FD Interest Rate Hike: ಈ ಸರ್ಕಾರಿ ಬ್ಯಾಂಕುಗಳು ಎಫ್ಡಿ ಮೇಲೆ ನೀಡುತ್ತಿವೆ ಶೇ.8.40ರಷ್ಟು ಬಡ್ಡಿದರ!

FD Interest Rates: ಕೆಲವು ಬ್ಯಾಂಕ್‌ಗಳು ತಮ್ಮ ವಿಶೇಷ FD ಯ ಕೊನೆಯ ದಿನಾಂಕವನ್ನು ವಿಸ್ತರಿಸಿವೆ. ಈ ಅವಧಿಯಲ್ಲಿ, PNB, BOB, ಫೆಡರಲ್ ಬ್ಯಾಂಕ್ ಮತ್ತು IDBI ಬ್ಯಾಂಕ್ ಜನವರಿ 2024 ರಲ್ಲಿ ತಮ್ಮ FD ಗಳ ಬಡ್ಡಿದರಗಳನ್ನು ಬದಲಾಯಿಸಿವೆ. (Business News In Kannada)

Written by - Nitin Tabib | Last Updated : Feb 4, 2024, 05:10 PM IST
  • ಐಡಿಬಿಐ ಬ್ಯಾಂಕ್ ಎಫ್‌ಡಿ ಮೇಲಿನ ಬಡ್ಡಿ ದರವನ್ನೂ ಬದಲಾಯಿಸಿದೆ.
  • ಬದಲಾವಣೆಯ ನಂತರ, ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ 3% ರಿಂದ 7% ರ ನಡುವೆ FD ಬಡ್ಡಿ ದರಗಳನ್ನು ನೀಡುತ್ತಿದೆ.
  • ಹಿರಿಯ ನಾಗರಿಕರಿಗೆ, ಬ್ಯಾಂಕ್ 3.50% ರಿಂದ 7.50% ವರೆಗೆ ಬಡ್ಡಿಯನ್ನು ನೀಡುತ್ತದೆ. ಈ ದರಗಳನ್ನು ಜನವರಿ 17, 2024 ರಿಂದ ಜಾರಿಗೆ ತರಲಾಗಿದೆ.
FD Interest Rate Hike: ಈ ಸರ್ಕಾರಿ ಬ್ಯಾಂಕುಗಳು ಎಫ್ಡಿ ಮೇಲೆ ನೀಡುತ್ತಿವೆ ಶೇ.8.40ರಷ್ಟು ಬಡ್ಡಿದರ! title=

Bank FD Interest Rates:  ಹೊಸ ವರ್ಷದ ಆರಂಭದಿಂದ ಹಲವು ಬ್ಯಾಂಕ್‌ಗಳು ತಮ್ಮ ಎಫ್‌ಡಿ ಬಡ್ಡಿ ದರಗಳನ್ನು ಬದಲಾಯಿಸಿವೆ. ಇದಲ್ಲದೆ, ಕೆಲವು ಬ್ಯಾಂಕ್‌ಗಳು ತಮ್ಮ ವಿಶೇಷ ಎಫ್‌ಡಿ ಯೋಜನೆಗಳ ಕೊನೆಯ ದಿನಾಂಕವನ್ನು ಸಹ ವಿಸ್ತರಿಸಿವೆ. ಈ ಅವಧಿಯಲ್ಲಿ, PNB, BOB, ಫೆಡರಲ್ ಬ್ಯಾಂಕ್ ಮತ್ತು IDBI ಬ್ಯಾಂಕ್ ಜನವರಿ 2024 ರಲ್ಲಿ ತಮ್ಮ FD ಗಳ ಬಡ್ಡಿದರಗಳನ್ನು ಬದಲಾಯಿಸಿವೆ. 2024 ರ ಜನವರಿಯಲ್ಲಿ ಯಾವ ಬ್ಯಾಂಕ್‌ಗಳು ಬಡ್ಡಿದರಗಳನ್ನು ಹೆಚ್ಚಿಸಿವೆ ತಿಳಿದುಕೊಳ್ಳೋಣ ಬನ್ನಿ, (Business News In Kannada)

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಜನವರಿಯಲ್ಲಿ ಎರಡು ಬಾರಿ FD ಮೇಲಿನ ಬಡ್ಡಿ ದರವನ್ನು ಬದಲಾಯಿಸಿದೆ. ಅದೇ ಅವಧಿಯಲ್ಲಿ ಬ್ಯಾಂಕ್ ದರವನ್ನು 80 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 6.25% ರಿಂದ 7.05% ಗೆ 300 ದಿನಗಳ FD ಮೇಲಿನ ಬಡ್ಡಿ ದರವನ್ನು 80 bps ಹೆಚ್ಚಿಸಿದೆ. ಹಿರಿಯ ನಾಗರಿಕರಿಗೆ ಶೇ.7.55 ಹಾಗೂ ಸೂಪರ್ ಸೀನಿಯರ್ ನಾಗರಿಕರಿಗೆ ಶೇ.7.85 ಬಡ್ಡಿ ನೀಡಲಾಗುತ್ತಿದೆ. ಬದಲಾವಣೆಯ ನಂತರ, ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 3.50% ರಿಂದ 7.25% ವರೆಗೆ ಬಡ್ಡಿದರಗಳನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ, ಬ್ಯಾಂಕ್ 4% ರಿಂದ 7.75% ವರೆಗೆ ಬಡ್ಡಿಯನ್ನು ನೀಡುತ್ತಿದೆ.

