ಬೆಂಗಳೂರು :ಹಣದ ಅವಶ್ಯಕತೆ ಜೀವನದ ಪ್ರತಿ ಹಂತದಲ್ಲಿಯೂ ಎದುರಾಗುತ್ತದೆ. ವಯಸ್ಸು ಹೆಚ್ಚಾದಂತೆ ಹಣದ ಅಗತ್ಯವೂ ಬದಲಾಗುತ್ತದೆ. ವೃದ್ಧಾಪ್ಯದಲ್ಲಿ ಯೌವನದಂತೆ ಹಣ ಗಳಿಸುವುದು ಸಾಧ್ಯವಾಗುವುದಿಲ್ಲ, ಹಾಗಂತ ವೃದ್ದಾಪ್ಯದಲ್ಲಿ ಖರ್ಚು ಕಡಿಮೆ ಎಂದು ಕೂಡಾ ಅಲ್ಲ. ಹಾಗಾಗಿ ವೃದ್ಧಾಪ್ಯದಲ್ಲಿ ಹಣವನ್ನು ಗಳಿಸುವ ಸುರಕ್ಷಿತ ಮಾರ್ಗವನ್ನು ಕಂಡು ಕೊಳ್ಳಬೇಕು. ಇದಕ್ಕಾಗಿಯೇ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
ಪ್ರತಿ ತಿಂಗಳು ಸಿಗುವುದು ಇಷ್ಟು ಮೊತ್ತ :
ಹಿರಿಯ ನಾಗರಿಕರಿಗಾಗಿ ಸರ್ಕಾರವು ಹಲವಾರು ವಿಶೇಷ ಹೂಡಿಕೆ ಯೋಜನೆಗಳನ್ನು ಪರಿಚಯಿಸಿದೆ. ಈ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಎಂದರೆ ಅಂಚೆ ಇಲಾಖೆ ನಡೆಸುವ ನಾಗರಿಕ ಉಳಿತಾಯ ಯೋಜನೆ (SCSS). ಇದರಲ್ಲಿ ಹೂಡಿಕೆದಾರರಿಗೆ ಮಾಸಿಕ ಆದಾಯ ಸಿಗುತ್ತದೆ. ಪೋಸ್ಟ್ ಆಫೀಸ್‌ನ ಹಿರಿಯ ನಾಗರಿಕ ಉಳಿತಾಯ ಯೋಜನೆಯು ನಿವೃತ್ತಿಯ ನಂತರ ನಿಯಮಿತ ಮಾಸಿಕ ಆದಾಯದ ಒದಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಹೆಣ್ಣು ಹೆತ್ತವರ ಖಾತೆಗೆ ಒಮ್ಮೆಲೇ ಬರುವುದು 16 ಲಕ್ಷ ರೂಪಾಯಿ !ಸರ್ಕಾರದ ಈ ಯೋಜನೆಗೆ ಇಂದೇ ನೊಂದಾಯಿಸಿಕೊಳ್ಳಿ
ತಿಂಗಳಿಗೆ 20,500 ಆದಾಯ :
SCSS ಮೇಲಿನ ಹೂಡಿಕೆ ಮೇಲೆ ಪ್ರಸ್ತುತ 8.2% ಬಡ್ಡಿದರ ಸಿಗುತ್ತದೆ. ಸರ್ಕಾರದ ಇತರ ಯೋಜನೆಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಬಡ್ಡಿದರವನ್ನು ನೀಡುವ ಯೋಜನೆ ಇದಾಗಿದೆ. ಇದರಲ್ಲಿ ಗರಿಷ್ಠ 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ವರ್ಷ ಸುಮಾರು 2,46,000 ರೂಪಾಯಿ ಬಡ್ಡಿ ಸಿಗುತ್ತದೆ. ಈ ಮೊತ್ತವನ್ನು ಪ್ರತಿ ತಿಂಗಳಿಗೆ ಲೆಕ್ಕ ಹಾಕಿದರೆ 20,500 ರೂಪಾಯಿ ಆಗುವುದು.
