Daily GK Quiz: ಯಾವ ದೇಶವು ಭಾರತದೊಂದಿಗೆ ಅತಿ ಉದ್ದದ ಗಡಿಯನ್ನು ಹಂಚಿಕೊಂಡಿದೆ?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Nov 16, 2024, 05:52 PM IST
  • ಯಾವ ದೇಶವು ಭಾರತದೊಂದಿಗೆ ಅತಿ ಉದ್ದದ ಗಡಿಯನ್ನು ಹಂಚಿಕೊಂಡಿದೆ?
  • ಅತಿ ಉದ್ದದ ಕರಾವಳಿಯನ್ನು ಹೊಂದಿರುವ ಭಾರತದ ರಾಜ್ಯ ಯಾವುದು?
  • “ಅರೇಬಿಯನ್ ಸಮುದ್ರದ ರಾಣಿ” ಎಂದು ಯಾವ ನಗರವನ್ನು ಕರೆಯಲಾಗುತ್ತದೆ?
Daily GK Quiz: ಯಾವ ದೇಶವು ಭಾರತದೊಂದಿಗೆ ಅತಿ ಉದ್ದದ ಗಡಿಯನ್ನು ಹಂಚಿಕೊಂಡಿದೆ? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: “ಅರೇಬಿಯನ್ ಸಮುದ್ರದ ರಾಣಿ” ಎಂದು ಯಾವ ನಗರವನ್ನು ಕರೆಯಲಾಗುತ್ತದೆ?

ಉತ್ತರ: ಕೊಚ್ಚಿ (ಕೇರಳ)

ಪ್ರಶ್ನೆ 2: ಪ್ರಸಿದ್ಧ ಅರ್ಥಶಾಸ್ತ್ರ ಪುಸ್ತಕವನ್ನು ಬರೆದವರು ಯಾರು?

ಉತ್ತರ: ಚಾಣಕ್ಯ

ಪ್ರಶ್ನೆ 3: ಭಾರತದಲ್ಲಿ ಎರಡನೇ ಅತಿ ಹೆಚ್ಚು ಪ್ರಾದೇಶಿಕ ಭಾಷೆ ಯಾವುದು?

ಉತ್ತರ: ಬೆಂಗಾಲಿ

ಪ್ರಶ್ನೆ 4: ಪ್ರಸಿದ್ಧ ಶಾಸ್ತ್ರೀಯ ನೃತ್ಯ ಭರತನಾಟ್ಯವು ಯಾವ ರಾಜ್ಯಕ್ಕೆ ಸಂಬಂಧಿಸಿದೆ?

ಉತ್ತರ: ತಮಿಳುನಾಡು

ಪ್ರಶ್ನೆ 5: ಅತಿ ಉದ್ದದ ಕರಾವಳಿಯನ್ನು ಹೊಂದಿರುವ ಭಾರತದ ರಾಜ್ಯ ಯಾವುದು?

ಉತ್ತರ: ಗುಜರಾತ್

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಗಢ; 11 ಶಿಶುಗಳು ಸಜೀವ ದಹನ, 16 ಮಕ್ಕಳ ಸ್ಥಿತಿ ಗಂಭೀರ!

ಪ್ರಶ್ನೆ 6: ಯಾವ ದೇಶವು ಭಾರತದೊಂದಿಗೆ ಅತಿ ಉದ್ದದ ಗಡಿಯನ್ನು ಹಂಚಿಕೊಂಡಿದೆ?

ಉತ್ತರ: ಬಾಂಗ್ಲಾದೇಶ

ಪ್ರಶ್ನೆ 7: ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆಯನ್ನು ಏನೆಂದು ಕರೆಯುತ್ತಾರೆ?

ಉತ್ತರ: ರಾಡ್‌ಕ್ಲಿಫ್ ಲೈನ್

ಪ್ರಶ್ನೆ 8: ಯಾವ ಚಾನಲ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರತ್ಯೇಕಿಸುತ್ತದೆ?

ಉತ್ತರ: ಹತ್ತು ಡಿಗ್ರಿ ಚಾನೆಲ್

ಪ್ರಶ್ನೆ 9: ಅಸ್ಪೃಶ್ಯತೆ ನಿರ್ಮೂಲನೆಯು ಭಾರತದಲ್ಲಿ ಯಾವ ವಿಧಿಯ ಅಡಿಯಲ್ಲಿ ಬರುತ್ತದೆ?

ಉತ್ತರ: ಆರ್ಟಿಕಲ್ 17

ಪ್ರಶ್ನೆ 10: ಭಾರತದ ರಾಷ್ಟ್ರಧ್ವಜದ ಮೇಲೆ ಬಿಳಿ ಬಣ್ಣದ ಅರ್ಥವೇನು?

ಉತ್ತರ:- ಶಾಂತಿ ಮತ್ತು ಸತ್ಯ

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. ಇಂದಿನಿಂದ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ: ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News