ನವದೆಹಲಿ: ಲೋಕಸಭೆಯಲ್ಲಿ ಹಣಕಾಸು ಮಸೂದೆ 2021 ಅನ್ನು ಅಂಗೀಕರಿಸಲಾಗಿದೆ. ಇದರಲ್ಲಿ ಸರ್ಕಾರ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಸರ್ಕಾರ, ಪಿಎಫ್ ನಲ್ಲಿ ತೆರಿಗೆ ಮುಕ್ತ ಹೂಡಿಕೆಯ ಮೇಲಿನ ಬಡ್ಡಿಯ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಿದೆ.
ಆದ್ರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಉದ್ಯೋಗದಾತರಿಂದ ಪಿಎಫ್ ಖಾತೆ(PF Account)ಗೆ ಕೊಡುಗೆ ಸಿಗದ ಸಂದರ್ಭದಲ್ಲಿ ಮಾತ್ರ ಇದ್ರ ಲಾಭ ಪಡೆಯಬಹುದು. ಇದು ಶೇಕಡಾ 1ರಷ್ಟು ನೌಕರರ ಮೇಲೆ ಮಾತ್ರ ಪರಿಣಾಮ ಬೀರಲಿದೆ. ಉಳಿದವರು ಪಿಎಫ್ಗೆ 2.5 ಲಕ್ಷ ರೂಪಾಯಿಗಿಂತ ಕಡಿಮೆ ಕೊಡುಗೆ ನೀಡುತ್ತಿದ್ದಾರೆಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Gold-Silver Rate: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ₹ 65,300ಕ್ಕೆ ಇಳಿದ ಬೆಳ್ಳಿ ದರ!
ಇಎಫ್ ಖಾತೆಗೆ 2.5 ಲಕ್ಷಕ್ಕಿಂತ ಹೆಚ್ಚು ಹಣವನ್ನು ಹೂಡಿಕೆ ಮಾಡಿದ್ದರೆ ಬಡ್ಡಿ ಮೇಲೆ ತೆರಿಗೆ ಪಾವತಿಸಬೇಕೆಂದು ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್(Nirmala Sitharaman) ಹೇಳಿದ್ದರು. ಸ್ವಯಂಪ್ರೇರಿತ ಭವಿಷ್ಯ ನಿಧಿಯಲ್ಲಿ ಅಂದರೆ ವಿಪಿಎಫ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಅಂದರೆ ಪಿಪಿಎಫ್ನಲ್ಲಿ ಹೂಡಿಕೆ ಮಾಡಿದರೆ, ಅದು 5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೂ ಬಡ್ಡಿ ಮೇಲೆ ತೆರಿಗೆ ಪಾವತಿಸಬೇಕಾಗಿಲ್ಲ.
SBI: ಹಿರಿಯ ನಾಗರಿಕರಿಗೆ ಹೋಳಿ ಉಡುಗೊರೆ ನೀಡಿದ ಎಸ್ಬಿಐ, ಈ ಯೋಜನೆ ಜೂನ್ 30 ರವರೆಗೆ ವಿಸ್ತರಣೆ
ಪಿಎಫ್ನಲ್ಲಿ ಹೆಚ್ಚಿನ ಹಣವನ್ನು ಉಳಿಸುವ ಮೂಲಕ ತೆರಿಗೆ ಉಳಿಸುವ(Tax Savings) ಜನರಿಗೆ 2021 ರ ಬಜೆಟ್ ಹೊಡೆತ ನೀಡಿತ್ತು. ಉತ್ತಮ ಆದಾಯ ಗಳಿಸುವ ಜನರು ತೆರಿಗೆ ಉಳಿಸಲು ಪಿಎಫ್ ದಾರಿ ತುಳಿಯುತ್ತಿದ್ದರು. ಆದರೆ ಬಜೆಟ್ ಈ ವಿನಾಯಿತಿಯನ್ನು ಕೊನೆಗೊಳಿಸಲಾಗಿತ್ತು. ಈಗ ನಿರ್ಮಲಾ ಸೀತಾರಾಮನ್ ಸ್ವಲ್ಪ ನೆಮ್ಮದಿ ನೀಡಿದ್ದಾರೆ.
ಏ.1ರಿಂದ Income Tax ಗೆ ಸಂಬಂಧಿಸಿದ ಈ 5 ನಿಯಮಗಳಲ್ಲಿ ಬದಲಾವಣೆ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.