PM Kisan : ಈ ದಿನ ರೈತರ ಖಾತೆಗೆ ಬೀಳಲಿದೆ ಪಿಎಂ ಕಿಸಾನ್ ನ 10ನೇ ಕಂತು, ರೈತರಿಗೆ ಹೀಗೆ ಸಿಗಲಿದೆ 4000 ರೂಪಾಯಿ

ಈ ಯೋಜನೆಯಡಿ, ಪಿಎಂ ಕಿಸಾನ್ ನ 9 ನೇ ಕಂತನ್ನು ಪಡೆಯದ ರೈತರು ಈಗ ಮುಂದಿನ ಕಂತಿನೊಂದಿಗೆ ಹಿಂದಿನ ಮೊತ್ತವನ್ನುಕೂಡಾ ಸೇರಿಸಿ ಪಡೆಯಲಿದ್ದಾರೆ. ಅಂದರೆ, 9 ನೇ  ಕಂತು ಪಡೆಯದ ರೈತರು ಈಗ 4000 ರೂ.ಯನ್ನು ಒಟ್ಟಾಗಿ ಪಡೆಯಲಿದ್ದಾರೆ.

Written by - Ranjitha R K | Last Updated : Oct 20, 2021, 07:04 PM IST
  • ಪಿಎಂ ಕಿಸಾನ್ ನ 10ನೇ ಕಂತು ಬಿಡುಗಡೆಗೆ ದಿನಾಂಕ ನಿಗದಿ
  • 10 ನೇ ಕಂತಿಗಾಗಿ ಕಾಯುತ್ತಿರುವ ರೈತರು
  • ರೈತರ ಖಾತೆಗೆ ಬೀಳಲಿದೆ 4 ಸಾವಿರ ರೂಪಾಯಿ
PM Kisan : ಈ ದಿನ ರೈತರ ಖಾತೆಗೆ ಬೀಳಲಿದೆ ಪಿಎಂ ಕಿಸಾನ್ ನ 10ನೇ ಕಂತು, ರೈತರಿಗೆ ಹೀಗೆ ಸಿಗಲಿದೆ  4000 ರೂಪಾಯಿ   title=
ಪಿಎಂ ಕಿಸಾನ್ ನ 10ನೇ ಕಂತು ಬಿಡುಗಡೆಗೆ ದಿನಾಂಕ ನಿಗದಿ (filephoto)

ನವದೆಹಲಿ : PM Kisan 10th Installment Update : ನೀವು PM ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಈ ಸುದ್ದಿಯನ್ನೊಮ್ಮೆ ಓದಿ. ಪಿಎಂ ಕಿಸಾನ್ ಯೋಜನೆ (PM Kisan yojana) ಅಡಿಯಲ್ಲಿ 10 ನೇ ಕಂತನ್ನು ಬಿಡುಗಡೆ ಮಾಡುವ ದಿನಾಂಕವನ್ನು ನಿಗದಿಪಡಿಸಲಾಗಿದೆ. ಕಂತನ್ನು ವರ್ಗಾಯಿಸಲು ಸರ್ಕಾರದಿಂದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಕಂತು ಬಿಡುಗಡೆ ದಿನಾಂಕ ನಿಗದಿ?
11.37 ಕೋಟಿ ರೈತರಿಗೆ ಖಾತೆಗೆ ಸರ್ಕಾರ ಇದುವರೆಗೆ 1.58 ಲಕ್ಷ ಕೋಟಿ ರೂಪಾಯಿಗಳನ್ನು ಕಳುಹಿಸಿದೆ. ಮುಂದಿನ ಅಂದರೆ ಯೋಜನೆಯ 10ನೇ ಕಂತನ್ನು ಸರ್ಕಾರ ಡಿಸೆಂಬರ್ 15 ರೊಳಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, ಕಳೆದ ವರ್ಷ ಡಿಸೆಂಬರ್ 25  ರಂದು ಸರ್ಕಾರವು ರೈತರ ಖಾತೆಗೆ (farmer account) ಹಣ ವರ್ಗಾಯಿಸಿತ್ತು.

ಇದನ್ನೂ ಓದಿ :   Share Market Update: IRCTC ಸೇರಿದಂತೆ 8 ಸ್ಟಾಕ್ ಗಳು F&O ಮೇಲೆ ಬ್ಯಾನ್! ನಿಮ್ಮ ಬಳಿಯೂ ಈ ಕಂಪನಿಗಳ ಷೇರುಗಳಿವೆಯೇ?

ರೈತರ ಖಾತೆಗೆ 4 ಸಾವಿರ ರೂಪಾಯಿ ಬರುತ್ತದೆಯೇ?:
ಈ ಯೋಜನೆಯಡಿ, ಪಿಎಂ ಕಿಸಾನ್ (PM Kisan) ನ 9 ನೇ ಕಂತನ್ನು ಪಡೆಯದ ರೈತರು ಈಗ ಮುಂದಿನ ಕಂತಿನೊಂದಿಗೆ ಹಿಂದಿನ ಮೊತ್ತವನ್ನುಕೂಡಾ ಸೇರಿಸಿ ಪಡೆಯಲಿದ್ದಾರೆ. ಅಂದರೆ, 9 ನೇ  ಕಂತು ಪಡೆಯದ ರೈತರು ಈಗ 4000 ರೂ.ಯನ್ನು ಒಟ್ಟಾಗಿ ಪಡೆಯಲಿದ್ದಾರೆ. ಆದರೆ ಈ ಸೌಲಭ್ಯವು ಸೆಪ್ಟೆಂಬರ್ 30 ಕ್ಕಿಂತ ಮೊದಲು ನೋಂದಾಯಿಸಿಕೊಂಡ ರೈತರಿಗೆ ಮಾತ್ರ ಲಭ್ಯವಿರುತ್ತದೆ . ನೀವು ಕೂಡಾ ಸೆಪ್ಟೆಂಬರ್ 30 ಕ್ಕಿಂತ ಮೊದಲು ನೋಂದಾಯಿಸಿಕೊಂದಿದ್ದರೆ, ನಿಮ್ಮ ಖಾತೆಗೂ ಈ ಬಾರಿ   4000 ರೂ. ವರ್ಗಾವಣೆಯಾಗಲಿದೆ.

10 ನೇ ಕಂತಿಗಾಗಿ ಕಾಯುತ್ತಿರುವ ರೈತರು : 
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan Samman Nidhi Yojana), ಈಗ ರೈತರು 10 ನೇ ಕಂತಿಗೆ ಕಾಯುತ್ತಿದ್ದಾರೆ. ಇದುವರೆಗೆ ಈ ಯೋಜನೆಯ 9 ಕಂತುಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ, ಕೇಂದ್ರ ಸರ್ಕಾರವು ತಲಾ 2,000 ರೂ.ಗಳ ಮೂರು ಕಂತುಗಳನ್ನು ಅಂದರೆ 6000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಕಳುಹಿಸುತ್ತದೆ.   

ಇದನ್ನೂ ಓದಿ :   FD ಮೇಲೆ ಹೂಡಿಕೆ ಮಾಡಲು ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ರೆ, ಮೊದಲು ಈ ವಿಷಯ ತಿಳಿದಿರಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News