ಮದ್ಯ ತ್ಯಜಿಸಿ.. ಎಂದ ಮಹಾತ್ಮ ಗಾಂಧಿ ಫೊಟೋ, ಸಹಿ ಬಿಯರ್‌ ಬಾಟಲ್‌ ಮೇಲೆ..! ವಿಡಿಯೋ ವೈರಲ್‌

Mahatma gandhi photo on beer : ಮದ್ಯಪಾನ ನಿಷೇಧವನ್ನು ಬೆಂಬಲಿಸಿದ ಮಹಾತ್ಮ ಗಾಂಧಿಯವರ ಫೋಟೋ ಇರುವ ಬಿಯರ್ ಬಾಟಲಿಯನ್ನು ಮಾರಾಟ ಮಾಡುತ್ತಿರುವುದು ಆಘಾತಕಾರಿ. ಇದೀಗ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

Written by - Krishna N K | Last Updated : Feb 14, 2025, 12:42 PM IST
    • ಮಹಾತ್ಮ ಗಾಂಧಿಯವರ ಫೋಟೋ ಬಿಯರ್ ಬಾಟಲ್‌ ಮೇಲೆ
    • ಮದ್ಯಪಾನ ನಿಷೇಧವನ್ನು ಬೆಂಬಲಿಸಿದ ಮಹಾತ್ಮ ಗಾಂಧಿಯವರ ಫೋಟೋ
    • ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.
ಮದ್ಯ ತ್ಯಜಿಸಿ.. ಎಂದ ಮಹಾತ್ಮ ಗಾಂಧಿ ಫೊಟೋ, ಸಹಿ ಬಿಯರ್‌ ಬಾಟಲ್‌ ಮೇಲೆ..! ವಿಡಿಯೋ ವೈರಲ್‌ title=

Viral News : ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರವಿರುವ ಬಿಯರ್ ಟಿನ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಿಯರ್ ಬಾಟಲಿಯ ಮೇಲೆ ಮಹಾತ್ಮ ಗಾಂಧಿಯವರ ಫೋಟೋ ಮತ್ತು ಸಹಿಯನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.

ಹೌದು.. ರಷ್ಯಾದಲ್ಲಿ ಪಾನ ನಿಷೇಧವನ್ನು ಬೆಂಬಲಿಸಿದ ಮಹಾತ್ಮ ಗಾಂಧಿಯವರ ಫೋಟೋವಿರುವ ಬಿಯರ್ ಅನ್ನು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊ ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಗಾಂಧಿಯವರ ಫೋಟೋ ಇರುವ ಬಿಯರ್ ಬಾಟಲಿಯನ್ನು ಹಿಡಿದುಕೊಂಡು ಮಾತನಾಡುತ್ತಿರುವುದನ್ನು ಕಾಣಬಹುದು..

ಇದನ್ನೂ ಓದಿ:ಫಸ್ಟ್‌ ನೈಟ್‌ ಮೊದಲು ಕತ್ತೆ ಜೊತೆ ಸಂಭೋಗ ನಂತರ ಹೆಂಡತಿ ಜೊತೆ..! ದೇಶದ ಈ ಊರಲ್ಲಿದೆ ವಿಚಿತ್ರ ಸಂಪ್ರದಾಯ 

ಇದಲ್ಲದೆ, ವೀಡಿಯೊದಲ್ಲಿ ಬಿಯರ್ ಕ್ಯಾನ್ ಮೇಲೆ ಗಾಂಧಿಯವರ ಸಹಿ ಇದೆ. ಮಹಾತ್ಮಾ ಗಾಂಧಿಯವರು ಮದ್ಯದ ವಿರುದ್ಧ ಅಭಿಯಾನ ನಡೆಸಿದ್ದರು. ಮದ್ಯ ನಿಷೇಧಕ್ಕಾಗಿ ನಿರಂತರವಾಗಿ ಪ್ರತಿಪಾದಿಸುತ್ತಿದ್ದ ಮಹಾತ್ಮ ಗಾಂಧಿಯವರ ಚಿತ್ರ ಬಿಯರ್ ಬಾಟಲಿಯ ಮೇಲೆ ಕಾಣಿಸಿಕೊಂಡಿರುವುದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.

ಈ ಬಿಯರ್ ಬಾಟಲಿಯನ್ನು 2018 ರ ಫಿಫಾ ಫುಟ್ಬಾಲ್ ಟೂರ್ನಮೆಂಟ್‌ನಲ್ಲೂ ಮಾರಾಟ ಮಾಡಿ ಎಲ್ಲರ ಗಮನ ಸೆಳೆಯಿತು. ಆಟಗಾರರ ಫೋಟೋ ಇರುವ ಬಿಯರ್ ಬಾಟಲಿಗಳು ಮಾರಾಟವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಪ್ರಮುಖ ನಾಯಕರ ಫೋಟೋಗಳನ್ನು ವೈನ್ ಬಾಟಲಿಗಳ ಮೇಲೆ ಸಹ ಹಾಕಲಾಗಿತ್ತು. ಮದರ್ ತೆರೇಸಾ, ನೆಲ್ಸನ್ ಮಂಡೇಲಾ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರ ಫೋಟೋಗಳಿರುವ ಬಿಯರ್ ಬಾಟಲಿಗಳು ಮಾರಾಟವಾಗುತ್ತಿವೆ.

ಇದನ್ನೂ ಓದಿ:ಅದ್ಭುತ..! ಒಂದೇ ಸಮಯದಲ್ಲಿ 7 ಸೂರ್ಯರ ಉದಯ.. ಇದು ಹೇಗೆ ಸಾಧ್ಯ..? ವಿಡಿಯೋ ವೈರಲ್‌ 

ಕೆಲವು ವರ್ಷಗಳ ಹಿಂದೆ, ಅಮೆರಿಕದ ಕಂಪನಿಯೊಂದು ಬಿಯರ್ ಬಾಟಲಿಗಳ ಮೇಲೆ ಮಹಾತ್ಮ ಗಾಂಧಿಯವರ ಫೋಟೋ ಬಳಸಿದ್ದಕ್ಕಾಗಿ ಕ್ಷಮೆಯಾಚಿಸಿತು. 2019 ರಲ್ಲಿ ಜೆಕ್ ಲಿಕ್ಕರ್ ಕಂಪನಿಯೊಂದು ಗಾಂಧಿಯವರ ಹೆಸರಿನಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿತ್ತು ಎಂಬುದು ಗಮನಾರ್ಹ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News