GDP Growth: ಜಾಗತಿಕವಾಗಿ, ಅನೇಕ ಅರ್ಥಶಾಸ್ತ್ರಜ್ಞರು ಜಗತ್ತು ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ ಎಂದು ಹೇಳುತ್ತಿರುವ. ಈ ವಾತಾವರಣದ ನಡುವೆಯೇ, ದೇಶದ ಆರ್ಥಿಕತೆಗೆ ಸಂಬಂಧಿಸಿದ ಕೆಟ್ಟ ಸುದ್ದಿಯೊಂದು ಪ್ರಕಟವಾಗಿದೆ. ವಾಸ್ತವದಲ್ಲಿ, ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಕತ್ತರಿ ಬಳಸಿ ದೇಶದ GDP ಬೆಳವಣಿಗೆಯ ಅಂದಾಜನ್ನು ಶೇ.7 ಕ್ಕಿಂತ ಕೆಳಕ್ಕಿಳಿಸಿದೆ. IMF ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಜುಲೈನಲ್ಲಿ ಶೇ.7.4 ರಿಂದ ಶೇ.6.8 ಕ್ಕೆ ಇಳಿಸಿದೆ. ಇದು ಈ ಮೊದಲು ವ್ಯಕ್ತಪಡಿಸಿದ್ದ ಅಂದಾಜಿಗಿಂತ ಶೇ.0.6ರಷ್ಟು ಕಡಿಮೆಯಾಗಿದೆ.
ಹಲವು ಸವಾಲುಗಳಿವೆ ಎಂದ ಐಎಂಎಫ್
ಐಎಂಎಫ್ ಪ್ರಕಾರ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು, ರಷ್ಯಾ-ಉಕ್ರೇನ್ ಯುದ್ಧದಿಂದ ಹದಗೆಡುತ್ತಿರುವ ಪರಿಸ್ಥಿತಿಯ ಹೊರತಾಗಿ, ಜಾಗತಿಕ ಆರ್ಥಿಕತೆಗೆ ತೊಂದರೆ ಹೆಚ್ಚಾಗಿದೆ. ಇದಲ್ಲದೆ, COVID-19 ಸಾಂಕ್ರಾಮಿಕದ ಸವಾಲುಗಳು ಇನ್ನೂ ಮುಗಿದಿಲ್ಲ. ಹೆಚ್ಚಿನ ಶಕ್ತಿ ಮತ್ತು ಆಹಾರದ ಬೆಲೆ ಆಘಾತಗಳು ದೀರ್ಘಾವಧಿಯ ಹಣದುಬ್ಬರಕ್ಕೆ ಕಾರಣವಾಗಬಹುದು ಎಂದು ವರದಿ ಹೇಳಿದೆ.
IMF ಪ್ರಕಾರ, ಸಾಲದ ಬಿಕ್ಕಟ್ಟು ಕಳವಳಕಾರಿ ವಿಷಯವಾಗಿದೆ. ಏಕಕಾಲದಲ್ಲಿ, ಕೇಂದ್ರೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿಯು ಹಣದುಬ್ಬರವನ್ನು ಕಡಿಮೆ ಮಾಡಲು ಸರಿಯಾದ ನಿಲುವನ್ನು ತಪ್ಪಾಗಿ ಲೆಕ್ಕಾಚಾರ ಮಾಡಬಹುದು ಎಂದು IMF ಎಚ್ಚರಿಸಿದೆ.
ಕಳೆದ ವಾರ ವಿಶ್ವಬ್ಯಾಂಕ್ 2022-23 ರ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಶೇ.6.5 ಕ್ಕೆ ತಗ್ಗಿಸಿತು, ಆದರೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ರಿಸರ್ವ್ ಬ್ಯಾಂಕ್ ಅಂದಾಜನ್ನು ಶೇ.7 ಕ್ಕೆ ಇಳಿಸಿವೆ ಎಂಬುದು ಇಲ್ಲಿ ಉಲ್ಲೇಖನೀಯ
IMF Growth Forecast: 2023
USA🇺🇸: 1%
Germany🇩🇪: -0.3%
France🇫🇷: 0.7%
Italy🇮🇹: -0.2%
Spain🇪🇸: 1.2%
Japan🇯🇵: 1.6%
UK🇬🇧: 0.3%
Canada🇨🇦: 1.5%
China🇨🇳: 4.4%
India🇮🇳: 6.1%
Russia🇷🇺: -2.3%
Brazil🇧🇷: 1%
Mexico🇲🇽: 1.2%
KSA🇸🇦: 3.7%
Nigeria🇳🇬: 3%
RSA🇿🇦: 1.1%https://t.co/VBrRHOfbIE #WEO pic.twitter.com/0TDJbgSuka— IMF (@IMFNews) October 11, 2022
ಇದನ್ನೂ ಓದಿ-Free Hongkong Trip: ಉಚಿತವಾಗಿ ಹಾಂಕಾಗ್ ಸುತ್ತುವ ಅವಕಾಶ, 5 ಲಕ್ಷ ಟಿಕೆಟ್ ಗಳು ಉಚಿತ, ಈ ರೀತಿ ಅಪ್ಪ್ಲೈ ಮಾಡಿ
2023 ರ ಮುನ್ಸೂಚನೆ ಏನು?
ಅದೇ ಸಮಯದಲ್ಲಿ, ಬೆಳವಣಿಗೆಯ ಮುನ್ಸೂಚನೆಯ ಕುಸಿತದ ಹೊರತಾಗಿಯೂ, 2022 ಮತ್ತು 2023 ರಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಉಳಿಯಲಿದೆ. IMF ಪ್ರಕಾರ, 2023 ರಲ್ಲಿ ಭಾರತದ GDP ಬೆಳವಣಿಗೆಯ ಮುನ್ಸೂಚನೆಯು 6.1% ಆಗಿರಲಿದೆ.
ಇದನ್ನೂ ಓದಿ-Diwali Bonus: ನಿಮ್ಮ ಬಳಿಯೂ ಪಡಿತರ ಚೀಟಿ ಇದ್ದರೆ, ಸರ್ಕಾರ ಕೊಡುತ್ತೆ ದೀಪಾವಳಿ ಬೋನಸ್
ಇದು ಪ್ರಸಕ್ತ ಹಣಕಾಸು ವರ್ಷಕ್ಕಿಂತ ಕಡಿಮೆಯಾದರೂ ಕೂಡ ಜಾಗತಿಕವಾಗಿ ಅತಿ ಹೆಚ್ಚಾಗಿದೆ. ಚೀನಾದ ಬೆಳವಣಿಗೆಯ ಬಗ್ಗೆ ಹೇಳುವುದಾದರೆ, ಇದು 2022 ರಲ್ಲಿ ಶೇ.3.2ರಷ್ಟು ಮತ್ತು 2023 ರಲ್ಲಿ ಶೇ.4.4 ರಷ್ಟು ಎಂದು ಅಂದಾಜಿಸಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.