ನವದೆಹಲಿ : Petrol-Diesel Price update : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಿದೆ. ತೈಲಬೆಲೆಯನ್ನು ಕಡಿತಗೊಳಿಸಬೇಕು ಎನ್ನುವ ಬೇಡಿಕೆ ಕೂಡಾ ಹೆಚ್ಚುತ್ತಲೇ ಇದೆ. ಇದರೊಂದಿಗೆ, ಜಿಎಸ್ಟಿ (GST) ಬಗ್ಗೆಯೂ ಚರ್ಚೆಯಾಗುತ್ತಲೇ ಇದೆ. ಆದರೆ, ಪೆಟ್ರೋಲ್ ಡಿಸೇಲ್ ದರವನ್ನು (Petrol-Diesel price) ಸರ್ಕಾರ ಸದ್ಯಕ್ಕಂತೂ ಇಳಿಸುವ ರೀತಿ ಕಾಣುತ್ತಿಲ್ಲ. ಯಾಕೆಂದರೆ ಪ್ರಸ್ತುತ ತೈಲ ಬೆಲೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು, ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಈ ನಿರ್ಧಾರದ ಹಿಂದಿನ ಕಾರಣವನ್ನು ಕೂಡಾ ಹೇಳಿದ್ದಾರೆ.
ತೈಲ ಬಾಂಡ್ಗಳಿಂದಾಗಿ ದರ ಕಡಿತ ಸಾಧ್ಯವಿಲ್ಲ :
ಯುಪಿಎ ಸರ್ಕಾರ (UPA Government) ತೈಲ ಬೆಲೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ 2013-14ನೇ ಸಾಲಿನಲ್ಲಿ ತೈಲ ಬಾಂಡ್ಗಳನ್ನು ನೀಡಿತ್ತು ಎಂದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ಆದರೆ, ಅದನ್ನು ಮೋದಿ ಸರ್ಕಾರ (Modi government) ಭರಿಸುತ್ತಿದೆ ಎಂದವರು ಹೇಳಿದ್ದಾರೆ. ಯುಪಿಎ ಸರ್ಕಾರ ಜಾರಿಗೆ ತಂದಿರುವ ತೈಲ ಬಾಂಡ್ಗಳಿಂದ (Oil Bond) ಆದಾಯದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಪ್ರತಿ ವರ್ಷ 10 ಸಾವಿರ ಕೋಟಿಗಳಷ್ಟು ಬಡ್ಡಿಯನ್ನು ತೈಲ ಬಾಂಡ್ಗಳಿಗೆ ಪಾವತಿಸಬೇಕಾಗುತ್ತದೆ ಎಂದು ನಿರ್ಮಲಾ ಸೀತಾರಾರಾಮನ್ ಹೇಳಿದ್ದಾರೆ. ಈ ಹಣ ನಮ್ಮ ಕೈಯಲ್ಲಿದ್ದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತಗೊಳಿಸುವ ಬಗ್ಗೆ ಯೋಚಿಸಬಹುದಿತ್ತು ಎಂದಿದ್ದಾರೆ. ಇಲ್ಲಿವರೆಗೆ 60205.67 ಕೋಟಿ ರೂಪಾಯಿ ಬಡ್ಡಿಯನ್ನು ಮೋದಿ ಸರ್ಕಾರ ಪಾವತಿಸಿದೆ ಎಂದವರು ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ತೈಲ ಬೆಲೆಯಲ್ಲಿ ಇಳಿಕೆಯಾಗುವ ಭರವಸೆ ಇಲ್ಲ ಎಂದೇ ಹೇಳಬಹುದು.
ಇದನ್ನೂ ಓದಿ : PAN Card ಕಳೆದುಹೋದರೆ ಚಿಂತೆ ಬೇಡ, ಈ ವೆಬ್ ಸೈಟ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಬಹುದು
2025-26 ರೊಳಗೆ ಪಾವತಿಸಬೇಕು ಆಯಿಲ್ ಬಾಂಡ್ ಹಣ:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಾರ, ಮಾರ್ಚ್ 2021 ರ ವೇಳೆಗೆ, ತೈಲ ಬಾಂಡ್ಗಳ ಮೂಲ ಮೊತ್ತ 130923.17 ಕೋಟಿ ರೂಯಷ್ಟಿತ್ತು . ಇದರ ಬಡ್ಡಿಯನ್ನು (Interest) 2025-26 ವರ್ಷದೊಳಗೆ ಪಾವತಿಸಬೇಕು. ತೈಲ ಬಾಂಡ್ಗಳ ಉದ್ದೇಶ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಕಡಿತಗೊಳಿಸುವುದಾಗಿತ್ತು. ಆದರೆ, ಯುಪಿಎ ಸರ್ಕಾರ ತನ್ನ ಹೊರೆಯನ್ನು ತೈಲ ಕಂಪನಿಗಳ ಮೇಲೆ ಹಾಕಿತ್ತು. 2024-25ರ ಒಂದೇ ವರ್ಷದಲ್ಲಿ 25 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನುಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : Jeevan Shanti Policy: LICಯ ಈ ಯೋಜನೆಯಲ್ಲಿ ಕೇವಲ ಒಂದು ಬಾರಿ ಹೂಡಿಕೆ ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಪೆನ್ಶನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