ಅಬುಧಾಬಿಯಲ್ಲಿ ಯಶಸ್ವಿಯಾಗಿ ಜರುಗಿದ ಕೆಸಿಎಫ್ ಯುಎಇ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ 25ರ 6ನೇ ಆವೃತ್ತಿ

KCF UAE National Level Pratibhasava: ಕೆಸಿಎಫ್ ಯುಎಇ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ 25ರ 6ನೇ ಆವೃತ್ತಿ ಅಬುಧಾಬಿಯಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ವಿಜೃಂಭಣೆಯಿಂದ ಜರುಗಿದೆ.

Written by - Yashaswini V | Last Updated : Feb 14, 2025, 03:43 PM IST
  • ಇಂಥದೊಂದು ಅಭೂತಪೂರ್ವ ಕಾರ್ಯಕ್ರಮದಲ್ಲಿ ಯುಎಇಯ 8 ವಲಯಗಳಿಂದ ಒಟ್ಟು 300ಕ್ಕೂ ಜಾಸ್ತಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.
  • 90ಕ್ಕೂ ಜಾಸ್ತಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಎಲ್ಲಾ ಸ್ಪರ್ಧೆಗಳಿಗೂ ತೀವ್ರವಾದ ಪೈಪೋಟಿ ಏರ್ಪಟ್ಟಿತ್ತು.
  • ಇಂಥ ಪೈಪೋಟಿಯ ನಡುವೆಯೂ ಅಬುಧಾಬಿ ವಲಯ ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಅಬುಧಾಬಿಯಲ್ಲಿ ಯಶಸ್ವಿಯಾಗಿ ಜರುಗಿದ ಕೆಸಿಎಫ್ ಯುಎಇ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ 25ರ 6ನೇ ಆವೃತ್ತಿ  title=

Abu Dhabi: ದೇಶದಲ್ಲಿ, ದೇಶಿಯ ಮಟ್ಟದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸುವುದು ಸುಲಭ. ಆದರೆ ವಿದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಲು ನೂರಾರು ಅಡೆತಡೆಗಳಿರುತ್ತವೆ. ಅಂಥವೆಲ್ಲವನ್ನೂ ಮೀರಿ ಕೆಸಿಎಫ್ ಯುಎಇ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ 25ರ 6ನೇ ಆವೃತ್ತಿ ಅಬುಧಾಬಿಯಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ವಿಜೃಂಭಣೆಯಿಂದ ಜರುಗಿದೆ.

ಇಂಥದೊಂದು ಅಭೂತಪೂರ್ವ ಕಾರ್ಯಕ್ರಮದಲ್ಲಿ ಯುಎಇಯ 8 ವಲಯಗಳಿಂದ ಒಟ್ಟು 300ಕ್ಕೂ ಜಾಸ್ತಿ ಸ್ಪರ್ಧಿಗಳು ಪಾಲ್ಗೊಂಡಿದ್ದರು. 90ಕ್ಕೂ ಜಾಸ್ತಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಎಲ್ಲಾ ಸ್ಪರ್ಧೆಗಳಿಗೂ ತೀವ್ರವಾದ ಪೈಪೋಟಿ ಏರ್ಪಟ್ಟಿತ್ತು. ಇಂಥ ಪೈಪೋಟಿಯ ನಡುವೆಯೂ ಅಬುಧಾಬಿ ವಲಯ ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ದುಬೈ ಸೌತ್ ವಲಯವು ರನ್ನರ್ ಅಪ್ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಸ್ಪರ್ಧಿಗಳು ತವರಿನ ಅಂದರೆ ಕರ್ನಾಟಕದ ವೈವಿಧ್ಯವಾದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಈ ಪ್ರತಿಭೋತ್ಸವದಲ್ಲಿ ಮಹಿಳೆಯರ ವಿಭಾಗದಲ್ಲಿ ಅಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು. ತ್ಯಾಜ್ಯ ಪದಾರ್ಥಗಳಿಂದ ಕಲಾಕೃತಿಗಳನ್ನು ನಿರ್ಮಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವನಿತೆಯರಿಗೆ ಅವರ ಕ್ರಿಯೇಟಿವಿಟಿಯನ್ನು ಸಾಕಾರಗೊಳಿಸಲು ಪ್ರತಿಭೋತ್ಸವ ವೇದಿಕೆಯಾಯಿತು.

