | 650 | 590 |
ಸಣ್ಣ ಏಲಕ್ಕಿ | 5000 | 3000 |
ಪ್ರತಿನಿತ್ಯ ಒಣದ್ರಾಕ್ಷಿ ಪಾನೀಯ ಸೇವಿಸಿ ಈ ಏಳು ಸಮಸ್ಯೆಗಳಿಂದ ದೂರವಿರಿ
ಗೋಡಂಬಿ, ಒಣದ್ರಾಕ್ಷಿ ಬೆಲೆಗಳ ಕುಸಿತಕ್ಕೆ ಕಾರಣ?
ಸಾಮಾನ್ಯವಾಗಿ ಡ್ರೈ ಫ್ರೂಟ್ಸ್ ಬೆಲೆ ದೀಪಾವಳಿಯ ಮೊದಲು ಹೆಚ್ಚಾಗುತ್ತದೆ. ಆದರೆ ಕರೋನಾದಿಂದಾಗಿ ಶತಮಾನಗಳಷ್ಟು ಹಳೆಯದಾದ ಈ ಸಿದ್ಧಾಂತವೂ ತಲೆಕೆಳಗಾಗಿದೆ. ಅನೇಕ ವರ್ಷಗಳ ನಂತರ ಇಂತಹ ಕುಸಿತ ಕಂಡುಬಂದಿದೆ ಎಂದು ಡ್ರೈ ಫ್ರೂಟ್ಸ್ (Dry fruits) ವ್ಯಾಪಾರಿಗಳು ತಿಳಿಸಿದ್ದಾರೆ. ಲಾಕ್ಡೌನ್ಗೆ ಮುಂಚಿತವಾಗಿ ಒಣ ಹಣ್ಣುಗಳ ಬೆಲೆಯನ್ನು 15-20 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಆದರೆ ನಂತರ ಲಾಕ್ಡೌನ್ ಜಾರಿಗೆ ಬಂದಿದ್ದರಿಂದ ವ್ಯಾಪಾರವಿಲ್ಲದೆ ಗೋದಾಮುಗಳಲ್ಲಿ ಸರಕುಗಳನ್ನು ಸಂಗ್ರಹಿಸಲಾಯಿತು. ಈ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ದೀಪಾವಳಿಯ ಸಂದರ್ಭದಲ್ಲಿ ಬೆಲೆಗಳು ಕುಸಿಯುತ್ತಿವೆ ಎಂದು ಹೇಳಲಾಗಿದೆ.
ಡ್ರೈ ಫ್ರೂಟ್ಸ್ ಬೆಲೆಯಲ್ಲಿ ಭಾರೀ ಇಳಿಕೆ: ಬೆಲೆಗಳು ಎಷ್ಟು ಕಡಿಮೆಯಾಗಿದೆ ಎಂದು ತಿಳಿಯಿರಿ
ಆದರೆ ಶೀಘ್ರದಲ್ಲೇ ಬೆಲೆಗಳು ಹೆಚ್ಚಾಗುತ್ತವೆ:
ಒಣ ಹಣ್ಣುಗಳ ಬೆಲೆ ಸದ್ಯ ಕಡಿಮೆ ಇದ್ದರೂ ಇದನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ. ಏಕೆಂದರೆ ಲಾಕ್ಡೌನ್ ಮುಗಿದಿದ್ದು ಅನ್ಲಾಕ್ ಪ್ರಾರಂಭವಾಗಿದೆ. ಇದರೊಂದಿಗೆ ಮಾರುಕಟ್ಟೆಗಳು ಸಂಪೂರ್ಣವಾಗಿ ತೆರೆದಿವೆ. ನವೆಂಬರ್, ಡಿಸೆಂಬರ್ ಮದುವೆಗಳ ಋತುಮಾನ. ಈ ಹಿನ್ನಲೆಯಲ್ಲಿ ಶೀಘ್ರದಲ್ಲೇ ಒಣ ಹಣ್ಣುಗಳ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.