Tomato Price Rs 30/KG : ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ದೇಶದ ಬಹುತೇಕ ಪ್ರದೇಶಗಳಲ್ಲಿ ಟೊಮೇಟೊ ಕೆಜಿಗೆ 200 ರೂ. ಗಡಿ ದಾಟಿದೆ. ಟೊಮೇಟೊ ದುಬಾರಿಯಾಗಿದ್ದು, ಯಾವ ಅಡುಗೆಗೂ ಟೊಮೇಟೊ ಬಳಸುವ ಮುನ್ನ ಸಾವಿರ ಬಾರಿ ಯೋಚಿಸಬೇಕಾಗುತ್ತದೆ. ಗೃಹಿಣಿಯರಂತೂ ಟೊಮೇಟೊ ಬದಲಿಗೆ ಹುಣಸೆ ಹಣ್ಣು, ನಿಂಬೆ ಹಣ್ಣಿನ ಮೊರೆ ಹೋಗಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಸಬ್ಸಿಡಿ ದರದ ಟೊಮೇಟೊವನ್ನು ಕೆಜಿಗೆ 70 ರೂ.ಯಂತೆ ಮಾರಾಟ ಮಾಡುತ್ತಿದೆ. ಅಲ್ಲದೆ, ಶೀಘ್ರದಲ್ಲೇ ಟೊಮೆಟೊ ಕೆಜಿಗೆ 30 ರೂ. ಆಗಲಿದೆ.
30 ರೂ.ಗೆ ಟೊಮ್ಯಾಟೋ ಯಾವಾಗ ಸಿಗುತ್ತದೆ? :
ಕೇಂದ್ರ ಸರ್ಕಾರದ ಮಧ್ಯಪ್ರವೇಶದ ನಂತರ ಟೊಮೇಟೊ ಬೆಲೆ ಇಳಿಕೆಯಾಗಲು ಆರಂಭಿಸಿದ್ದು, ಆಗಸ್ಟ್ ಮಧ್ಯದವರೆಗೂ ಇದೇ ಟ್ರೆಂಡ್ ಮುಂದುವರಿಯಬಹುದು. ಆಗಸ್ಟ್ ಮಧ್ಯದ ವೇಳೆಗೆ ಬೆಲೆಗಳು ಸ್ಥಿರಗೊಳ್ಳಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಬಿಸಿನೆಸ್ ಲೈನ್ ವರದಿ ಪ್ರಕಾರ, ಆಗಸ್ಟ್ ಮಧ್ಯದ ವೇಳೆಗೆ ಟೊಮೆಟೊ ಬೆಲೆ ಕೆಜಿಗೆ 30 ರೂ ಆಗಬಹುದು ಮತ್ತು ಈ ಬೆಲೆ ಸ್ಥಿರವಾಗಿರುತ್ತದೆ.
ಇದನ್ನೂ ಓದಿ : Success Story: ರದ್ದಿ ಕಾಗದ ಬಳಸಿ ಕೋಟ್ಯಾಂತರ ಮೌಲ್ಯದ ಕಂಪನಿ ಸ್ಥಾಪಿಸಿದ ಭಾರತೀಯ ಮಹಿಳೆ!
ಮುಂದಿನ 10 ದಿನಗಳಲ್ಲಿ ಕೆಜಿಗೆ 50 ರೂಪಾಯಿ ಆಗುವ ಸಾಧ್ಯತೆ :
ಮುಂದಿನ 10 ದಿನಗಳಲ್ಲಿ ಟೊಮೇಟೊ ಬೆಲೆ ಸಾಮಾನ್ಯ ಮಟ್ಟಕ್ಕೆ ಮರಳುವ ಮೊದಲು ಕೆಜಿಗೆ 50 ರೂಪಾಯಿ ಆಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ (ಎನ್ಎಚ್ಆರ್ಡಿಎಫ್) ನಿರ್ದೇಶಕ ಪಿಕೆ ಗುಪ್ತಾ ತಿಳಿಸಿದ್ದಾರೆ. ಆಫ್-ಸೀಸನ್ ಬೇಡಿಕೆಯನ್ನು ಪೂರೈಸಲು ಟೊಮೆಟೊ ಪ್ಯೂರೀಯ ಬಳಕೆಯ ಬಗ್ಗೆ ಅವರು ಸೂಚನೆ ನೀಡಿದ್ದಾರೆ. ಏಕೆಂದರೆ ಟೊಮ್ಯಾಟೊ ರೆಫ್ರಿಜರೇಟರ್ಗಳಲ್ಲಿ ಗರಿಷ್ಠ 20 ದಿನಗಳ ಶೆಲ್ಫ್-ಲೈಫ್ ಅನ್ನು ಹೊಂದಿರುತ್ತದೆ. ಸೇಬುಗಳನ್ನು ಇಡುವ ನಿಯಂತ್ರಿತ ವಾತಾವರಣ (ಸಿಎ) ಕೋಲ್ಡ್ ಸ್ಟೋರೇಜ್ ಅನ್ನು ಬಳಸುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎನ್ನಲಾಗಿದೆ.
ಟೊಮೇಟೊ ಬೆಲೆ ಇಷ್ಟೊಂದು ಏರಿಕೆಯಾಗಲು ಕಾರಣವೇನು? :
ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಟೊಮೆಟೊ ಬೆಲೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಕಡಿಮೆ ಉತ್ಪಾದನೆಯ ಹೊರತಾಗಿ ಮಾನ್ಸೂನ್ನಿಂದ ಪೂರೈಕೆ ಸರಪಳಿಯಲ್ಲಿನ ಅಡಚಣೆಯೇ ಇದರ ಹಿಂದಿನ ಕಾರಣ. ಈ ವರ್ಷವೂ ಹಲವು ರಾಜ್ಯಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ಟೊಮೇಟೊ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಟೊಮೆಟೊ ದರದಲ್ಲಿ ಭಾರೀ ಏರಿಕೆಯಾಗಿದೆ.
ಇದನ್ನೂ ಓದಿ : ಚಿನ್ನದ ಈ ಸಂಗತಿಯ ಮೇಲೆ ಜನ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿದ್ದಾರೆ, ಮೂರೇ ತಿಂಗಳಿನಲ್ಲಿ....!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.