ನವದೆಹಲಿ : ದೇಶದಲ್ಲಿ ಮಾರಣಾಂತಿಕ ಮಟ್ಟಕ್ಕೆ ಹೋಗುತ್ತಿರುವ ಮಾಲಿನ್ಯವನ್ನು ತಡೆಯಲು ಭಾರತ ಸರ್ಕಾರವು (Indian Government)ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕಾಗಿ ಹೊಸ ನಿಯಮವನ್ನು ಏಪ್ರಿಲ್ 1 ರಂದು ಜಾರಿಗೆ ತರಲಿದೆ. ಜಾರಿಗೆ ಬರಲಿರುವ ಹೊಸ ನಿಯಮ ಹಳೆಯ ವಾಹನ ಮಾಲೀಕರಿಗೆ ಕೆಟ್ಟ ಸುದ್ದಿಯಾಗಲಿದೆ (New Rules). ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಾರ, ಏಪ್ರಿಲ್ 1, 2022 ರಿಂದ, 15 ವರ್ಷ ಹಳೆಯ ವಾಹನಗಳ ನೋಂದಣಿಯನ್ನು ನವೀಕರಿಸುವುದು 8 ಪಟ್ಟು ಹೆಚ್ಚು ದುಬಾರಿಯಾಗಲಿದೆ . ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಹೊಸ ನಿಯಮದ ವ್ಯಾಪ್ತಿಗೆ ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ವಾಹನವನ್ನು ಫಿಟ್‌ನೆಸ್ ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಿದೆ (vehicle fitness test).
ಹಳೆಯ ಕಾರಿನ ನೋಂದಣಿ :
ಈ ಹಿಂದೆ 15 ವರ್ಷ ಹಳೆಯ ಕಾರಿನ ನೋಂದಣಿಯನ್ನು ನವೀಕರಿಸಲು 600 ರೂ. ಪಾವತಿಸಬೇಕಾಗಿತ್ತು (vehicle registration renewal). ಆದ್ರೆ ಇನ್ನು ಮುಂದೆ ಈ ಶುಲ್ಕ 5 ಸಾವಿರ ರೂಪಾಯಿಗಳಾಗಲಿದೆ. ಹಳೆ ಬೈಕ್‌ಗೆ ಈ ಹಿಂದೆ 300 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಅದನ್ನು 1 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಟ್ರಕ್-ಬಸ್ ಗಳ ಬಗ್ಗೆ ಹೇಳುವುದಾದರೆ ಈ ಮೊದಲು 15 ವರ್ಷ ಹಳೆಯ ವಾಹನಗಳನ್ನು 1,500 ರೂ.ಗೆ ನವೀಕರಿಸಲಾಗುತ್ತಿತ್ತು. ಆದರೆ ಈಗ ಅದೇ ಕೆಲಸಕ್ಕೆ 12,500 ರೂ. ನೀಡಬೇಕಾಗುತ್ತದೆ (vehicle registration renewal price). ಈ ಹಿಂದೆ ಸಣ್ಣ ಪ್ರಯಾಣಿಕ ವಾಹನಗಳ ನವೀಕರಣ 1,300 ರೂ. ಪಾವತಿಸಿ ಮಾಡಬಹುದಾಗಿತ್ತು. ಆದರೆ ಏಪ್ರಿಲ್ ನಂತರ ಇದಕ್ಕೆ 10,000 ರೂ.ಗಳನ್ನು
ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : Arecanut Price: ಸ್ಥಿರತೆ ಕಾಯ್ದುಕೊಂಡ ರಾಶಿ ಅಡಿಕೆ ಧಾರಣೆ
ನಂಬರ್ ಪ್ಲೇಟ್‌ನಂತೆಯೇ ಫಿಟ್‌ನೆಸ್ ಪ್ಲೇಟ್ :
ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು ಭಾರತ ಸರ್ಕಾರವು ಬಹಳ ಸಮಯದಿಂದ ಕಠಿಣ ಕ್ರಮಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ (Pollution Control). ಈಗ ಈ ವಿಷಯದಲ್ಲಿ ಒಂದು ದೊಡ್ಡ ಹೆಜ್ಜೆಯನ್ನು ಇಡಲಾಗಿದೆ. ಎಲ್ಲಾ ಖಾಸಗಿ ಮತ್ತು ವಾಣಿಜ್ಯ ವಾಹನಗಳ ವಿಂಡ್ ಶೀಲ್ಡ್ ಮೇಲೆ ಫಿಟ್ನೆಸ್ ಸರ್ಟಿಫಿಕೇಟ್ ಪ್ಲೇಟ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ (Fitness certificate plate). ಈ ಫಿಟ್‌ನೆಸ್ ಪ್ಲೇಟ್ ವಾಹನಗಳ ನಂಬರ್ ಪ್ಲೇಟ್‌ನಂತೆ (Number plate) ಇರಲಿದ್ದು, ಅದರಲ್ಲಿ ಫಿಟ್‌ನೆಸ್‌ನ ಮುಕ್ತಾಯ ದಿನಾಂಕವನ್ನು ಸ್ಪಷ್ಟವಾಗಿ ಬರೆಯಲಾಗುತ್ತದೆ. ಇಲ್ಲಿ ನೀಲಿ ಬಣ್ಣದ ಸ್ಟಿಕ್ಕರ್ ಮೇಲೆ ಹಳದಿ ಬಣ್ಣದಲ್ಲಿ ವಾಹನ ಎಷ್ಟು ಕಾಲ ಫಿಟ್ ಆಗಿರುತ್ತದೆ ಎಂದು ಬರೆಯಲಾಗುತ್ತದೆ.
ಕಟ್ಟ ಬೇಕಾಗುತ್ತದೆ ಭಾರೀ ದಂಡ :
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮಕ್ಕೆ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಸದ್ಯಕ್ಕೆ 1 ತಿಂಗಳ ಕಾಲ ಸಾರ್ವಜನಿಕರು ಮತ್ತು ಸಂಬಂಧಪಟ್ಟವರಿಂದ ಸಲಹೆಗಳನ್ನು ಕೇಳಲಾಗಿದೆ. ನಂತರ ಸರ್ಕಾರ ಈ ನಿಯಮವನ್ನು ಜಾರಿಗೆ ತರಲಿದೆ. ಈ ಕಾನೂನನ್ನು ಉಲ್ಲಂಘಿಸುವ ವಾಹನ ಮಾಲೀಕರಿಗೆ ಭಾರಿ ದಂಡವನ್ನು ವಿಧಿಸುವ ನಿಬಂಧನೆಯನ್ನು ಸರ್ಕಾರ ಮಾಡುತ್ತಿದೆ.
ಇದನ್ನೂ ಓದಿ : Affordable Bike: ಕೇವಲ ರೂ.4,999 ಪಾವತಿಸಿ 100 Kmpl ಮೈಲೇಜ್ ಇರುವ ಈ ಬೈಕ್ ಅನ್ನು ಇಂದೇ ಮನೆಗೆ ತನ್ನಿ, ಇಲ್ಲಿದೆ ವಿವರ
ತಕ್ಷಣವೇ ಸ್ಕ್ರ್ಯಾಪ್ ಮಾಡಲು ರವಾನೆ :
ದೆಹಲಿ ಮತ್ತು ಹರಿಯಾಣ ಸರ್ಕಾರಗಳು ಈಗಾಗಲೇ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿದ್ದು, ಏಪ್ರಿಲ್ 1 ರಂದು ಈ ನಿಯಮವನ್ನು ಜಾರಿಗೆ ತರಲಿದೆ. ಹೊಸ ನಿಯಮ ಜಾರಿಯಾದ ನಂತರ ಫಿಟ್‌ನೆಸ್ ಪ್ರಮಾಣ ಪತ್ರ ಇಲ್ಲದ ಹಳೆ ವಾಹನಗಳು ರಸ್ತೆಗಿಳಿಯುವುದು ಕಂಡು ಬಂದಲ್ಲಿ ಕೂಡಲೇ ಸ್ಕ್ರ್ಯಾಪ್‌ಗೆ ಕಳುಹಿಸಲಾಗುವುದು ಎಂದು ತಿಳಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.