ಸಮಾರೋಪ ಸಮಾರಂಭ ಇನ್ನೂ ಕಳೆಗಟ್ಟಿತ್ತು ಏಕೆಂದರೆ ನಾನಾ ರೀತಿಯ ಪ್ರಭಾವಶಾಲಿ ವ್ಯಕ್ತಿಗಳು, ಬುದ್ದಿಜೀವಿಗಳು, ಉದ್ಯಮಿಗಳು, ಕೆಸಿಎಫ್ ನಾಯಕರೆಲ್ಲರೂ ಇದ್ದರು. ಕೆಸಿಎಫ್ ಯುಎಇ ಯ ಮೊದಲ “ಕೆಸಿಎಫ್ ಬಿಸಿನೆಸ್ ಎಕ್ಸೆಲೆನ್ಸಿ ಅವಾರ್ಡ್” ಘೋಷಣೆ ಮಾಡಲಾಯಿತು. ಬನಿಯಾಸ್ ಸ್ಪೈಕ್ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷರಾದ ಉದ್ಯಮಿ ಹಾಜಿ  ಅಬ್ದುಲ್ ರಹಿಮಾನ್ ಕುಟ್ಟೂರ್ ಅವರನ್ನು ಗೌರವಿಸಲಾಯಿತು. ಅವರು ಉದ್ಯಮದಲ್ಲಿ ಅಪಾರ ಯಶಸ್ಸು ಸಾಧಿಸುವ ಮೂಲಕ ಅನೇಕರಿಗೆ ಸ್ಫೂರ್ತಿದಾಯಕರಾಗಿದ್ದಾರೆ. ಶಿಕ್ಷಣ ಹಾಗೂ ಆವಿಷ್ಕಾರ ಕ್ಷೇತ್ರದಲ್ಲಿ ನೀಡಿದ ಕೊಡುಗೆಯು ಅಪಾರವಾದುದು. 

ಡಾ. ಅಬುಬಕ್ಕರ್  (ಸೇಫ್ಲೈನ್ ಗ್ರೂಪ್ ಆಫ್ ಕಂಪನೀಸ್) ಮತ್ತು ಇಕ್ಬಾಲ್ ಸಿದ್ಧಕಟ್ಟೆ ಅವರಿಗೆ ಸಾಂಸ್ಕೃತಿಕ ಮತ್ತು ವ್ಯವಹಾರಿಕ ಕಾರ್ಯಕ್ರಮಗಳಿಗೆ ನೀಡಿದ ನಿರಂತರ ಬೆಂಬಲಕ್ಕಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಯ್ಯದ್ ತಾಹಾ ತಂಗಳ್ ಅವರ ಪ್ರಾರ್ಥನೆಯೊಂದಿಗೆ ಪ್ರತಿಭೋತ್ಸವ ಪ್ರಾರಂಭವಾಯಿತು. ಬ್ರೈಟ್ ಇಬ್ರಾಹಿಂ ಸ್ವಾಗತ ಭಾಷಣ ನೀಡಿದರೆ, ಇಬ್ರಾಹಿಂ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. , ರಫೀಕ್ ಬಾವಾ, ಎಂಜಿನಿಯರ್ ನೂರುದ್ದೀನ್, ಪಿಎಂಎಚ್ ಈಶ್ವರಮಂಗಳಂ, ಹಮೀದ್ ಸಅದಿ ಈಶ್ವರಮಂಗಳಂ  ಝೈನುದ್ದೀನ್ ಹಾಜಿ ಲತೀಫ್ ಕಕ್ಕಿಂಜೆ ,ಹಿದಾಯತ್ ಅಡ್ಡೂರು , ಅಶ್ರಫ್ ಶಾ ಮಾಂತೂರ್ ಮತ್ತಿತರ ಗಣ್ಯರು ಹಾಗೂ ಕೆಸಿಎಫ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಕೀಮ್ ತುರ್ಕಾಲಿಕೆ ವಂದನಾರ್ಪಣೆ ಮಾಡಿದರು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News