SCSS :ಹೂಡಿಕೆ ಮಿತಿ ಮತ್ತು ಅವಧಿ :
- ಮೊದಲು ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿ 15 ಲಕ್ಷ ರೂಪಾಯಿ ಆಗಿತ್ತು. ಇದೀಗ ಈ ಮಿತಿಯನ್ನು 30 ಲಕ್ಷ ರೂ.ಗೆ ಏರಿಸಲಾಗಿದೆ.
- ಈ ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳು. ಮೆಚ್ಯುರಿಟಿ ನಂತರವೂ ಇದನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು.
ಇದನ್ನೂ ಓದಿ : ಗಗನಕ್ಕೇರುತ್ತಿರುವ ಚಿನ್ನವನ್ನ ಈ ರೀತಿ ಖರೀದಿಸಿದ್ರೆ ನಷ್ಟವಾಗಲ್ಲ! ಕೈಗೆಟುಕುವ ಬೆಲೆಯಲ್ಲೇ ಬೇಕಾದಷ್ಟು ಬಂಗಾರ ಕೊಳ್ಳುವ ಏಕೈಕ ಉಪಾಯವಿದು..
SCSS :ಇದರಲ್ಲಿ ಯಾರು ಹೂಡಿಕೆ ಮಾಡಬಹುದು? :
- 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
- 55 ರಿಂದ 60 ವರ್ಷದೊಳಗಿನ ಸ್ವಯಂ ನಿವೃತ್ತಿ ಹೊಂದಿರುವವರು ಸಹ ಈ ಪ್ರಯೋಜನವನ್ನು ಪಡೆಯಬಹುದು.
- ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಲು, ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಬಹುದು.
SCSS :ತೆರಿಗೆ ಮತ್ತು ಇತರ ಪ್ರಯೋಜನಗಳು :
- ಈ ಯೋಜನೆಯಿಂದ ಬರುವ ಆದಾಯವು ತೆರಿಗೆಗೆ ಒಳಪಡುತ್ತದೆ. ಆದರೆ ಕೆಲವು ತೆರಿಗೆ ಉಳಿತಾಯ ಸೌಲಭ್ಯಗಳು SCSS ಅಡಿಯಲ್ಲಿ ಲಭ್ಯವಿದೆ.
SCSS:ಈ ಯೋಜನೆಯ ಪ್ರಯೋಜನಗಳು:
- ಸುರಕ್ಷಿತ ಹೂಡಿಕೆ: ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿರುವುದರಿಂದ, ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
- ಸ್ಥಿರ ಮಾಸಿಕ ಆದಾಯ: ನಿವೃತ್ತಿಯ ನಂತರ, ಹೂಡಿಕೆದಾರರು ನಿಯಮಿತ ವೆಚ್ಚಗಳಿಗಾಗಿ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಪಡೆಯುತ್ತಾರೆ.
- ಬಡ್ಡಿ ದರ: 8.2% ಬಡ್ಡಿಯನ್ನು ಗಳಿಸಬಹುದು. ಇದು ತುಲನಾತ್ಮಕವಾಗಿ ಹೆಚ್ಚಿನ ಬಡ್ಡಿ ದರವಾಗಿದೆ.
ಇದನ್ನೂ ಓದಿ : ₹315 ಕೋಟಿ ಹೂಡಿಕೆ, 550 ಉದ್ಯೋಗ ಸೃಷ್ಟಿ: ಎಂ.ಬಿ.ಪಾಟೀಲ
SCSS: ನಿಯಮಗಳು ಮತ್ತು ಷರತ್ತುಗಳು :
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು, ಅದರ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಈ ಯೋಜನೆಯು ನಿವೃತ್ತಿಯ ನಂತರದ ಅವಧಿಗೆ ಆರ್ಥಿಕ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ. ನಿವೃತ್ತಿಯ ನಂತರ ಆರಾಮದಾಯಕ ಮತ್ತು ಸುರಕ್ಷಿತ ಜೀವನವನ್ನು ನಡೆಸಲು ಬಯಸುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಸರಿಯಾದ ಆಯ್ಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.