Gautam Adani:ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ತಮ್ಮ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರೆ. 62 ವರ್ಷದ ಗೌತಮ್ ಅದಾನಿ ನಿವೃತ್ತಿಯ ಘೋಷಿಸುವ ತಯಾರಿಯಲ್ಲಿದ್ದಾರೆ.ಕೆಲವೇ ವರ್ಷಗಳಲ್ಲಿ ಕಂಪನಿಯ ಸಾರಥ್ಯವನ್ನು ಮುಂದಿನ ಪೀಳಿಗೆಗೆ ಬಿಟ್ಟುಬಿಡುತ್ತಾರೆ.ಲೂಮ್ಬರ್ಗ್ಗೆ ನೀಡಿದ ಸಂದರ್ಶನದಲ್ಲಿ ಗೌತಮ್ ಅದಾನಿ ತಮ್ಮ ನಿವೃತ್ತಿ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಅವರ ಯೋಜನೆಯ ಪ್ರಕಾರ,ಅವರು 2030ರ ವೇಳೆಗೆ ಕಂಪನಿಯ ಜವಾಬ್ದಾರಿಯನ್ನು ಬೇರೆಯವರಿಗೆ ಹಸ್ತಾಂತರಿಸಲಿದ್ದಾರೆ. ಗೌತಮ್ ಅದಾನಿ ಅವರು 70 ನೇ ವಯಸ್ಸಿನಲ್ಲಿ ನಿವೃತ್ತಿಯನ್ನು ಯೋಜಿಸಿದ್ದಾರೆ.
ಗೌತಮ್ ಅದಾನಿ ಇಷ್ಟು ಬೇಗ ನಿವೃತ್ತಿ ಪಡೆಯುತ್ತಿರುವುದೇಕೆ?
ಗೌತಮ್ ಅದಾನಿ ತಮ್ಮ ನಿವೃತ್ತಿ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಬ್ಲೂಮ್ಬರ್ಗ್ಗೆ ನೀಡಿದ ಸಂದರ್ಶನದಲ್ಲಿ,ಅವರು 2030ರ ವೇಳೆಗೆ ಅದಾನಿ ಗ್ರೂಪ್ನ ಅಧ್ಯಕ್ಷ ಸ್ಥಾನವನ್ನು ತೊರೆಯುವುದಾಗಿ ಹೇಳಿದ್ದಾರೆ.ಅವರ ನಿವೃತ್ತಿಯ ನಂತರ, ಕಂಪನಿಯ ಜವಾಬ್ದಾರಿ ಅವರ ಇಬ್ಬರು ಪುತ್ರರು ಮತ್ತು ಇಬ್ಬರು ಸಹೋದರರ ಮಕ್ಕಳಿಗೆ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ. ಅದಾನಿ ನಿವೃತ್ತರಾದಾಗ,ಅವರ ನಾಲ್ಕು ವಾರಸುದಾರರು ಅಂದರೆ ಮಕ್ಕಳಾದ ಕರಣ್ ಅದಾನಿ ಮತ್ತು ಜೀತ್ ಅದಾನಿ ಮತ್ತು ಅವರ ಸಹೋದರನ ಮಕ್ಕಳಾದ ಪ್ರಣವ್ ಮತ್ತು ಸಾಗರ್ ಅದಾನಿ ಕುಟುಂಬ ಟ್ರಸ್ಟ್ನ ಸಮಾನ ಫಲಾನುಭವಿಗಳಾಗುತ್ತಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ : ಬಂಗಾರ ಖರೀದಿಸಲು ಬಯಸುವವರಿಗೆ ಇದು ಬೆಸ್ಟ್ ಟೈಮ್..ಮೊದಲ ಶ್ರಾವಣ ಸೋಮವಾರದಂದು ಚಿನ್ನದ ಬೆಲೆ ಇಷ್ಟೆ ನೋಡಿ
ಗೌತಮ್ ಅದಾನಿ ನಂತರ,ಅದಾನಿ ಗ್ರೂಪ್ನ ಕಮಾಂಡ್ ಯಾರ ಕೈಗೆ ? :
ಬ್ಲೂಮ್ಬರ್ಗ್ ವರದಿಯ ಪ್ರಕಾರ,ಕಂಪನಿಗಳಲ್ಲಿ ಯಾರು ಯಾವ ಜವಾಬ್ದಾರಿಗಳನ್ನು ಹೊಂದಿರುತ್ತಾರೆ ಎಂಬುದರ ಕುರಿತು ಗೌಪ್ಯ ಒಪ್ಪಂದ ಆಗಿರುತ್ತದೆ.ಇದರಲ್ಲಿ ಅದಾನಿ ಗ್ರೂಪ್ ಕಂಪನಿಗಳಲ್ಲಿನ ಷೇರುಗಳು ಮತ್ತು ಉತ್ತರಾಧಿಕಾರಿಗಳ ನಡುವಿನ ವರ್ಗಾವಣೆಯ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಪ್ರಸ್ತುತ ಗೌತಮ್ ಅದಾನಿ ಅವರ ಹಿರಿಯ ಮಗ ಕರಣ್ ಅದಾನಿ ಅದಾನಿ ಪೋರ್ಟ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರೆ,ಕಿರಿಯ ಮಗ ಜೀತ್ ಅದಾನಿ ಅದಾನಿ ಎಂಟರ್ಪ್ರೈಸಸ್ನ ನಿರ್ದೇಶಕರಾಗಿದ್ದಾರೆ.ಸಾಗರ್ ಅದಾನಿ,ಅದಾನಿ ಪೋರ್ಟ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಅದಾನಿ ಸಮೂಹದ ಅಧ್ಯಕ್ಷರು ಯಾರು? :
ಬ್ಲೂಮ್ಬರ್ಗ್ ವರದಿಯ ಪ್ರಕಾರ ಗೌತಮ್ ಅದಾನಿ ನಿವೃತ್ತಿಯ ನಂತರ ಅದಾನಿ ಗ್ರೂಪ್ ಅಧ್ಯಕ್ಷರ ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳುತ್ತಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ. ವರದಿಯ ಪ್ರಕಾರ ಕರಣ್ ಅದಾನಿ ಮತ್ತು ಪ್ರಣವ್ ಅದಾನಿ ಇದಕ್ಕೆ ಪ್ರಬಲ ಸ್ಪರ್ಧಿಗಳಾಗಲಿದ್ದಾರೆ.ವ್ಯವಹಾರದ ಸ್ಥಿರತೆಗೆ ಉತ್ತರಾಧಿಕಾರ ಬಹಳ ಮುಖ್ಯ ಎಂದು ಗೌತಮ್ ಅದಾನಿ ಹೇಳಿದರು. ಬದಲಾವಣೆಯು ಅತ್ಯಂತ ವ್ಯವಸ್ಥಿತವಾಗಿರಬೇಕು ಎಂಬ ಕಾರಣದಿಂದ ನಾನು ಆಯ್ಕೆಯನ್ನು ಎರಡನೇ ಪೀಳಿಗೆಗೆ ಬಿಟ್ಟಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : SBI ಖಾತೆದಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಸರ್ಕಾರ !ಗಭೀರವಾಗಿ ಪರಿಗಣಿಸುವಂತೆ ಸಲಹೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