ಬೆಂಗಳೂರು : New Wage System : ದೇಶದಲ್ಲಿ ಕನಿಷ್ಠ ವೇತನ ವ್ಯವಸ್ಥೆಯನ್ನು (minimum wage system) ಕೊನೆಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಬದಲಾಗಿ ಮುಂದಿನ ವರ್ಷದಿಂದ ದೇಶದಲ್ಲಿ ಲಿವಿಂಗ್ ವೇಜ್ ವ್ಯವಸ್ಥೆಯನ್ನು ಜಾರಿಗೆ ತರುವ ಸಿದ್ದತೆ ನಡೆಸುತ್ತಿದೆ. ಈ ವ್ಯವಸ್ಥೆಯನ್ನು ರೂಪಿಸಲು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ದಿಂದ ತಾಂತ್ರಿಕ ನೆರವು ಕೋರಲಾಗಿದೆ ಎನ್ನಲಾಗಿದೆ. ಲಿವಿಂಗ್ ವೇಜ್ ಕನಿಷ್ಟ ವೇತನವಾಗಿದ್ದು, ಕೆಲಸಗಾರನಿಗೆ ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ. ವಸತಿ, ಆಹಾರ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಬಟ್ಟೆಯನ್ನು ಒಳಗೊಂಡಿದೆ. ಹೊಸ ವೇತನ ವ್ಯವಸ್ಥೆ ಜಾರಿಗೆ ILO ಅನುಮೋದನೆ ನೀಡಿದೆ ಎಂದು ಕೂಡಾ ಹೇಳಲಾಗುತ್ತಿದೆ. ಲಿವಿಂಗ್ ವೇಜ್ ಕನಿಷ್ಠ ವೇತನಕ್ಕಿಂತ ಜಾಸ್ತಿಯಿರಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಭಾರತದಲ್ಲಿದ್ದಾರೆ 50 ಕೋಟಿಗೂ ಹೆಚ್ಚು ಕಾರ್ಮಿಕರು :
ಮಾರ್ಚ್ 14 ರಂದು ಜಿನೀವಾದಲ್ಲಿ ನಡೆದ ILO ನ ಆಡಳಿತ ಮಂಡಳಿಯ 350 ನೇ ಸಭೆಯು ಕನಿಷ್ಠ ವೇತನಕ್ಕೆ ಸಂಬಂಧಿಸಿದ ತಿದ್ದುಪಡಿಗಳನ್ನು ಅನುಮೋದಿಸಿದೆ. ಭಾರತದಲ್ಲಿ ಶೇ. 90ರಷ್ಟು ಅಸಂಘಟಿತ ವಲಯಗಳಲ್ಲಿ 50 ಕೋಟಿಗೂ ಹೆಚ್ಚು ಕಾರ್ಮಿಕರಿದ್ದಾರೆ. ಅವರು ದಿನಕ್ಕೆ ಕನಿಷ್ಠ 176 ರೂ ಅಥವಾ ಅದಕ್ಕಿಂತ ಹೆಚ್ಚಿನ ವೇತನ ಪಡೆಯುತ್ತಾರೆ. ಇದು ನೀವು ಯಾವ ರಾಜ್ಯದಲ್ಲಿ ವಾಸಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ : Gold And Silver Price: ಭಾರತದಲ್ಲಿ ಬೆಳ್ಳಿಯ ಬೆಲೆ ಕುಸಿತ: ಹಾಗಿದ್ರೆ ಚಿನ್ನದ ದರ ಎಷ್ಟಾಗಿದೆಯೇ ಗೊತ್ತೇ..?
ಇದು ರಾಜ್ಯಗಳಿಗೆ ಕಡ್ಡಾಯವಲ್ಲ :
2017ರಿಂದ ರಾಷ್ಟ್ರೀಯ ಮಟ್ಟದಲ್ಲಿ ಕನಿಷ್ಠ ವೇತನ ಪರಿಷ್ಕರಣೆಯಾಗಿಲ್ಲ. ಇದು ಈ ಪರಿಷ್ಕರಣೆ ರಾಜ್ಯಗಳಿಗೆ ಕಡ್ಡಾಯವಲ್ಲ. ಆದ್ದರಿಂದ ಕೆಲವು ರಾಜ್ಯಗಳು ಇನ್ನೂ ಇದಕ್ಕಿಂತಲೂ ಕಡಿಮೆ ವೇತನ ಪಾವತಿಸುತ್ತವೆ. 2019ರಲ್ಲಿ ಪರಿಚಯಿಸಲಾದ ವೇತನ ಸಂಹಿತೆ ಇನ್ನೂ ಜಾರಿಯಾಗಿಲ್ಲ. ಇದರಲ್ಲಿ ಎಲ್ಲಾ ರಾಜ್ಯಗಳಿಗೆ ಕಡ್ಡಾಯವಾಗಿ ಜಾರಿಗೆ ತರಬೇಕಾಗಿರುವ ಪೇ ಸ್ಕೇಲ್ ಅನ್ನು ಪ್ರಸ್ತಾಪಿಸಿದೆ.
ಭಾರತವು ಐಎಲ್ಒ ಸ್ಥಾಪಕ ಸದಸ್ಯ. ಅಲ್ಲದೆ, 2022 ರಿಂದ ಅದರ ಆಡಳಿತ ಮಂಡಳಿಯ ಸದಸ್ಯ ರಾಷ್ಟ್ರವಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿ) ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ ವೇತನವನ್ನು ಲಿವಿಂಗ್ ವೇಜ್ ನೊಂದಿಗೆ ಬದಲಾಯಿಸುವುದರಿಂದ ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತುವ ಭಾರತದ ಪ್ರಯತ್ನ ಸಾಕಾರವಾಗಬಹುದು ಎನ್ನಲಾಗಿದೆ.
ಇದನ್ನೂ ಓದಿ : Deadline Alert: ಮಾರ್ಚ್ 31 ರ ಮೊದಲು ಹಣಕಾಸಿಗೆ ಸಂಬಂಧಿಸಿದ ಈ ಕೆಲಸಗಳನ್ನು ತಪ್ಪದೇ ಪೂರ್ಣಗೊಳಿಸಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.