ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮಿ' ಧಾರಾವಾಹಿ: ಭಾಗ್ಯಳ ಬದುಕಿನಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು..!

Bhagyalakshmi: ಭಾಗ್ಯ ಮಹಾ ನಿರ್ಧಾರ: ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮಿ' ಧಾರಾವಾಹಿ- ಒಂದು ಗಂಟೆಯ ವಿಶೇಷ ಎಪಿಸೋಡ್... ಗಂಡನ ದ್ರೋಹಕ್ಕೆ ಭಾಗ್ಯಳ ಸ್ವಾಭಿಮಾನದ ಉತ್ತರ !

Written by - Yashaswini V | Last Updated : Feb 21, 2025, 03:07 PM IST
  • ಎಲ್ಲಾ ಸಂಕಷ್ಟಗಳಲ್ಲೂ ಜೊತೆಗಿರುತ್ತೇನೆ ಎಂದು ಮಾತು ಕೊಟ್ಟ ಗಂಡ ಇನ್ನೊಂದು ಮದುವೆ ಆದಾಗ ಒಬ್ಬ ಹೆಣ್ಣು ಮಗಳು ಅದಕ್ಕೆ ಹೇಗೆ ಪ್ರತಿಸ್ಪಂದಿಸಬಹುದು?
  • ಇಂತಹ ಸಂಧರ್ಭದಲ್ಲಿ 'ಭಾಗ್ಯ' ಕುಗ್ಗಿ ಹೋಗಬಹುದಾ? ಧೈರ್ಯ ಕಳೆದು ಕೊಳ್ಳಬಹುದಾ?
  • ಹೀಗೆ ಮಾಡಬೇಡಿ ಅಂತೆಲ್ಲಾ ಪತಿಯ ಕಾಲಿಗೆ ಬಿದ್ದು ಗೋಳಾಡಬಹುದಾ?
ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮಿ' ಧಾರಾವಾಹಿ: ಭಾಗ್ಯಳ ಬದುಕಿನಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು..!  title=

Bhagya Lakshmi Serial: ಕಲರ್ಸ್ ಕನ್ನಡ ಧಾರಾವಾಹಿಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಧಾರಾವಾಹಿ, 'ಭಾಗ್ಯಲಕ್ಷ್ಮಿ'. ವಾರದ ಏಳು ದಿನವೂ ಸಂಜೆ 7ಕ್ಕೆ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.  ಭಾಗ್ಯ ಪಾತ್ರವು ಪ್ರತಿ ಮನೆ ಮಂದಿಯ ಮನ ಗೆದ್ದ ಪಾತ್ರ. ಭಾಗ್ಯಳ ಪ್ರತಿ ಗೆಲುವಿಗೆ ಜನ ಸಂತಸ ಪಟ್ಟಿದ್ದಾರೆ. ಅವಳು ಸೋತಾಗ ಗೆಲ್ಲಲಿ ಎಂದು ಹರಸಿದವರಿದ್ದಾರೆ. ಭಾಗ್ಯ ಅನೇಕ ಮಹಿಳೆಯರಿಗೆ ಪ್ರೇರಣೆ ಆಗಿರುವುದು ಸುಳ್ಳಲ್ಲ. 

ಭಾಗ್ಯ -ತಾಂಡವ್ ವೈವಾಹಿಕ ಜೀವನ ಆರಂಭವಾದಾಗ ಅವಳು ಅಮಾಯಕ ಸದ್ಗ್ರುಹಿಣಿ. ತನ್ನ ಗಂಡನ ಬಗ್ಗೆ ಸದಭಿಪ್ರಾಯ ಮಾತ್ರ ಇದ್ದ ಹೆಣ್ಣು. ಆದರೆ ಕ್ರಮೇಣ ತಾಂಡವ್ ನ ಇನ್ನೊಂದು ಮುಖದ ಅರಿವಾದಾಗ ಭಾಗ್ಯ ಆ ಸಂಧರ್ಭವನ್ನು "ನಾನು ಭಾಗ್ಯ'' ಎಂದು ಎದುರಿಸಿ ನಿಂತಳು. ಜನರಿಗೂ ಈ ಒಂದು ಘಟ್ಟ ಬಹಳ ಮೆಚ್ಚುಗೆಯಾಯಿತು. ಇಂತಹ ಭಾಗ್ಯಳ ಬದುಕಿನಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ಬಂದಿದೆ! ಅದು ತನ್ನ ಗಂಡ ತಾಂಡವ್ - ಶ್ರೇಷ್ಠಾಳನ್ನು ಮದುವೆ  ಆಗಿರುವುದು!

ಎಲ್ಲಾ ಸಂಕಷ್ಟಗಳಲ್ಲೂ ಜೊತೆಗಿರುತ್ತೇನೆ ಎಂದು ಮಾತು ಕೊಟ್ಟ ಗಂಡ ಇನ್ನೊಂದು ಮದುವೆ ಆದಾಗ ಒಬ್ಬ ಹೆಣ್ಣು ಮಗಳು ಅದಕ್ಕೆ ಹೇಗೆ ಪ್ರತಿಸ್ಪಂದಿಸಬಹುದು? ಇಂತಹ ಸಂಧರ್ಭದಲ್ಲಿ 'ಭಾಗ್ಯ' ಕುಗ್ಗಿ ಹೋಗಬಹುದಾ?  ಧೈರ್ಯ ಕಳೆದು ಕೊಳ್ಳಬಹುದಾ? ಹೀಗೆ ಮಾಡಬೇಡಿ ಅಂತೆಲ್ಲಾ ಪತಿಯ ಕಾಲಿಗೆ ಬಿದ್ದು ಗೋಳಾಡಬಹುದಾ?

