ನವದೆಹಲಿ: Indane LPG Gas Cylinder Refill Online Booking- ಕರೋನಾ ಸಂಕಷ್ಟದ ನಡುವೆ ಹೆಚ್ಚುತ್ತಿರುವ ಹಣದುಬ್ಬರವು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದೆಡೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿದಿನ ಆಕಾಶ ಮುಟ್ಟುತ್ತಿದೆ. ಮತ್ತೊಂದೆಡೆ, ಎಲ್ಪಿಜಿ ಬೆಲೆಗಳು ಅಡುಗೆಮನೆಯ ಬಜೆಟ್ ಅನ್ನು ಹಾಳು ಮಾಡಿದೆ. ಆದರೆ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವಾಗ (LPG Cylinder Booking) ನೀವು ಹಲವು ಆಫರ್ಗಳನ್ನು ಪಡೆಯಬಹುದಾಗಿದೆ. ವಾಸ್ತವವಾಗಿ, ಸ್ಮಾರ್ಟ್ಫೋನ್ ಮೂಲಕ ನೀವು ಸಿಲಿಂಡರ್ ರೀಫಿಲ್ ಮತ್ತು ಸಿಲಿಂಡರ್ ಬೆಲೆಯನ್ನು ತಿಳಿಯುವುದು ಮಾತ್ರವಲ್ಲ, ನೀವು ಮನೆಯಲ್ಲಿಯೇ ಕುಳಿತು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಹಲವು ಸ್ಮಾರ್ಟ್ ಆಯ್ಕೆಗಳನ್ನೂ ಪಡೆಯಬಹುದಾಗಿದೆ. ನೀವು ಕೂಡ ಕೆಲವೇ ನಿಮಿಷಗಳಲ್ಲಿ ನಿಮ್ಮ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಲು ಬಯಸಿದರೆ, ಇಂಡೇನ್ ನಿಮಗೆ ಈ ಸೌಲಭ್ಯವನ್ನು ನೀಡುತ್ತಿದೆ.
ಐಒಸಿಎಲ್ ಮಾಹಿತಿ ನೀಡಿದೆ:
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡುವ ಮೂಲಕ ಮನೆಯಲ್ಲಿ ಕುಳಿತು ನಿಮ್ಮ ಗ್ಯಾಸ್ ಸಿಲಿಂಡರ್ ಅನ್ನು ಹೇಗೆ ರೀಫಿಲ್ ಮಾಡಬಹುದು ಎಂದು ತಿಳಿಸಿದೆ. ಐಒಸಿಎಲ್ ತನ್ನ ಟ್ವೀಟ್ ನಲ್ಲಿ ಸ್ಮಾರ್ಟ್ ಫೋನ್ ಸಹಾಯದಿಂದ ಸ್ಮಾರ್ಟ್ ಬುಕಿಂಗ್ ಮೋಡ್ ಗಳನ್ನು ಬಳಸಿ ಎಂದು ಬರೆದಿದೆ. ಇದರೊಂದಿಗೆ, ಈ ಯಾವುದೇ ಸ್ಮಾರ್ಟ್ ಬುಕಿಂಗ್ ಮೋಡ್ಗಳ ಮೂಲಕ, ನಿಮ್ಮ ಇಂಡೇನ್ ಗ್ಯಾಸ್ ಸಿಲಿಂಡರ್ (Indane Gas Cylinder) ಅನ್ನು ರೀಫಿಲ್ ಮಾಡಿ ಎಂದು ಟ್ವೀಟ್ನಲ್ಲಿ ತಿಳಿಸಿದೆ.
WhatsApp ಮೂಲಕ ಬುಕಿಂಗ್:
ಈಗ ನೀವು ವಾಟ್ಸಾಪ್ ಮೂಲಕ ಎಲ್ಪಿಜಿ ಸಿಲಿಂಡರ್ ಬುಕ್ (LPG Cylinder Booking) ಮಾಡಬಹುದು. ನಿಮ್ಮ ಸೇವಾ ಪೂರೈಕೆದಾರರಿಗೆ ನೀವು ನೀಡಿದ ಅದೇ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ WhatsApp ನಲ್ಲಿ ಸಂದೇಶ ಕಳುಹಿಸುವ ಮೂಲಕ ನೀವು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು. ಇದಕ್ಕಾಗಿ, ನೀವು WhatsApp ಚಾಟ್ನಲ್ಲಿ REFILL ಎಂದು ಟೈಪ್ ಮಾಡಿ ಮತ್ತು ಅದನ್ನು 7588888824 ಸಂಖ್ಯೆಗೆ ಕಳುಹಿಸಬೇಕು. ಇದನ್ನು ಮಾಡುವುದರಿಂದ ನಿಮ್ಮ ಗ್ಯಾಸ್ ಸಿಲಿಂಡರ್ ಅನ್ನು ವಾಟ್ಸಾಪ್ ಮೂಲಕ ಸುಲಭವಾಗಿ ಬುಕ್ ಮಾಡಬಹುದು.
