ಏಕ್ತಾ ಕಪೂರ್ ಸಿನಿಮಾ ಉದ್ಯಮದಲ್ಲಿ ದೊಡ್ಡ ಹೆಸರು. ಬಾಲಿವುಡ್ನ ಯಶಸ್ವಿ ನಿರ್ಮಾಪಕರಲ್ಲಿ ಏಕ್ತಾ ಕಪೂರ್ ಕೂಡಾ ಒಬ್ಬರು. ದೂರದರ್ಶನದಿಂದ ಬಾಲಿವುಡ್ವರೆಗೆ, ಏಕ್ತಾ ಕಪೂರ್ ತಮ್ಮ ಪ್ರತಿಭೆಯಿಂದ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಆದರೆ ಏಕ್ತಾ ಕಪೂರ್ ತಮ್ಮ ವೈಯಕ್ತಿಕ ಜೀವನದಲ್ಲಿ ಒಂಟಿಯಾಗಿದ್ದಾರೆ. 49 ವರ್ಷ ವಯಸ್ಸಿನ ಏಕ್ತಾ ಕಪೂರ್ ಇನ್ನೂ ಅವಿವಾಹಿತರಾಗಿದ್ದಾರೆ. ಅಸಲಿಗೆ ಏಕ್ತಾ ಕಪೂರ್ 15 ವರ್ಷದವಳಿದ್ದಾಗ ಮದುವೆಯಾಗಲು ಬಯಸಿದ್ದರಂತೆ.
ವರದಿಯ ಪ್ರಕಾರ, ಏಕ್ತಾ ಕಪೂರ್ ಕೇವಲ 15 ನೇ ವಯಸ್ಸಿನಲ್ಲಿ ಮದುವೆಯಾಗಬೇಕಿತ್ತು.ಸಂದರ್ಶನವೊಂದರಲ್ಲಿ ಸ್ವತಃ ಏಕ್ತಾ ಕಪೂರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆದರೆ ತನ್ನ ತಂದೆ ನೀಡಿದ ಸಲಹೆಯ ಮೇರೆಗೆ ಮದುವೆಯಾಗದಿರಲು ನಿರ್ಧರಿಸಿರುವುದಾಗಿಯೂ ಹೇಳಿದ್ದಾರೆ. ಏಕ್ತಾ ಕಪೂರ್ ಅವರು ಚಿಕ್ಕವಳಿದ್ದಾಗ, ಜೀತೇಂದ್ರ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಹೇಳಿದ್ದರಂತೆ. ಇದರಲ್ಲಿ ಮೊದಲ ಆಯ್ಕೆ ಮದುವೆಯಾಗಿ ಉಳಿದ ಜೀವನವನ್ನು ಸಂತೋಷದಿಂದ ಮತ್ತು ಶಾಂತಿಯುತವಾಗಿ ನಡೆಸುವುದಾಗಿತ್ತು. ಇನ್ನೊಂದು ಆಯ್ಕೆಯೆಂದರೆ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡುವುದು. ಆದ್ದರಿಂದ ಏಕ್ತಾ ಕಪೂರ್ ಎರಡನೇ ಆಯ್ಕೆಯನ್ನು ಆರಿಸಿಕೊಂಡರು.
ಇದನ್ನೂ ಓದಿ: ಹಾಲಿವುಡ್ ಸಿನಿಮಾದಲ್ಲಿ ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡ್ರಾ ಸಲ್ಮಾನ್ ಖಾನ್..? ವಿಡಿಯೋ ವೈರಲ್
ಏಕ್ತಗೆ ವಿಭಿನ್ನ ಉತ್ಸಾಹ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಶಕ್ತಿ ಇದೆ. ಇದು ಇತರರಲ್ಲಿ ಕಂಡುಬರುವುದಿಲ್ಲ. ಏಕ್ತಾ ಕಪೂರ್ ಗೆ ಕಷ್ಟಪಡುವ ಅಗತ್ಯ ಇರಲಿಲ್ಲ. ಆದರೂ ಅವರು ಕಷ್ಟಪಟ್ಟು ತನಗಾಗಿ ಹೆಸರು ಗಳಿಸಿದರು ಎಂದು ಏಕ್ತಾ ಕಪೂರ್ ನಿರ್ಧಾರವನ್ನು ಜಿತೇಂದ್ರ ಶ್ಲಾಘಿಸಿದರು. ಏಕ್ತಾ ತನ್ನ ಜೀವನವನ್ನು ಹಗುರವಾಗಿ ತೆಗೆದುಕೊಂಡು ಸಂತೋಷದಿಂದ ಬದುಕಬಹುದಿತ್ತು, ಆದರೆ ಅವರು ಆ ಮಾರ್ಗವನ್ನು ಆರಿಸಿಕೊಳ್ಳಲಿಲ್ಲ, ಬದಲಾಗಿ ಕಷ್ಟ ಪಟ್ಟು ದುಡಿದು ತನ್ನದೇ ಆದ ಹೆಸರು ಖ್ಯಾತಿ ಗಳಿಸಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ʼವಾಚ್ ಕೊಡುವ ನೆಪದಲ್ಲಿ ಮೈ ಮುಟ್ಟಲು ಮುಂದಾದ..ʼ ಕರಾಳ ಅನುಭವ ಬಿಚ್ಚಿಟ್ಟ ನಟಿ ನೇಹಾ ಗೌಡ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.