ಆರ್ಟ್ ಆಫ್ ಲಿವಿಂಗ್ ನ ಆಶ್ರಮದಲ್ಲಿ ದೀಪೋತ್ಸವದೊಡನೆ ಕೂಡಿದ ಭಕ್ತಿಯ ಮೆರಗಿನಿಂದ ವೈಭವಯುತವಾಗಿ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು.ಕಾರ್ತಿಕ ದೀಪವು ತಮಿಳುನಾಡಿನ ಅತೀ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದ್ದು, ಕತ್ತಲಿನ ಮೇಲೆ ದೀಪದ ವಿಜಯವನ್ನು ಮತ್ತು ದೈವೀಶಕ್ತಿಯ ಅನಂತ ಅಸ್ತಿತ್ವವನ್ನು ಸಂಭ್ರಮಿಸುವ ಹಬ್ಬವಾಗಿದೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಭಾರತದ 18 ರಾಜ್ಯಗಳಲ್ಲಿ 95 ಕುಶಲ ತರಬೇತಿ ಕೇಂದ್ರಗಳನ್ನು ನಡೆಸುತ್ತಿದೆ ಮತ್ತು ಸುಸ್ಥಿರವಾದ ಕ್ಷೇತ್ರಗಳಾದ ಸೌರಶಕ್ತಿಯಂತಹ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಅನೇಕ ಕೇಂದ್ರಗಳು ದೂರದ ಪ್ರದೇಶಗಳಲ್ಲಿ ಮತ್ತು ಭಾರತದ ಈಶಾನ್ಯ ಭಾಗದ ಗಡಿ ಪ್ರದೇಶಗಳ ಹಳ್ಳಿಗಳಲ್ಲಿವೆ.
ನಮ್ಮ ದೇಶದ ಪಾರಂಪರಿಕ ಕಲೆ ಹಾಗೂ ಕರಕುಶಲತೆಯ ನಿರಂತರ ಅವನತಿಗೆ ಕಳೆದ ಎರಡು ದಶಕಗಳು ಸಾಕ್ಷಿಯಾಗಿದೆ. ಕುಶಲಕರ್ಮಿಗಳ ಮಕ್ಕಳು ಬೇರೆ ವೃತ್ತಿಯನ್ನು ಆರಿಸಿಕೊಳ್ಳುತ್ತಿರುವ ಪರಿಣಾಮವಾಗಿ, ವಂಶಪಾರಂಪರ್ಯವಾಗಿ ಹರಿದು ಬರುತ್ತಿದ್ದ ಕರಕುಶಲತೆಯ ಜ್ಞಾನವು ಈಗ ಕ್ಷೀಣಿಸುತ್ತಿದೆ.
ಇದೆ ಮೊದಲನೇ ಬಾರಿಗೆ ಶೈಕ್ಷಣಿಕ ಉತ್ಕೃಷ್ಟತೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಶಾಲೆಗಳು ಮತ್ತು ಅದರ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ.ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಆಶೀರ್ವದಿಸಲ್ಪಟ್ಟಿತು.
ಆರ್ಟ್ ಆಫ್ ಲಿವಿಂಗ್ನ ಉಪಕ್ರಮವಾದ ವರ್ಲ್ಡ್ ಫೋರಮ್ ಫಾರ್ ಆರ್ಟ್ ಅಂಡ್ ಕಲ್ಚರ್ (WFAC), ಭಾವ್ - ದಿ ಎಕ್ಸ್ಪ್ರೆಶನ್ಸ್ ಸಮ್ಮಿಟ್ 2023 ಎಂಬ ಶೀರ್ಷಿಕೆಯ ನಾಲ್ಕು ದಿನಗಳ ಪ್ರದರ್ಶನ ಮತ್ತು ಲಲಿತಕಲೆಗಳ ಕ್ಯುರೇಟೆಡ್, ಅವಂತ್-ಗಾರ್ಡ್ ನಾಲ್ಕು ದಿನಗಳ ಉತ್ಸವಕ್ಕೆ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ ಸಾಕ್ಷಿಯಾಯಿತು.
ಆರ್ಟ್ ಆಫ್ ಲಿವಿಂಗ್, ಬದುಕಿನ ಕ್ಲಿಷ್ಟವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಅರ್ಥೈಸಿಕೊಳ್ಳುವ ಒಂದು ಆಧ್ಯಾತ್ಮಿಕ ಕೇಂದ್ರ. ಜೀವನದ ಅರ್ಥವನ್ನು ಸರಳ ರೀತಿಯಲ್ಲಿ ಕಂಡುಕೊಳ್ಳುವ ವಿಧಾನ ಪದ್ಧತಿಗಳನ್ನು ತಿಳಿಯಲು ಈ ಕೇಂದ್ರಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇತ್ತೀಚಿಗಷ್ಟೇ ಸಿಬಿಐ ಮುಖ್ಯಸ್ಥರನ್ನು ರಜೆ ಮೇರೆಗೆ ಕಳುಹಿಸಿದ ಹಿನ್ನಲೆಯಲ್ಲಿ ವಿರೋಧ ಪಕ್ಷದ ಕೆಂಗಣ್ಣಿಗೆ ಕೇಂದ್ರ ಸರ್ಕಾರವು ಗುರಿಯಾಗಿತ್ತು.ಈ ಹಿನ್ನಲೆಯಲ್ಲಿ ಈಗ ಸಿಬಿಐ 150 ಅಧಿಕಾರಿಗಳಿಗೆ ಸಕಾರಾತ್ಮಕ ಚಿಂತನೆ ಮೂಡಿಸುವ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಶಿಬಿರವನ್ನು ನವಂಬರ 10 ರಿಂದ ಮೂರು ದಿನಗಳ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.