"ಛಾವಾ" ಚಿತ್ರಕ್ಕೆ ಹೃದಯಸ್ಪರ್ಶಿ ಸಂಭಾಷಣೆ ಬರೆದದ್ದು ಒರ್ವ "ಮುಸ್ಲಿಂ ಬರಹಗಾರ"..! 1 ರೂ. ಸಂಭಾವನೆ ಸಹ ಪಡೆದಿಲ್ಲ.. 

Chhaava dialogue writer : ಛತ್ರಪತಿ ಸಂಭಾಜಿ ಮಹಾರಾಜರ ವೀರಗಾಥೆಯನ್ನು ಹೇಳುವ 'ಛಾವಾ' ಚಿತ್ರ ಎಲ್ಲರ ಮೇಲೂ ಆಳವಾದ ಪ್ರಭಾವ ಬೀರಿದೆ. ಈ ಚಿತ್ರದಲ್ಲಿನ ಹೃದಯಸ್ಪರ್ಶಿ ಸಂಭಾಷಣೆಯನ್ನು ಬರೆದದ್ದು ಒರ್ವ ಮುಸ್ಲಿಂ ಬರಹಗಾರ, ಅಷ್ಟೇ ಅಲ್ಲ.. ಇದಕ್ಕಾಗಿ ಅವರು ಒಂದೇ ಒಂದು ರೂಪಾಯಿ ಸಂಭಾವನೆಯನ್ನೂ ಪಡೆಯಲಿಲ್ಲ. ಯಾರು ಆ ಲೇಖಕರು..? ಬನ್ನಿ ನೋಡೋಣ

Written by - Krishna N K | Last Updated : Feb 22, 2025, 03:55 PM IST
    • 'ಛಾವಾ' ಚಿತ್ರ ಎಲ್ಲರ ಮೇಲೂ ಆಳವಾದ ಪ್ರಭಾವ ಬೀರಿದೆ.
    • ಈ ಚಿತ್ರದಲ್ಲಿನ ಹೃದಯಸ್ಪರ್ಶಿ ಸಂಭಾಷಣೆಯನ್ನು ಬರೆದದ್ದು ಒರ್ವ ಮುಸ್ಲಿಂ ಬರಹಗಾರ
    • ಒಂದು ರೂಪಾಯಿ ಸಂಭಾವನೆಯನ್ನೂ ಪಡೆಯಲಿಲ್ಲ ಆ ಲೇಖಕ
"ಛಾವಾ" ಚಿತ್ರಕ್ಕೆ ಹೃದಯಸ್ಪರ್ಶಿ ಸಂಭಾಷಣೆ ಬರೆದದ್ದು ಒರ್ವ "ಮುಸ್ಲಿಂ ಬರಹಗಾರ"..! 1 ರೂ. ಸಂಭಾವನೆ ಸಹ ಪಡೆದಿಲ್ಲ..  title=

Chhaava movie : 'ಛಾವಾ' ಕ್ರೇಜ್ ಎಲ್ಲೆಡೆ ಇದೆ. ಈ ಚಿತ್ರವನ್ನು ಒಮ್ಮೆ ನೋಡಿದರೂ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಈ ಸಿನಿಮಾ ಎಲ್ಲರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತಿದೆ.. ಕ್ಲೈಮ್ಯಾಕ್ಸ್‌ ಅಂತೂ ಅದ್ಭುತವಾಗಿದೆ.. ಸಿನಿಮಾದ ಕೇಂದ್ರ ಬಿಂದು ಅಂದ್ರೆ ವಿಕ್ಕಿ ನಟನೆ ಮತ್ತು ಡೈಲಾಗ್ಸ್‌.. 

ಹೌದು.. ಛಾವಾ ಚಿತ್ರದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿರುವ ವಿಕ್ಕಿ ಕೌಶಲ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ. ವಿಕ್ಕಿ ಸಂಭಾಜಿ ಮಹಾರಾಜರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಹೇಳಬಹುದು.. ರಶ್ಮಿಕಾ ರಾಣಿ ಯೇಸುಬಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಇದನ್ನೂ ಓದಿ:ಚಿತ್ರ ಬಿಡುಗಡೆಗೆ ಮುನ್ನ ಮಹಾಕುಂಭ ಮೇಳದಲ್ಲಿ ಮಿಂದೆದ್ದ "ಕೊರಗಜ್ಜ" ಚಿತ್ರ ನಿರ್ದೇಶಕ- ನಿರ್ಮಾಪಕ

