PM Kisan Samman Nidhi : ಈ ತಪ್ಪುಗಳಾಗಿದ್ದರೆ ಪಿಎಂ ಕಿಸಾನ್ ಸೌಲಭ್ಯದಿಂದ ನೀವೂ ವಂಚಿತರಾಗಬಹುದು

ಸರ್ಕಾರ ಈ ಯೋಜನೆಯೆ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರ ಒಳಗೆ ನೀಡುತ್ತದೆ. ಎರಡನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರ ಒಳಗೆ, ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡುತ್ತದೆ.  ಈ ತಿಂಗಳ ಅಂತ್ಯದ ವೇಳೆಗೆ, ಅಂದರೆ ಏಪ್ರಿಲ್ 22 ರಿಂದ ಏಪ್ರಿಲ್ 25 ರ ಒಳಗೆ 8ನೇ ಕಂತು ರೈತರ ಖಾತೆ ಸೇರುವ ನಿರೀಕ್ಷೆಯಿದೆ. 

Written by - Ranjitha R K | Last Updated : Apr 13, 2021, 04:26 PM IST
  • ಶೀಘ್ರ ರೈತರ ಖಾತೆ ಸೇರಲಿದೆ ಪಿಎಂ ಕಿಸಾನ್ 8ನೇ ಕಂತು
  • ಏಪ್ರಿಲ್ 22 ರಿಂದ 25 ರ ಒಳಗೆ 8ನೇ ಕಂತು ರೈತರ ಖಾತೆ ಸೇರುವ ನಿರೀಕ್ಷೆ
  • ಕೆಲ ತಪ್ಪುಗಳಾಗಿದ್ದರೆ ನೀವು ಈ ಸೌಲಭ್ಯದಿಂದ ವಂಚಿತರಾಗಬಹುದು.
PM Kisan Samman Nidhi : ಈ ತಪ್ಪುಗಳಾಗಿದ್ದರೆ  ಪಿಎಂ ಕಿಸಾನ್ ಸೌಲಭ್ಯದಿಂದ ನೀವೂ ವಂಚಿತರಾಗಬಹುದು title=
ಶೀಘ್ರ ರೈತರ ಖಾತೆ ಸೇರಲಿದೆ ಪಿಎಂ ಕಿಸಾನ್ 8ನೇ ಕಂತು (file photo)

ನವದೆಹಲಿ: ಪಿಎಂ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi) ಯೋಜನೆಯ 8ನೇ ಕಂತುಗಾಗಿ ದೇಶದ ಕೋಟಿ ರೈತರು ಕಾಯುತ್ತಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಈ ಕಂತು ರೈತರ (Farmers) ಖಾತೆಗೆ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಯೋಜನೆಯಡಿ 2000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಅಂದರೆ ಒಟ್ಟು 6000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ಹಾಕಲಾಗುತ್ತದೆ.  ಈ ಬಾರಿ ಸರ್ಕಾರ 11.66 ಕೋಟಿ ರೈತರ ಖಾತೆಗೆ ಈ ಹಣವನ್ನು ಹಾಕುತ್ತಿದೆ.

PM Kisan Samman Nidhiಯ ಕಂತು ಈ ತಿಂಗಳು ಖಾತೆ ಸೇರಲಿದೆ: 
ಸರ್ಕಾರ ಈ ಯೋಜನೆಯೆ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರ ಒಳಗೆ ನೀಡುತ್ತದೆ. ಎರಡನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರ ಒಳಗೆ, ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡುತ್ತದೆ.  ಈ ತಿಂಗಳ ಅಂತ್ಯದ ವೇಳೆಗೆ, ಅಂದರೆ ಏಪ್ರಿಲ್ 22 ರಿಂದ ಏಪ್ರಿಲ್ 25 ರ ಒಳಗೆ 8ನೇ ಕಂತು ರೈತರ ಖಾತೆ ಸೇರುವ ನಿರೀಕ್ಷೆಯಿದೆ. ಆದರೆ ನಿಮ್ಮಿಂದ ಕೆಲ ತಪ್ಪುಗಳಾಗಿದ್ದರೆ ನೀವು ಈ ಸೌಲಭ್ಯದಿಂದ ವಂಚಿತರಾಗಬಹುದು. 