ಇದನ್ನೂ ಓದಿ- ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಂಗಿ ಕೂಡ ಟಾಪ್ ಹೀರೋಯಿನ್... ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗರಿ... ಯಾರಾಕೆ..!

ಖಂಡಿತಾ ಅಲ್ಲ, "ಭಾಗ್ಯ' ಹಾಗಲ್ಲ ! ಗಂಡನ ದ್ರೋಹಕ್ಕೆ ಭಾಗ್ಯ ಸ್ವಾಭಿಮಾನದ ಉತ್ತರ ಕೊಡುತ್ತಾಳೆ.

ತಾಂಡವ್ ತತ್ತರಿಸಿ ಹೋಗುವಂತೆ ಅವನು ಬೆಲೆ ಕೊಡದ ತಾಳಿಯಯನ್ನು ಕುತ್ತಿಗೆಯಿಂದ  ತೆಗೆಯುತ್ತಾಳೆ! 

"ಕಟ್ಟಿರೋ ತಾಳಿಗೆ ಗಂಡನೇ ಬೆಲೆ ಕೊಡಲಿಲ್ಲ ಅಂದ್ಮೇಲೆ, ಈ ತಾಳಿ ಭಾರ ಆಗ್ತಿದೆ, ಅತ್ತೆ! ಇವರಿಗೆ ಬೇಡದಿರೋ ಸಂಬಂಧ ನನಗೂ ಬೇಡ, ಇದು ನನಗೆ ಬೇಡ! ಇದು ನನಗೆ ಬೇಡ!'' ಎಂದು ತನ್ನ ಅತ್ತೆ ಕುಸುಮಾಳಿಗೆ ಹೇಳುವ ಭಾಗ್ಯ ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅದು ಭಾಗ್ಯಳ ಮಹಾ ನಿರ್ಧಾರ!  ತಾಳಿಯನ್ನು ತೆಗೆದು ತಾಂಡವ್ ನ ಕೈಗಿಡುತ್ತಾಳೆ ! 

ಇದನ್ನೂ ಓದಿ- ಶಾರುಖ್ ಖಾನ್ ಐಷಾರಾಮಿ 'ಮನ್ನತ್' ಬಿಟ್ಟು ಬಾಡಿಗೆ ಮನೆಯಲ್ಲಿರುವುದೇಕೆ..! ಅದರ ತಿಂಗಳ ಬಾಡಿಗೆ ಕೇಳಿದ್ರೆ ಆಗ್ತೀರಾ ಶಾಕ್!

ಭಾಗ್ಯ ತನ್ನ ಗಂಡ ಮಾಡಿದ ಮೋಸದಿಂದ ದಿಗ್ಭ್ರಾಂತಳಾಗುವುದಿಲ್ಲ, ಆದರೆ ಅವಳು ತೆಗೆದುಕೊಳ್ಳುವ ಈ ದಿಟ್ಟ ನಿರ್ಧಾರ ಅವಳನ್ನು ದಿಗ್ವಿಜಯಕ್ಕೆ ಸಿದ್ಧ ಮಾಡುವಂಥದ್ದು. ಭಾಗ್ಯ ಎಷ್ಟೊಂದು ಗಟ್ಟಿಗಿತ್ತಿ ಎಂದು ಬಿಂಬಿಸುವ, ಯಾವುದೇ ಕಷ್ಟ ಬಂದರೂ ಸ್ವತಂತ್ರವಾಗಿ ಯೋಚಿಸುವ - ಎದುರಿಸುವ ಭಾಗ್ಯಳನ್ನು ಇಲ್ಲಿ ಚಿತ್ರಿಸಲಾಗಿದೆ.  ತೆರೆಯ ಮೇಲೆ ಬರಲಿರುವ ಈ ಅಪರೂಪದ ಸನ್ನಿವೇಶ ಮುಂದಿನ ದಿನಗಳಲ್ಲಿ ಹಲವಾರು ಚರ್ಚೆ, ವಿವಾದಗಳನ್ನು ಹುಟ್ಟು ಹಾಕಬಹುದು. ಆದರೆ ಅಪರೂಪವಾದದ್ದು ಒಂದು ಆಗುತ್ತಲೇ ಇರುವುದು - ಭಾಗ್ಯಳ ಬದುಕು ಅಲ್ಲವೇ?

ಸೋಮವಾರ (24 ಫೆಬ್ರವರಿ)  ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ " ಭಾಗ್ಯ, ಮಹಾ ನಿರ್ಧಾರ' ಒಂದು ಗಂಟೆಯ ವಿಶೇಷ ಎಪಿಸೋಡ್ ಪ್ರಸಾರವಾಗಲಿದ್ದು  'ಭಾಗ್ಯಲಕ್ಷ್ಮಿ' ಧಾರಾವಾಹಿಯ ಅಭಿಮಾನಿಗಳಿಗೆ ಮೆಚ್ಚುಗೆಯಾಗುವುದರಲ್ಲಿ ಅನುಮಾನವಿಲ್ಲ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News