LPG Subsidy: ಗೃಹಿಣಿಯರಿಗಾಗಿ ಈ ಯೋಜನೆ ! ಕೇವಲ 500 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ !

Subsidy on Gas Cylinder: ಈ ಯೋಜನೆಯಲ್ಲಿ ಪಿಪಿಎಲ್ ಕುಟುಂಬಗಳಿಗೆ 500 ರೂ.ಗೆ ಸಿಲಿಂಡರ್ ನೀಡಲಾಗುತ್ತಿದೆ. ಇದರೊಂದಿಗೆ ವರ್ಷಕ್ಕೆ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲಾಗುತ್ತದೆ . 

Written by - Ranjitha R K | Last Updated : Apr 10, 2023, 11:00 AM IST
  • ಹೆಚ್ಚುತ್ತಿರುವ ಹಣದುಬ್ಬರದಿಂದ ಸಾರ್ವಜನಿಕರಿಗೆ ಆತಂಕ
  • ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳಿಗೆ ಸಬ್ಸಿಡಿ
  • ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿಗಾಗಿ 750 ಕೋಟಿ ರೂ. ಅನುಮೋದನೆ
LPG Subsidy: ಗೃಹಿಣಿಯರಿಗಾಗಿ ಈ ಯೋಜನೆ ! ಕೇವಲ  500 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ !  title=

Subsidy on Gas Cylinder : ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇದೀಗ ರಾಜಸ್ಥಾನ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ್ದು, ರಾಜ್ಯದ ಜನತೆಗೆ  ನೆಮ್ಮದಿ ತರಿಸಿದೆ. ಪ್ರಸ್ತುತ ಸರ್ಕಾರವು ಗೃಹಬಳಕೆಗಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳಿಗೆ ಸಬ್ಸಿಡಿ ನೀಡುತ್ತಿದೆ. ವರದಿಯ ಪ್ರಕಾರ, ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿಗಾಗಿ 750 ಕೋಟಿ ರೂ.ಗಳನ್ನು ಸರ್ಕಾರ ಅನುಮೋದಿಸಿದೆ. 

ರಾಜಸ್ಥಾನ ಸರ್ಕಾರ ಬಡವರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಇದರಲ್ಲಿ 73 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಈ ಯೋಜನೆಯ ಅನ್ವಯ, ದುಬಾರಿ ಸಿಲಿಂಡರ್‌ಗಳನ್ನು ಪಡೆಯಲು ಸಾಧ್ಯವಾಗದವರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಪಿಪಿಎಲ್ ಕುಟುಂಬಗಳಿಗೆ 500 ರೂ.ಗೆ ಸಿಲಿಂಡರ್ ನೀಡಲಾಗುತ್ತಿದೆ. ಇದರೊಂದಿಗೆ ವರ್ಷಕ್ಕೆ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲಾಗುತ್ತದೆ 

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಬಂಪರ್ !ತುಟ್ಟಿಭತ್ಯೆಯಲ್ಲಿ 50% ಹೆಚ್ಚಳ!ಈ ದಿನ ಹೊರ ಬೀಳುವುದು ಆದೇಶ

PBL ಅಥವಾ ಉಜ್ವಲ ಯೋಜನೆ ಅಡಿಯಲ್ಲಿ ರಾಜಸ್ಥಾನ ರಾಜ್ಯದ ನಿವಾಸಿಯಾಗಿದ್ದರೆ, ತಿಂಗಳಿಗೆ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಆದರೆ, ಇದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಜನ್ ಆಧಾರ್‌ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ . ಈ ಯೋಜನೆಯನ್ನು ಜಾರಿಗೊಳಿಸಲು ರಾಜಸ್ಥಾನ ಸರ್ಕಾರವು ಕೇಂದ್ರ ಪೆಟ್ರೋಲಿಯಂ ಸಚಿವಾಲಯದಿಂದ ಉಜ್ವಲ ಯೋಜನೆಯ ಪಟ್ಟಿಯನ್ನು ನೀಡುವಂತೆ ಕೋರಿದೆ. ಡೇಟಾ ಲಭ್ಯವಾದ ನಂತರ, ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಈ ಯೋಜನೆಯು ಏಪ್ರಿಲ್ 1, 2023 ರಿಂದ ಜಾರಿಗೆ ಬಂದಿದೆ.

ಬ್ಯಾಂಕ್ ಖಾತೆಗೆ ಸಬ್ಸಿಡಿ :
ಈ ಯೋಜನೆಯಡಿಯಲ್ಲಿ, ಸಬ್ಸಿಡಿ ಮೊತ್ತವನ್ನು ನೇರವಾಗಿ  ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯಡಿ, 610 ರೂಪಾಯಿ ಸಹಾಯಧನವನ್ನು ಫಲಾನುಭವಿಯ ಖಾತೆಗೆ ವರ್ಗಾಯಿಸಲಾಗುತ್ತದೆ. ಉಜ್ವಲ ಯೋಜನೆ ಫಲಾನುಭವಿಗಳ ಖಾತೆಗೆ 410 ರೂ.ಗಳ ಅನುದಾನವನ್ನು ಕಳುಹಿಸಲಾಗುವುದು. ಅನುದಾನದ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಮೂಲಕ ಈ ಯೋಜನೆಯಡಿ ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ನೀಡಲಾಗುವುದು.

ಇದನ್ನೂ ಓದಿ : Free.. Free.. Free.. ಗೋಫಸ್ಟ್ ತನ್ನ ಈ ಯಾತ್ರಿಗಳಿಗೆ ನೀಡುತ್ತಿದೆ ಉಚಿತ ಫ್ಲೈಟ್ ಟಿಕೆಟ್!
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News