ಇದನ್ನೂ ಓದಿ: LIC Pension : 41500 ಪಿಂಚಣಿ, ಬಡ್ಡಿ ಸಹಿತ ಹೂಡಿಕೆ ಹಣ ವಾಪಸ್, ತಿಳಿಯಿರಿ ಹೊಸ ಸ್ಕೀಮ್

PM Kisan ಲಾಭ ಪಡೆಯಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ : 
 1. ಪಿಎಂ ಕಿಸಾನ್ ಯೋಜನೆಗೆ (PM Kisan Samman Nidhi)ಅರ್ಜಿ ಸಲ್ಲಿಸುವಾಗ, ನಿಮ್ಮಲ್ಲಿ ಆಧಾರ್ ಸಂಖ್ಯೆ ಇಲ್ಲದಿದ್ದರೆ ಅಥವಾ ಆಧಾರ್ (Aadhaar) ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ, ನಿಮ್ಮ ಖಾತೆಗೆ ಹಣ ಬರುವುದಿಲ್ಲ. 
2. ಯೋಜನೆಗೆ ಹೊಸದಾಗಿ ನೋಂದಾಯಿಸಿಕೊಂಡ ರೈತರು (Farmers) ತಮ್ಮ ಜಮೀನಿನ ಪ್ಲಾಟ್ ಸಂಖ್ಯೆಯನ್ನು ಅರ್ಜಿ ನಮೂನೆಯಲ್ಲಿ ನಮೂದಿಸಬೇಕಾಗುತ್ತದೆ. ಅಂದರೆ, ಭೂಮಿ ನಿಮ್ಮ ಹೆಸರಿನಲ್ಲಿ ಇಲ್ಲದಿದ್ದರೆ, ನೀವು ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೊಸ ನಿಯಮಗಳು ಯೋಜನೆಗೆ ಸಂಬಂಧಿಸಿದ ಹಳೆಯ ಫಲಾನುಭವಿಗಳ ಮೇಲೆ ಪರಿಣಾಮ ಬೀರುವುದಿಲ್ಲ.
3. ಸರಿಯಾದ ಮತ್ತು ಪ್ರಮಾಣೀಕೃತ ಡೇಟಾವನ್ನು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಸಲ್ಲಿಸಿದಾಗ ಮಾತ್ರ ಯೋಜನೆಯ ಮೊತ್ತವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ.

ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಈ ರೀತಿ ಪರಿಶೀಲಿಸಿ : 
ನೀವು ಸಹ ಕೃಷಿಕರಾಗಿದ್ದರೆ ಮತ್ತು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೆ, ನೀವು ಮೊದಲ ಕಂತು 2000 ರೂಪಾಯಿಗಳನ್ನು ಸಹ ಪಡೆಯುತ್ತೀರಿ. ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ (Goverment) ಬಿಡುಗಡೆ ಮಾಡುತ್ತದೆ. ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡಾ ತಿಳಿದುಕೊಳ್ಳಬಹುದು. 
1. ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಬೇಕು.
2. ಇಲ್ಲಿ ನಿಮಗೆ Farmers Corner ಆಯ್ಕೆ ಕಾಣುತ್ತದೆ 
3. Farmers Corner ವಿಭಾಗದೊಳಗೆ, Beneficiaries List ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ನಂತರ ಪಟ್ಟಿಯಲ್ಲಿ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ಆರಿಸಬೇಕಾಗುತ್ತದೆ.
5. ಇದರ ನಂತರ Get Report ಮೇಲೆ ಕ್ಲಿಕ್ ಮಾಡಿದರೆ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ. 

ಇದನ್ನೂ ಓದಿ: Punjab National Bank Free Training - ಮಹಿಳಾ ವರ್ಗಕ್ಕೆ PNB ವತಿಯಿಂದ ಉಚಿತ ತರಬೇತಿ, ಇಲ್ಲಿದೆ ಡೀಟೇಲ್ಸ್

ನಿಮ್ಮ ಕಂತಿನ ಸ್ಟೇಟಸ್ ಕಂಡುಹಿಡಿಯುವುದು ಹೇಗೆ :
ವೆಬ್‌ಸೈಟ್‌ನಲ್ಲಿ Farmers Corner ಕ್ಲಿಕ್ ಮಾಡಿ.
Beneficiary Status  ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಈಗ  ಹೊಸ ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿಆಧಾರ್, ಮೊಬೈಲ್ (Mobile)ಸಂಖ್ಯೆಯನ್ನು ಹಾಕಿ
ತಕ್ಷಣ ನಿಮಗೆ ನಿಮ್ಮ ಕಂತಿನ ಸ್ಥಿತಿಯ ತಿಳಿಯುತ್ತದೆ
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News