ಇದನ್ನೂ ಓದಿ- Sukanya Samriddhi Yojana: ಮಗಳ ಭವಿಷ್ಯ ಆರ್ಥಿಕವಾಗಿ ಭದ್ರಗೊಳಿಸಬೇಕಾದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ
ಮಿಸ್ಡ್ ಕಾಲ್ ನಲ್ಲಿ ಸಿಲಿಂಡರ್ ಬುಕಿಂಗ್ ಮಾಡಲಾಗುತ್ತದೆ:
ನೀವು ಇಂಡೇನ್ ಗ್ಯಾಸ್ (Indane Gas) ಪೂರೈಕೆದಾರರಿಂದ ರೀಫಿಲ್ ಮಾಡುತ್ತಿದ್ದರೆ ನೀವು ಕೇವಲ ಮಿಸ್ಡ್ ಕಾಲ್ನಲ್ಲಿ ಗ್ಯಾಸ್ ರೀಫಿಲ್ ಮಾಡಬಹುದು. ಇದಕ್ಕಾಗಿ, ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8454955555 ಗೆ ಮಿಸ್ಡ್ ಕಾಲ್ ಅನ್ನು ನೀಡಬೇಕು. ಇದರಿಂದ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಸಿಲಿಂಡರ್ ಅನ್ನು ಬುಕ್ ಮಾಡಲಾಗುತ್ತದೆ.
SMS ಮೂಲಕ ಬುಕಿಂಗ್ :
ನೀವು SMS ಮೂಲಕ ನಿಮ್ಮ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಬಯಸಿದರೆ, ಇದು ತುಂಬಾ ಸುಲಭವಾದ ಮಾರ್ಗವಾಗಿದೆ, ಇದಕ್ಕಾಗಿ ನೀವು <16-ಅಂಕಿಯ ಇಂಡೇನ್ ID> <ಆಧಾರ್ ನ ಕೊನೆಯ ನಾಲ್ಕು ಅಂಕೆಗಳು> ಟೈಪ್ ಮಾಡಿ SMS ಮೂಲಕ 7718955555 ಗೆ ಕಳುಹಿಸಬೇಕು. ಇದನ್ನು ಮಾಡುವ ಮೂಲಕ ನಿಮ್ಮ ಇಂಡೇನ್ ಗ್ಯಾಸ್ ಸಿಲಿಂಡರ್ ರೀಫಿಲ್ ಬುಕ್ ಮಾಡಲಾಗುತ್ತದೆ.
ಇದನ್ನೂ ಓದಿ- Post Office ಬ್ಯಾಂಕ್ ಬಡ್ಡಿ ದರ ಇಳಿಕೆ, ಉಳಿದ ಶುಲ್ಕ ಹೆಚ್ಚಳ; ಯಾವಾಗ ಜಾರಿಗೆ ಬರಲಿದೆ
ಇಂಡೇನ್ ಸಿಲಿಂಡರ್ ಅನ್ನು ಆಪ್ ಮೂಲಕವೂ ಬುಕ್ ಮಾಡಬಹುದು:
ನೀವು ಇಂಡೇನ್ ಗ್ಯಾಸ್ ಸಿಲಿಂಡರ್ ಅನ್ನು ತೆಗೆದುಕೊಂಡರೆ, ನೀವು ಅದರ ಆಪ್ ಮೂಲಕ ಆನ್ಲೈನ್ನಲ್ಲಿ ಗ್ಯಾಸ್ ಬುಕ್ ಮಾಡಬಹುದು. ಇದಕ್ಕಾಗಿ, ನೀವು Google Play Store ನಿಂದ Indane ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಮತ್ತು ಆಪ್ ಅನ್ನು ಇನ್ಸ್ಟಾಲ್ ಮಾಡಿದ ನಂತರ, ಅದರಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ನೀವು ಗ್ಯಾಸ್ ಅನ್ನು ಆನ್ಲೈನ್ನಲ್ಲಿ ಬುಕ್ ಮಾಡಬಹುದು.
ಪೇಟಿಎಂನಲ್ಲಿ ರೂ .900 ವರೆಗೆ ಕ್ಯಾಶ್ಬ್ಯಾಕ್:
ನೀವು ನಿಮ್ಮ LPG ಸಿಲಿಂಡರ್ ಅನ್ನು Paytm ಮೂಲಕ ಬುಕ್ ಮಾಡಿದರೆ, ನೀವು ರೂ. 900 ವರೆಗೆ ಕ್ಯಾಶ್ಬ್ಯಾಕ್ ಪಡೆಯಬಹುದು. ಇದಕ್ಕಾಗಿ, ನೀವು Paytm ನ ಅಧಿಕೃತ ವೆಬ್ಸೈಟ್ ಅಥವಾ ಆಪ್ಗೆ ಲಾಗಿನ್ ಆಗಬೇಕು ಮತ್ತು ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ ನೀವು ನಿಮ್ಮ ಗ್ಯಾಸ್ ಪ್ರೊವೈಡರ್ ಅನ್ನು ಆರಿಸಬೇಕಾಗುತ್ತದೆ. ಸಿಲಿಂಡರ್ ಬುಕಿಂಗ್ ಮಾಡಿದ ನಂತರ, ನೀವು ಆನ್ಲೈನ್ ಪಾವತಿ ವೇದಿಕೆಯಾದ Paytm ನಿಂದ ರೂ. 900 ವರೆಗೆ ಕ್ಯಾಶ್ಬ್ಯಾಕ್ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