ಫೆಡರಲ್ ಬ್ಯಾಂಕ್
500 ದಿನಗಳ ಬಡ್ಡಿ ದರವನ್ನು ಫೆಡರಲ್ ಬ್ಯಾಂಕ್ 7.75% ಕ್ಕೆ ಮತ್ತು ಹಿರಿಯ ನಾಗರಿಕರಿಗೆ 8.25% ಕ್ಕೆ ಹೆಚ್ಚಿಸಿದೆ. ಫೆಡರಲ್ ಬ್ಯಾಂಕ್ ಈಗ 500 ದಿನಗಳ ಅವಧಿಗೆ ಹಿರಿಯ ನಾಗರಿಕರಿಗೆ ಗರಿಷ್ಠ 8.40% ಆದಾಯವನ್ನು ನೀಡುತ್ತಿದೆ. 1 ಕೋಟಿಯಿಂದ 2 ಕೋಟಿ ರೂ.ವರೆಗಿನ ಮೊತ್ತದ ಹಿಂತೆಗೆದುಕೊಳ್ಳಲಾಗದ FDಗಳ ಬಡ್ಡಿ ದರವನ್ನು 7.90% ಕ್ಕೆ ಹೆಚ್ಚಿಸಲಾಗಿದೆ. ಬದಲಾವಣೆಯ ನಂತರ, ಫೆಡರಲ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳ ಅವಧಿಗೆ 3% ರಿಂದ 7.75% ರ ನಡುವೆ FD ಬಡ್ಡಿ ದರಗಳನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ, ಬ್ಯಾಂಕ್ 3.50% ರಿಂದ 8.25% ವರೆಗೆ ಬಡ್ಡಿದರಗಳನ್ನು ನೀಡುತ್ತದೆ.

ಇದನ್ನೂ ಓದಿ-Zero Income Tax Countries: ಎಷ್ಟು ಬೇಕಾದಷ್ಟೂ ಹಣ ಸಂಪಾದಿಸಿ, ಇಲ್ಲಿ ನೈಯಾ ಪೈಸೆ ಕೂಡ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ!

IDBI ಬ್ಯಾಂಕ್
ಐಡಿಬಿಐ ಬ್ಯಾಂಕ್ ಎಫ್‌ಡಿ ಮೇಲಿನ ಬಡ್ಡಿ ದರವನ್ನೂ ಬದಲಾಯಿಸಿದೆ. ಬದಲಾವಣೆಯ ನಂತರ, ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ 3% ರಿಂದ 7% ರ ನಡುವೆ FD ಬಡ್ಡಿ ದರಗಳನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ, ಬ್ಯಾಂಕ್ 3.50% ರಿಂದ 7.50% ವರೆಗೆ ಬಡ್ಡಿಯನ್ನು ನೀಡುತ್ತದೆ. ಈ ದರಗಳನ್ನು ಜನವರಿ 17, 2024 ರಿಂದ ಜಾರಿಗೆ ತರಲಾಗಿದೆ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ವೇತನದಲ್ಲಿ ನೇರ ₹9000 ಹೆಚ್ಚಳ! 8ನೇ ವೇತನ ಆಯೋಗದ ಸರದಿಯೂ ಬಂದಿದೆ!

ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಬರೋಡಾ ಹೊಸ ಮೆಚುರಿಟಿ ಅವಧಿಯೊಂದಿಗೆ ವಿಶೇಷ ಅಲ್ಪಾವಧಿಯ FD ಅನ್ನು ಪ್ರಾರಂಭಿಸಿದೆ. ಇದರಲ್ಲಿ ಗ್ರಾಹಕರು ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತಾರೆ. ಹೊಸ ದರಗಳು ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯಿಸುತ್ತವೆ ಮತ್ತು ಜನವರಿ 15, 2024 ರಿಂದ ಜಾರಿಗೆ ತರಲಾಗಿದೆ. ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7.10% ಬಡ್ಡಿಯನ್ನು ನೀಡುವ 360D (bob360) ಹೆಸರಿನ ಹೊಸ ಮೆಚುರಿಟಿ FD ಅನ್ನು ನೀಡಿದೆ. ಇದಲ್ಲದೆ, ಇದು ಹಿರಿಯ ನಾಗರಿಕರಿಗೆ 7.60% ಬಡ್ಡಿದರವನ್ನು ನೀಡುತ್ತದೆ. ಬದಲಾವಣೆಯ ನಂತರ, ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ 4.45% ರಿಂದ 7.25% ವರೆಗೆ ಬಡ್ಡಿಯನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತಿದೆ.

ಇದನ್ನೂ ನೋಡಿ-
 

Trending News