ನವದೆಹಲಿ : PM Kisan FPO Yojana : ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಹೊಸ ಕೃಷಿ ಮಸೂದೆಯನ್ನು (Farm law) ತಂದ ನಂತರ, ಕೃಷಿಯನ್ನು ವ್ಯವಹಾರವನ್ನಾಗಿ ಮಾಡಲು ರೈತರಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗ ಇದು ಹೊಸ ಕೃಷಿ ಉದ್ಯಮವನ್ನು ಪ್ರಾರಂಭಿಸಲು ರೈತರಿಗೆ 15 ಲಕ್ಷ ರೂಪಾಯಿಗಳನ್ನು ನೀಡಲಿದೆ.
ರೈತರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಪಿಎಂ ಕಿಸಾನ್ ಎಫ್‌ಪಿಒ ಯೋಜನೆಯನ್ನು (PM Kisan FPO Yojana) ಪ್ರಾರಂಭಿಸಿದೆ. ಈ ಯೋಜನೆಯಡಿ ಫಾರ್ಮರ್ಸ್ ಪ್ರೊಡ್ಯುಸರ್ ಆರ್ಗನೈಸೇಷನ್ ಗೆ 15 ಲಕ್ಷ ರೂ. ನೀಡಲಿದೆ. ಈ ಯೋಜನೆಯಡಿ ದೇಶಾದ್ಯಂತದ ರೈತರಿಗೆ (Farmers) ಹೊಸ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಆರ್ಥಿಕ ನೆರವು ನೀಡಲಾಗುವುದು. ಈ ಯೋಜನೆಯಡಿ ಲಾಭ ಪಡೆಯಲು, 11 ರೈತರು ಒಟ್ಟಾಗಿ ಸಂಸ್ಥೆ ಅಥವಾ ಕಂಪನಿಯನ್ನು ರಚಿಸಬೇಕಾಗುತ್ತದೆ. ಇದರ ಅಡಿಯಲ್ಲಿ ರೈತರಿಗೆ ಕೃಷಿ ಉಪಕರಣಗಳು ಅಥವಾ ರಸಗೊಬ್ಬರಗಳು, ಬೀಜಗಳು ಅಥವಾ ಔಷಧಿಗಳನ್ನು ಪಡೆಯುವುದು ತುಂಬಾ ಸುಲಭವಾಗಲಿದೆ.
ಇದನ್ನೂ ಓದಿ : Good News: DA ಹಣ ಸಿಗುವ ದಿನಾಂಕ ಫಿಕ್ಸ್, ನೌಕರರಿಗೆ ಅರಿಯರ್ ಲಾಭ ಕೂಡ ಸಿಗಲಿದೆ
ಯೋಜನೆಯ ಉದ್ದೇಶವೇನು?
ರೈತರಿಗೆ ನೇರವಾಗಿ ಅನುಕೂಲವಾಗುವಂತೆ ಸರ್ಕಾರ, ಈ ಯೋಜನೆಯನ್ನು ಪ್ರಾರಂಭಿಸಿದೆ. ಇದರೊಂದಿಗೆ ರೈತರು ಯಾವುದೇ ದಲ್ಲಾಳಿಯ ಬಳಿಗೆ ಹೋಗಬೇಕಾಗಿಲ್ಲ. ಈ ಯೋಜನೆಯಡಿ ರೈತರಿಗೆ ಮೂರು ವರ್ಷಗಳಲ್ಲಿ ಕಂತಿನ ರೂಪದಲ್ಲಿ ಹಣವನ್ನು (Money) ಪಾವತಿಸಲಾಗುವುದು. ಈ ಯೋಜನೆಯಡಿ 2024 ರವರೆಗೆ ಸರ್ಕಾರ 68,245 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಪಿಎಂ ಕಿಸಾನ್ ಎಫ್‌ಪಿಒ ಯೋಜನೆಯ ಲಾಭ ಪಡೆಯಲು ರೈತರು ಸ್ವಲ್ಪ ಕಾಯಬೇಕಾಗುತ್ತದೆ. ಯಾಕೆಂದರೆ ಸರ್ಕಾರ ಇನ್ನೂ ನೋಂದಣಿ (Regestration) ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ. ಕೆಲವು ದಿನಗಳ ನಂತರ, ನೋಂದಣಿ ಪ್ರಕ್ರಿಯೆ ಪ್ರಾರಂಭವಾದ ತಕ್ಷಣ, ನಂತರ ಅರ್ಜಿಯನ್ನು ಭರ್ತಿ ಮಾಡಬಹುದಾಗಿದೆ. ಇದಕ್ಕಾಗಿ ಶೀಘ್ರದಲ್ಲೇ ಅಧಿಸೂಚನೆ (Notification) ಹೊರಡಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ : 800 ರೂಪಾಯಿ ದಾಟಲಿದೆ ಗ್ಯಾಸ್ ಸಿಲಿಂಡರ್..ಆದರೂ ನೀವು 300 ರೂ. ಉಳಿಸಬಹುದು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.