ಎಲ್ಪಿಜಿ ಸಿಲಿಂಡರ್ ಬೆಲೆ: ಪೆಟ್ರೋಲ್ ಮತ್ತು ಡೀಸೆಲ್ನ ಸ್ಥಿರ ಬೆಲೆಯ ನಡುವೆ, ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ಈ ಬಾರಿ ಎಲ್ಪಿಜಿ ಸಿಲಿಂಡರ್ ದರ 198 ರೂಪಾಯಿ ಇಳಿಕೆಯಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಕೊಂಚ ನೆಮ್ಮದಿ ದೊರೆತಂತಾಗಿದೆ. ತಿಂಗಳ ಮೊದಲ ದಿನ ಅಂದರೆ ಜುಲೈ 1 ರಂದು ತೈಲ ಮಾರುಕಟ್ಟೆ ಕಂಪನಿಗಳು ಎಲ್ಪಿಜಿ ಸಿಲಿಂಡರ್ಗಳ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಜುಲೈ 1 ರಂದು ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ (ಎಲ್ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ) 198 ರೂಪಾಯಿಗಳಷ್ಟು ಅಗ್ಗವಾಗಿದೆ.
ಇವು ಇಂದಿನ ಎಲ್ಪಿಜಿ ಸಿಲಿಂಡರ್ ದರಗಳು:
* ದೆಹಲಿಯಲ್ಲಿ ಜೂನ್ 30 ರವರೆಗೆ 19 ಕೆಜಿ ವಾಣಿಜ್ಯ ಸಿಲಿಂಡರ್ 2219 ರೂ.ಗೆ ಲಭ್ಯವಿತ್ತು. ಇದೀಗ ಇದರ ಬೆಲೆ ಜುಲೈ 1 ರಿಂದ 198 ರೂಪಾಯಿಗಳಷ್ಟು ಅಗ್ಗವಾಗಿದೆ. ಇದರೊಂದಿಗೆ ವಾಣಿಜ್ಯ ಸಿಲಿಂಡರ್ ದರ 2021 ಕ್ಕೆ ಇಳಿದಿದೆ.
* ಅದೇ ರೀತಿ ಕೋಲ್ಕತ್ತಾದಲ್ಲಿ 2322 ರೂ.ಗೆ ಹೋಲಿಸಿದರೆ ಈಗ ಈ ಸಿಲಿಂಡರ್ 182 ರೂ. ಇಳಿಕೆ ಆಗಿ 2140 ರೂ.ಗೆ ಲಭ್ಯವಾಗಲಿದೆ.
* ಈ ವೇಳೆ ವಾಣಿಜ್ಯ ನಗರಿ ಮುಂಬೈನಲ್ಲಿ ಎಲ್ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 2171.50 ರೂ.ನಿಂದ 190.50 ರೂ., ಇಳಿಕೆ ಆಗಿದ್ದು 1981 ರೂ.ಗೆ ಲಭ್ಯವಾಗಲಿದೆ.
* ಮತ್ತೊಂದೆಡೆ ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಗಳು 2373 ರೂ.ನಿಂದ 187 ರೂ. ಕಡಿಮೆ ಆಗಿದ್ದು 2186 ರೂ.ಗೆ ಇಳಿದಿದೆ.
ಇದನ್ನೂ ಓದಿ- Credit Card: ಜುಲೈ 1 ರಿಂದ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ
ಒಂದು ತಿಂಗಳಲ್ಲಿ ಸಿಲಿಂಡರ್ ದರಗಳು 300 ರೂ.ಗಿಂತ ಹೆಚ್ಚು ಕಡಿಮೆಯಾಗಿದೆ:
ಈ ಹಿಂದೆ ಜೂನ್ 1 ರಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 135 ರೂ. ಕಡಿತ ಮಾಡಲಾಗಿತ್ತು. ಇಂದು ಸಿಲಿಂಡರ್ ದರ 198 ರೂ.ಗಳಷ್ಟು ಕಡಿಮೆ ಆಗಿದೆ. ಇದರೊಂದಿಗೆ ಒಂದು ತಿಂಗಳಲ್ಲಿ ಒಂದು ತಿಂಗಳ ಅವಧಿಯಲ್ಲಿ ಸಿಲಿಂಡರ್ ಬೆಲೆ ರೂ.300ಕ್ಕೂ ಹೆಚ್ಚು ಕಡಿತಗೊಂಡಿದೆ. ಮೇ ತಿಂಗಳಲ್ಲಿ ಸಿಲಿಂಡರ್ ದರ 2354 ರೂ.ಗೆ ಏರಿಕೆಯಾಗಿತ್ತು.
ಮತ್ತೊಂದೆಡೆ, ತೈಲ ಕಂಪನಿಗಳು ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳಲ್ಲಿ ಯಾವುದೇ ಪರಿಹಾರವನ್ನು ನೀಡಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಗ್ಯಾಸ್ ಸಿಲಿಂಡರ್ 1003 ರೂಪಾಯಿಗಳಿಗೆ ದೊರೆಯುತ್ತಿದೆ. ಗಮನಾರ್ಹವಾಗಿ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಮೇ 19 ರಂದು ಕೊನೆಯದಾಗಿ ಬದಲಾಯಿಸಲಾಗಿತ್ತು. ಅದರ ನಂತರ ಗೃಹ ಬಳಕೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಅಂದರೆ 14.2 ಕೆಜಿಯ ದೇಶೀಯ ಸಿಲಿಂಡರ್ ಅಗ್ಗವಾಗಲೀ ದುಬಾರಿಯಾಗಲಿ ಆಗಿಲ್ಲ.
ಇದನ್ನೂ ಓದಿ- Pan-Aadhaar Link: ಇನ್ನೂ ಪ್ಯಾನ್-ಆಧಾರ್ ಲಿಂಕ್ ಆಗಿಲ್ಲವೇ?
ಪ್ರತಿ ಸಿಲಿಂಡರ್ಗೆ 200 ರೂಪಾಯಿ ಸಬ್ಸಿಡಿ:-
ಸಬ್ಸಿಡಿ ಹಣದುಬ್ಬರದಿಂದ ಸಾರ್ವಜನಿಕರಿಗೆ ಪರಿಹಾರ ನೀಡಲು ಉಜ್ವಲ ಯೋಜನೆಯಡಿ ಪ್ರತಿ ಸಿಲಿಂಡರ್ಗೆ 200 ರೂಪಾಯಿ ಸಬ್ಸಿಡಿ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಈ ಸಬ್ಸಿಡಿ ವಾರ್ಷಿಕವಾಗಿ 12 ಸಿಲಿಂಡರ್ಗಳವರೆಗೆ ಮಾತ್ರ ಲಭ್ಯವಿರುತ್ತದೆ. ಸರ್ಕಾರದ ಈ ಕ್ರಮದಿಂದ 9 ಕೋಟಿಗೂ ಹೆಚ್ಚು ಗ್ರಾಹಕರು ಪ್ರಯೋಜನ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.