ಬಾಡಿಗೆಗೆ ಸಿಗುತ್ತಾರೆ ಬಾಯ್ ಫ್ರೆಂಡ್ಸ್… ಆದರೆ...!

Boyfriend For Rent: ಹಿಂದೆ ಒಂದು ಹಾಡಿತ್ತು; ದುಡ್ ಒಂದಿದ್ದರೆ ಬೇಕಾದ್ದು ಸಿಗತೈತೆ ಈ ಜಗದಾಗ ಕಾಣೋ… ಅಂತಾ. ಈಗ ಅದು ಅಕ್ಷರಶಃ ನಿಜ ಆಗುತ್ತಿದೆ ಎನಿಸುತ್ತೆ. ಬಾಡಿಗೆ ಕೊಟ್ಟರೆ ಬಾಯ್ ಫ್ರೆಂಡ್ ಗಳು ಸಿಗುತ್ತಾರಂತೆ.

Written by - Yashaswini V | Last Updated : Feb 14, 2025, 01:29 PM IST
  • ದುಡ್ಡು ಕೊಟ್ರೆ ಬಾಡಿಗೆಗೆ‌ ಸಿಗ್ತಾರೆ ನಿಮಗೆ ಒಂದು ದಿನದ ಬಾಯ್ ಫ್ರೆಂಡ್
  • ಇಂದು ಪ್ರೇಮಿಗಳ ದಿನಾಚರಣೆ ಹಿನ್ನಲೆ..
  • ಬೆಂಗಳೂರು ನಗರ ಈ ಬಾರಿ ವಿಚಿತ್ರ ಆಚರಣೆಗೆ ಸಜ್ಜು..
ಬಾಡಿಗೆಗೆ ಸಿಗುತ್ತಾರೆ ಬಾಯ್ ಫ್ರೆಂಡ್ಸ್… ಆದರೆ...!  title=

Boyfriend For Rent: ಕಾಂಟ್ರಾಕ್ಟ್ ಮ್ಯಾರೇಜ್, ಕಾಂಟ್ರ್ಯಾಕ್ಟ್ ಗಂಡ-ಹೆಂಡತಿನೇ ಸಿಗುವಾಗ ಇದ್ಯಾವ ಮಹಾ ವಿಷಯ ಅಂತಾ ಮೂಗು ಮುರಿಯಬೇಡಿ. ಪೂರ್ತಿ ಸುದ್ದಿ ಓದುವುದನ್ನು ಮರೆಯಲೂ ಬೇಡಿ. ಏಕೆಂದರೆ ಮನುಷ್ಯನಿಗೆ ಕುತೂಹಲ ಬಹಳ ಮುಖ್ಯ. ಇದು ಅಂಥದ್ದೇ ಒಂದು ಕುತೂಹಲಕಾರಿಯಾದ ಸುದ್ದಿ. ದಿನಗೂಲಿ ಥರ ದಿನದ ಮಟ್ಟಿಗೆ ಬಾಯ್ ಫ್ರೆಂಡ್ ಗಳು ಬಾಡಿಗೆಗೆ ಸಿಗುತ್ತಾರಂತೆ. 

ಹಿಂದೆ ಒಂದು ಹಾಡಿತ್ತು; ದುಡ್ ಒಂದಿದ್ದರೆ ಬೇಕಾದ್ದು ಸಿಗತೈತೆ ಈ ಜಗದಾಗ ಕಾಣೋ… ಅಂತಾ. ಈಗ ಅದು ಅಕ್ಷರಶಃ ನಿಜ ಆಗುತ್ತಿದೆ ಎನಿಸುತ್ತೆ. ಬಾಡಿಗೆ ಕೊಟ್ಟರೆ ಬಾಯ್ ಫ್ರೆಂಡ್ ಗಳು ಸಿಗುತ್ತಾರಂತೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಈ ಥರ ಡಿಫರೆಂಟಾದ ಅಥವಾ ವಿಚಿತ್ರವಾದ ಆಫರ್ ಬಿಡಲಾಗಿದೆಯಂತೆ!

ಬಾಯ್ ಫ್ರೆಂಡ್ ಒಬ್ಬರನ್ನು ಒಂದು ದಿನ ಬಾಡಿಗೆ ತೆಗೆದುಕೊಳ್ಳಲು ಎಷ್ಟು ಗೊತ್ತಾ ರೇಟು? ಕೇವಲ 389 ರೂಪಾಯಿ. ಇದು ಕೆಲವರಿಗೆ ತುಂಬಾ ಕಮ್ಮಿ ಆಯಿತು ಅನಿಸಬಹುದು. ಕೆಲವರಿಗೆ ಜಾಸ್ತಿ ಎನಿಸಬಹುದು. ಅಥವಾ ಹುಡುಗರನ್ನು ಮಾರುಕಟ್ಟೆಯಲ್ಲಿ ಅಥವಾ ನಡುಬೀದಿಯಲ್ಲಿ ನಿಲ್ಲಿಸಿ ಹರಾಜು ಕೂಗುವ ಕಾಲ ಬಂತು ಎಂದು ಬಣ್ಣಿಸಬಹುದು. ನಿಮ್ಮ ನಿಮ್ಮ ಭಾವಕ್ಕೆ, ನಿಮ್ಮ ನಿಮ್ಮ ಭಕುತಿಗೆ…

ಬೆಂಗಳೂರಿನ ಪೈಕಿ ಸಿಕ್ಕಾಪಟ್ಟೆ ಓದಿರುವ ಜನ, ಮಡಿವಂತರು ಇರುವ ಜನ ವಾಸ ಮಾಡುವ ಜಯನಗರದಲ್ಲಿ ದುಡ್ಡು ಕೊಟ್ಟರೆ ಒಂದು ದಿನದ ಮಟ್ಟಿಗೆ ಬಾಯ್ ಫ್ರೆಂಡ್ ಸಿಗುತ್ತಾರೆ ಎನ್ನುವ ಪೋಸ್ಟರ್ ಸಿಕ್ಕಿದೆ. ಪೋಸ್ಟರ್ ನಲ್ಲಿ RENT A BOY FRIEND ONLY 389/ SCAN ME ಎನ್ನುವ ಬರಹ ಇದೆ. ಸ್ಥಳೀಯರು ಇದನ್ನು ಕಿಡಿಗೇಡಿಗಳ ಕೃತ್ಯ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News