ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹಣ ಉಳಿತಾಯ ಮಾಡುವ ಯೋಜನೆಯತ್ತ ಎಲ್ಲರೂ ಗಮನ ಹರಿಸುತ್ತಾರೆ. ಹಣ ಉಳಿತಾಯ ಮಾಡುವುದು ಮಾತ್ರವಲ್ಲ, ನಾವು ಉಳಿತಾಯ ಮಾಡುವ ಹಣದ ಮೇಲೆ ನಿಶ್ಚಿತ ಆದಾಯ ಬಂದರೆ ಮತ್ತೊಂದು ರೀತಿಯ ನೆಮ್ಮದಿ. ಹಣ ಉಳಿತಾಯ ಮಾಡುವುದಕ್ಕೆ ನಾನಾ ಮಾರ್ಗಗಳಿವೆ. ಬೇರೆ ಬೇರೆ ಯೋಜನೆಗಳಿವೆ. ಆದರೆ ಯಾವುದೇ ಅಪಾಯವಿಲ್ಲದೆ ಹಣ ಹೂಡು ವಂಥಹ ಯೋಜನೆಯಲ್ಲಿ ಹಣ ಹಾಕುವುದು ಮುಖ್ಯ. ಈ ದೃಷ್ಟಿಯಿಂದ ನೋಡುವುದಾದರೆ ಪೋಸ್ಟ್ ಆಫೀಸ್ ಹೂಡಿಕೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಇಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವುದಲ್ಲದೆ, ಗಳಿಕೆ ಕೂಡಾ ಹೆಚ್ಚು. ಇನ್ನು ನೀವು ವಿವಾಹಿತರಾಗಿದ್ದರೆ ಪ್ರತಿ ತಿಂಗಳು ಆದಾಯ ಗಳಿಸಲು ಅಂಚೆ ಕಚೇರಿ ಅತ್ಯುತ್ತಮ ಮತ್ತು ಸುರಕ್ಷಿತ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯ ಹೆಸರೇನು ಗೊತ್ತಾ ? :
ಅಂಚೆ ಕಚೇರಿಯ ಈ ಯೋಜನೆಯ ಹೆಸರು ಮಾಸಿಕ ಉಳಿತಾಯ ಯೋಜನೆ ಅಥವಾ ಮಂಥ್ಲಿ ಸೇವಿಂಗ್ ಸ್ಕೀಮ್. ಈ ಯೋಜನೆಯಲ್ಲಿ ಹಣ ಹೂಡುವ ಮೂಲಕ ಪ್ರತಿ ತಿಂಗಳು ಹಣ ಗಳಿಸುವುದು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಸಿಂಗಲ್ ಖಾತೆಯನ್ನಾದರೂ ತೆರೆಯಬಹುದು. ಇಲ್ಲಾ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರ ಹೆಸರಿನಲ್ಲಿ ಜಂಟಿ ಖಾತೆಯನ್ನಾದರೂ ತೆರೆಯಬಹುದು.
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ ಖಾತೆಗೆ ಬರಲಿದೆ ₹2 ಲಕ್ಷ : ಬಾಕಿ ಡಿಎ ಬಿಡುಗಡೆಗೆ ಡೇಟ್ಸ್ ಫಿಕ್ಸ್!
ಖಾತೆಗೆ ಬರುತ್ತದೆ 59400 ರೂಪಾಯಿಗಳು :
ಈ ಯೋಜನೆಯಲ್ಲಿ ವಿವಾಹಿತರು ಜಂಟಿ ಖಾತೆಯನ್ನು ತೆರೆಯಬಹುದು. ಈ ಉಳಿತಾಯ ಖಾತೆಯ ಪ್ರಕಾರ, 9 ಲಕ್ಷ ರೂಪಾಯಿಯನ್ನು ಠೇವಣಿ ಮಾಡಬೇಕಾಗುತ್ತದೆ. ಹೀಗೆ ಠೇವಣಿ ಮಾಡಿದ ಹಣದ ಮೇಲೆ ಶೇಕಡಾ 6.6 ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ. ಇನ್ನು ವಾರ್ಷಿಕ ಆದಾಯದ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ ಸುಮಾರು 59,400 ರೂಪಾಯಿಗಳ ಲಾಭ ಸಿಗಲಿದೆ. ಅಂದರೆ ಒಪ್ರತಿ ತಿಂಗಳು ನಿಮ್ಮ ಖಾತೆಗೆ 4,950 ರೂಪಾಯಿಗಳು ಬರುತ್ತವೆ.
ಲಾಭದ ಲೆಕ್ಕಾಚಾರವನ್ನು ಹೇಗಿರುತ್ತದೆ ? :
ಈ ಯೋಜನೆಯ ಅಡಿಯಲ್ಲಿ, ನಿಮ್ಮ ಒಟ್ಟು ಠೇವಣಿಯ ವಾರ್ಷಿಕ ಬಡ್ಡಿಯ ಲಾಭವನ್ನು ಪಡೆಯುವುದು ಸಾಧ್ಯವಾಗುತ್ತದೆ. ಇದರಲ್ಲಿ, ನಿಮ್ಮ ಒಟ್ಟು ಆದಾಯವನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಲಾಭವನ್ನು 12 ಭಾಗಗಳಾಗಿ ವಿಭಜಿಸಿದರೆ ಅದರಲ್ಲಿ ಒಂದು ಭಾಗವನ್ನು ಪ್ರತಿ ತಿಂಗಳು ನಿಮ್ಮ ಖಾತೆಗೆ ಬರುವಜ್ಞ್ತೆ ಮಾಡಬಹುದು. ಹೀಗೆ ಪ್ರತಿ ತಿಂಗಳು ಹಣ ತೆಗೆದುಕೊಳುವುದು ಅಗತ್ಯವಿಲ್ಲ ಎಂದಾದರೆ, ಅಸಲು ಮೊತ್ತದೊಂದಿಗೆ ಮೆಚ್ಯುರಿಟಿ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ : UIDAI ಜಾರಿಗೊಳಿಸಿದೆ ಹೊಸ ಆದೇಶ.! ಪಾಲಿಸದಿದ್ದಲ್ಲಿ ತೆರಬೇಕಾಗುತ್ತದೆ 10 ಸಾವಿರ ರೂಪಾಯಿ ದಂಡ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.