ನವದೆಹಲಿ: Private Banks In Government Business - ಖಾಸಗಿ ವಲಯದ ಬ್ಯಾಂಕುಗಳಿಗೆ ಭಾರತ ಸರ್ಕಾರ (Modi Government) ಬಹುದೊಡ್ಡ ಉಡುಗೊರೆಯನ್ನು ನೀಡಿದೆ. ಇದರಿಂದ ಇನ್ಮುಂದೆ ಖಾಸಗಿ ಬ್ಯಾಂಕುಗಳು ಕೂಡ ಸರ್ಕಾರಿ ಬ್ಯಾಂಕುಗಳ ಜೊತೆಗೆ ದೇಶದ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರಾಗಲಿವೆ. ಖಾಸಗಿ ಬ್ಯಾಂಕುಗಳು ಸರ್ಕಾರಿ ವ್ಯವಹಾರದಲ್ಲಿ ಭಾಗವಹಿಸುವಿಕೆಯ ಮೇಲೆ ವಿಧಿಸಲಾಗಿರುವ ನಿಷೇಧವನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರದಿಂದ ಗ್ರಾಹಕರಿಗೆ ಉತ್ತಮ ಸೇವೆ ಮತ್ತು ಸೌಲಭ್ಯಗಳು ದೊರೆಯಲಿವೆ. ಸರ್ಕಾರದ ಈ ಆದೇಶದ ನಂತರ, ಖಾಸಗಿ ಬ್ಯಾಂಕುಗಳು ಸಾಮಾಜಿಕ ಮತ್ತು ಆರ್ಥಿಕ ಸಮಾವೇಶದ ಯೋಜನೆಗಳಲ್ಲಿ ಭಾಗವಹಿಸಲು ಸಹ ಸಾಧ್ಯವಾಗಲಿದೆ.
ಈ ಕುರಿತು ಮಾಹಿತಿ ನೀಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಹಣಕಾಸು ಸೇವೆಗಳ ಇಲಾಖೆಯ ಟ್ವಿಟರ್ ಹ್ಯಾಂಡಲ್‌ನಿಂದ ಬಿಡುಗಡೆಯಾದ ಟ್ವೀಟ್ ಅನ್ನು ಅವರು ರಿಟ್ವೀಟ್ ಮಾಡಿದ್ದಾರೆ ಮತ್ತು ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ. ತಮ್ಮ ರೀಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು "ಖಾಸಗಿ ಬ್ಯಾಂಕುಗಳು ಕೂಡ ಇನ್ಮುಂದೆ ಸರ್ಕಾರಿ ಬ್ಯಾಂಕುಗಳ ಜೊತೆಗೆ ದೇಶದ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರಾಗಲಿವೆ" ಎಂದಿದ್ದಾರೆ.
निजी बैंक अब सरकारी बैंकों के साथ बनेंगे देश के विकास में बराबर के साथी। निजी बैंकों के ऊपर सरकारी व्यवसाय पर लगी रोक हटी। उपभोक्ताओं को मिलेगी बेहतर सेवाएँ व सुविधाएं। सरकार के सामाजिक और वित्तीय समावेश योजनाओं में निजी बैंक भी होंगे भागीदार। @FinMinIndia https://t.co/ITtxalwNbx
— NSitharamanOffice (@nsitharamanoffc) February 24, 2021
ಇದನ್ನೂ ಓದಿ- Knight Frank Wealth Report 2021: ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆ ಶೇ.63 ರಷ್ಟು ಏರಿಕೆ: ವರದಿ
ಈ ಕುರಿತು ಟ್ವೀಟ್ ಮಾಡುವ ಮೂಲಕ ಆದೇಶದ ಕುರಿತು ಹೇಳಿದ DFS
ಇನ್ಮುಂದೆ ಖಾಸಗಿ ವಲಯದ ಬ್ಯಾಂಕುಗಳು ಕೂಡ ಭಾರತ ಸರ್ಕಾರದ ಯೋಜನೆಗಳ ಮೂಲಕ ಸಾರ್ವಜನಿಕರನ್ನು ತಲುಪಲು ಇದರಿಂದ ಸಾಧ್ಯವಾಗಲಿದೆ ಎಂದು ಡಿಎಫ್‌ಎಸ್ ಇಂಡಿಯಾ (DFS India) ತನ್ನ ಟ್ವೀಟ್ ಮಾಡುವ ಮೂಲಕ ತಿಳಿಸಿದೆ. ಏಕೆಂದರೆ ಸರ್ಕಾರ ನಿಷೇಧವನ್ನು (Embergo) ತೆಗೆದುಹಾಕಿದೆ. ಈ ನಿರ್ಧಾರದ ನಂತರ, ತೆರಿಗೆ ಪಾವತಿ ಮತ್ತು ಪಿಂಚಣಿ ಪಡೆಯುವುದು ಸುಲಭವಾಗಲಿದ್ದು, ಇನ್ಮುಂದೆ ಖಾಸಗಿ ಬ್ಯಾಂಕುಗಳು ಸಹ ಸಾರ್ವಜನಿಕ ವಲಯದ ಬ್ಯಾಂಕುಗಳಂತೆ ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಇದಲ್ಲದೆ ಗ್ರಾಹಕರ ಸೇವೆಯಲ್ಲಿಯೂ ಕೂಡ ಸುಧಾರಣೆಯಾಗಲಿದೆ ಎಂದು ಅದು ಹೇಳಿದೆ.
Govt agency biz for Pvt banks now open! Embargo removed. Tax payment & receiving pension made easy. Enhancing Cust. convenience #EoDB & Cust Service. Pvt Banks to be equal partners in Govt.’s Economic & Social agenda. @RBI to authorize Pvt banks #AatmaNirbharBharat @PMOIndia https://t.co/wzOKGEb7rr pic.twitter.com/NK2nzSqjGN
— DFS (@DFS_India) February 24, 2021
ಇದನ್ನೂ ಓದಿ- Blockchain Technology ಮೂಲಕ ಪಾವತಿ ಸೌಲಭ್ಯ ನೀಡಲು ಮುಂದಾದ SBI
ಬ್ಯಾಂಕ್ ಷೇರುಗಳ ಬೆಲೆಯಲ್ಲಿ ಭಾರಿ ಭರಾಟೆ
ಕೇಂದ್ರ ಸರ್ಕಾರದ ಈ ಘೋಷಣೆಯ ಬಳಿಕ, ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ (Sensex And Nifty) ಷೇರುಗಳ ಬೆಲೆಯಲ್ಲಿ ಭರಾಟೆ ಕಂಡುಬಂದಿದೆ. ವಿಶೇಷವಾಗಿ ಬ್ಯಾಂಕಿಂಗ್ ಕಂಪನಿಗಳ ಷೇರುಗಳಲ್ಲಿ. ಈ ನಿರ್ಧಾರದಿಂದ ಆಕ್ಸಿಸ್ ಬ್ಯಾಂಕ್ ಅತಿದೊಡ್ಡ ಫಲಾನುಭವಿಯಾಗಿ ಹೊರಹೊಮ್ಮಿದ್ದು, ತನ್ನ ಷೇರುಗಳ ಬೆಲೆಯಲ್ಲಿ ಶೇ 5.43 ರಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ-ಈ One Rupee Coin ನಿಮ್ಮ ಬಳಿ ಇದ್ದರೆ ನೀವೂ 10 ಲಕ್ಷ ರೂ. ಸಂಪಾದಿಸಬಹುದು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.