Free gas cylinderOn Holi : ಈ ಬಾರಿಯ ಹೋಳಿ ಹಬ್ಬ ಮಹಿಳೆಯರಿಗೆ ಸಂತಸದ ಸುದ್ದಿಯನ್ನು ಹೊತ್ತು ತಂದಿದೆ. ಮಾರ್ಚ್ 25ಕ್ಕೆ ಹೋಳಿ ಹಬ್ಬದ ಸಡಗರ. ಹಬ್ಬ ಹರಿದಿನ ಎಂದ ಕೂಡಲೇ ಪ್ರತಿ ಮನೆಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ಆಹಾರವನ್ನು ತಯಾರಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗದಂತೆ ಮುಂಚಿತವಾಗಿಯೇ ಹೆಚ್ಚುವರಿ ಸಿಲಿಂಡರ್ ಗಳ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಹಣದುಬ್ಬರದ ಈ ಕಾಲದಲ್ಲಿ ಹೆಚ್ಚುವರಿ ಸಿಲಿಂಡರ್ ಖರೀದಿಸುವುದು ಕೂಡಾ ಕಷ್ಟವೇ. ಆದರೆ, ಹೋಳಿ ಹಬ್ಬದ ಸಂದರ್ಭದಲ್ಲಿ ಉಚಿತ ಸಿಲಿಂಡರ್ ಪಡೆಯಬಹುದು. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಈ ಪ್ರಯೋಜನವನ್ನು ಪಡೆಯಬಹುದು.
ಉತ್ತರ ಪ್ರದೇಶ ಸರ್ಕಾರದ ಈ ಯೋಜನೆಯು ರಾಜ್ಯದ 1.75 ಕೋಟಿ ಜನರಿಗೆ ನೇರ ಪ್ರಯೋಜನವನ್ನು ನೀಡುತ್ತದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ ಎರಡು ಬಾರಿ ಉಚಿತ ಸಿಲಿಂಡರ್ ನೀಡಲು ಯೋಗಿ ಸರ್ಕಾರ ನಿರ್ಧರಿಸಿತ್ತು. ಇದರ ಪ್ರಕಾರ ಮೊದಲ ಸಿಲಿಂಡರ್ ಅನ್ನು ದೀಪಾವಳಿ ಸಂದರ್ಭದಲ್ಲಿ ನೀಡಲಾಗಿತ್ತು. ಇದೀಗ ಎರಡನೇ ಸಿಲಿಂಡರ್ ಅನ್ನು ರಾಜ್ಯ ಸರ್ಕಾರ ಹೋಳಿ ಹಬ್ಬದಂದು ನೀಡಲು ಹೊರಟಿದೆ.
ಇದನ್ನೂ ಓದಿ : ನೀವು ಕೂಡಾ ಎರಡಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದೀರಾ? ಹಾಗಿದ್ದರೆ ತಿಳಿದುಕೊಳ್ಳಿ ಈ ನಿಯಮ !
ಉಜ್ವಲ ಯೋಜನೆಯನ್ನು ಯಾವಾಗ ಪ್ರಾರಂಭಿಸಲಾಯಿತು? :
2016 ರಲ್ಲಿ ಪ್ರಧಾನಿ ಮೋದಿಯವರು ಉಜ್ವಲ ಯೋಜನೆಯನ್ನು ಪ್ರಾರಂಭಿಸಿದರು. ಇದರಡಿ ದೇಶಾದ್ಯಂತ 9 ಕೋಟಿ ಜನರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ. ಈ ಯೋಜನೆಯಡಿ ಸರ್ಕಾರವು ಪ್ರತಿ ಸಿಲಿಂಡರ್ ಮೇಲೆ ಸಬ್ಸಿಡಿ ನೀಡುತ್ತದೆ. ಈ ಮೊದಲು ಈ ಸಬ್ಸಿಡಿ 200 ರೂ.ಗಳಷ್ಟಿತ್ತು. ಆದರೆ ಈಗ ಇದನ್ನು 300 ರೂ.ಗೆ ಹೆಚ್ಚಿಸಲಾಗಿದೆ.
ಉಚಿತ LPG ಸಿಲಿಂಡರ್ ಪಡೆಯುವುದು ಹೇಗೆ? :
ಉತ್ತರ ಪ್ರದೇಶ ರಾಜ್ಯದ ನಿವಾಸಿಯಾಗಿದ್ದರೆ, ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಉಚಿತ ಎಲ್‌ಪಿಜಿ ಸಿಲಿಂಡರ್ ಗಾಗಿ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿರಬೇಕು.
ಉಜ್ವಲ ಯೋಜನೆಯ ನೋಂದಣಿ ಪ್ರಕ್ರಿಯೆ :
ಮೊದಲು ಉಜ್ವಲ ಗ್ಯಾಸ್ ಸಂಪರ್ಕಕ್ಕಾಗಿ ನೋಂದಾಯಿಸಿಕೊಳ್ಳಬೇಕು.
* ಈ ಯೋಜನೆಯ ಪ್ರಯೋಜನವನ್ನು ಪಡೆಯಲು, ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂಬ ಆಯ್ಕೆಯು ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.
* ಅಗತ್ಯವಿರುವ ಮಾಹಿತಿಯನ್ನು ಫಾರ್ಮ್‌ನಲ್ಲಿ ಸಂಪೂರ್ಣವಾಗಿ ಭರ್ತಿ ಮಾಡಿ.
* ನಿಮ್ಮ ಹತ್ತಿರದ ಎಲ್ಪಿಜಿ ಕೇಂದ್ರಕ್ಕೆ ಭೇಟಿ ನೀಡಿ ಫಾರ್ಮ್ ಅನ್ನು ಸಲ್ಲಿಸಿ.
* ಇದರೊಂದಿಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.
* ದಾಖಲೆ ಪರಿಶೀಲನೆಯ ನಂತರ, ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಒದಗಿಸಲಾಗುವುದು.
ಇದನ್ನೂ ಓದಿ : RBI News: ಈ ಬ್ಯಾಂಕ್‌ಗಳಿಗೆ ಕೋಟ್ಯಾಂತರ ರೂ. ದಂಡ ವಿಧಿಸಿದ ಆರ್‌ಬಿಐ, ಕಾರಣ ಏನ್ ಗೊತ್ತಾ!
ಅಗತ್ಯವಿರುವ ದಾಖಲೆಗಳು :
ಆಧಾರ್ ಕಾರ್ಡ್
ಮೊಬೈಲ್ ಸಂಖ್ಯೆ
ಪಾಸ್‌ಪೋರ್ಟ್ ಗಾತ್ರದ ಫೋಟೋ
ವಯಸ್ಸಿನ ಪ್ರಮಾಣಪತ್ರ
BPL ಪಟ್ಟಿಯಲ್ಲಿ ಹೆಸರು
ರೇಷನ್ ಕಾರ್ಡ್‌ನ ಪ್ರತಿ
ಬಿಪಿಎಲ್ ಕಾರ್ಡ್
ಯಾರು ಅರ್ಜಿ ಸಲ್ಲಿಸಬಹುದು? :
ಈ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಮಹಿಳೆಯಾಗಿರಬೇಕು ಮತ್ತು ಅವರ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.ಅರ್ಜಿದಾರರು ಬಿಪಿಎಲ್ ಕುಟುಂಬಕ್ಕೆ ಸೇರಿರಬೇಕು. ಬಿಪಿಎಲ್ ಕಾರ್ಡ್ ಹೊಂದಿರಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.