ಅಕ್ಷಯ್ ಖನ್ನಾ ಔರಂಗಜೇಬ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಎಲ್ಲಾ ನಟರು ಪ್ರಶಂಸೆಗೆ ಅರ್ಹರಾಗಿದ್ದಾರೆ ಅಂದ್ರೆ ತಪ್ಪಾಗಲ್ಲ. ಆದರೆ ಈ ಚಿತ್ರದಲ್ಲಿ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಇನ್ನೊಂದು ವಿಷಯವಿದೆ. ಅದು ಆ ಸಿನಿಮಾದ ಸಂಭಾಷಣೆ. ಸಂಭಾಷಣೆಯೇ ಈ ಚಿತ್ರದ ಬಲವಾದ ಅಂಶ.

'ಛಾವಾ' ಚಿತ್ರದಲ್ಲಿ ಕಾವ್ಯಾತ್ಮಕ ಸಂಭಾಷಣೆಗಳನ್ನು ಬರೆದವರು ಯಾರು..? ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ.. ಅವರ ಹೆಸರನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಈ ಚಿತ್ರಕ್ಕೆ ಸಂಭಾಷಣೆಗಳನ್ನು ಮುಸ್ಲಿಂ ಬರಹಗಾರರು ಬರೆದಿದ್ದಾರೆ. ಈ ಬರಹಗಾರನ ಹೆಸರು ಇರ್ಷಾದ್ ಕಾಮಿಲ್. 

ಇದನ್ನೂ ಓದಿ:ನನ್ನ 20 ವರ್ಷದ ʼಆʼ ಆಸೆ ಇನ್ನೂ ಈಡೇರಿಲ್ಲ! ಖ್ಯಾತ ನಟಿಯ ಸೆನ್ಸೇಷನಲ್‌ ಹೇಳಿಕೆ ವೈರಲ್..‌

ಗೀತರಚನೆಕಾರ ಇರ್ಷಾದ್ ಕಾಮಿಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 'ಛಾವಾ' ಚಿತ್ರದಲ್ಲಿ ಕಾವ್ಯಾತ್ಮಕ ಸಂಭಾಷಣೆಗಳನ್ನು ಬರೆಯಲು ತಾವು ಯಾವುದೇ ಶುಲ್ಕವನ್ನು ತೆಗೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ... “ಹಾಡುಗಳ ಹೊರತಾಗಿ, ಚಿತ್ರದ ಕಾವ್ಯಾತ್ಮಕ ಸಂಭಾಷಣೆಗಳನ್ನು ಬರೆಯುವಲ್ಲಿಯೂ ನಾನು ತೊಡಗಿಸಿಕೊಂಡಿದ್ದೇನೆ. ಸಂಭಾಜಿ ಮಹಾರಾಜರ ಮೇಲಿನ ಗೌರವದಿಂದ, ನಾನು ಅವರ ಬಗ್ಗೆ ಬರೆಯಲು ಒಂದು ಪೈಸೆಯನ್ನೂ ಶುಲ್ಕ ತೆಗೆದುಕೊಂಡಿಲ್ಲ. ಸಂಭಾಜಿ ಮಹಾರಾಜ್ ನನಗೆ ಕೇವಲ ಐತಿಹಾಸಿಕ ವ್ಯಕ್ತಿಯಲ್ಲ, ಅವರು ಸ್ಫೂರ್ತಿಯೂ ಹೌದು" ಎಂದು ಅವರು ಹೇಳಿದರು. 

ಅವರ ಜೀವನವನ್ನು ಅಧ್ಯಯನ ಮಾಡುವುದು ಮತ್ತು ಸಂಭಾಷಣೆ ಬರೆಯುವುದು ನನಗೆ ಹೆಮ್ಮೆಯ ಅನುಭವವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಇರ್ಷಾದ್ ಕಾಮಿಲ್ ಜೊತೆಗೆ, ಚಿತ್ರದ ಕೆಲವು ಸಂಭಾಷಣೆಗಳನ್ನು ರಿಷಿ ವೀರ್ವಾನಿ ಬರೆದಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಬರಹಗಾರ ಇರ್ಷಾದ್‌ ವ್ಯಕ್ತಿತ್ವವನ್ನು ನೆಟ್ಟಿಗರು ಹೊಗಳುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News