ಅಂಚೆ ಇಲಾಖೆ: ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಫೆ.22 ರಂದು ನೇರ ಸಂದರ್ಶನ

ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳ ನಿಯುಕ್ತಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ವಿ.ಎಲ್.ಚಿತ್‍ಕೋಟೆ ಅವರು ತಿಳಿಸಿದ್ದಾರೆ.

Written by - Manjunath N | Last Updated : Feb 15, 2024, 05:42 PM IST
  • ಅರ್ಜಿದಾರರು ಕನಿಷ್ಠ 18 ವಯಸ್ಸಿನವರಾಗಿರಬೇಕು, ಗರಿಷ್ಠ ವಯೋಮಿತಿ ಇರುವುದಿಲ್ಲ.
  • ವಿಮಾ ಉತ್ಪನ್ನ ಮಾರಾಟ ಮಾಡುವ ಅನುಭವದೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
  • ಅಭ್ಯರ್ಥಿಯು 5000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ವಾಸಮಾಡುತ್ತಿದ್ದರೆ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು.
ಅಂಚೆ ಇಲಾಖೆ: ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಫೆ.22 ರಂದು ನೇರ ಸಂದರ್ಶನ title=

ಬಳ್ಳಾರಿ: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳ ನಿಯುಕ್ತಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ವಿ.ಎಲ್.ಚಿತ್‍ಕೋಟೆ ಅವರು ತಿಳಿಸಿದ್ದಾರೆ.

ನೇರ ಸಂದರ್ಶನವನ್ನು ಫೆ.22 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕೋಟೆ ಆವರಣದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಶೈಕ್ಷಣಿಕ ಪ್ರಮಾಣ ಪತ್ರದ ನಕಲುಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ರೈಂ ಕಂಟೆಂಟ್ ಜೊತೆಗೊಂದು ತ್ರಿಕೋನ‌ ಪ್ರೇಮಕಥೆ.. ʼಎವಿಡೆನ್ಸ್ʼ ಲಿರಿಕಲ್ ಸಾಂಗ್ ರಿಲೀಸ್!

ಅರ್ಹತೆಗಳು:

ಅರ್ಜಿದಾರರು ಕನಿಷ್ಠ 18 ವಯಸ್ಸಿನವರಾಗಿರಬೇಕು, ಗರಿಷ್ಠ ವಯೋಮಿತಿ ಇರುವುದಿಲ್ಲ. ವಿಮಾ ಉತ್ಪನ್ನ ಮಾರಾಟ ಮಾಡುವ ಅನುಭವದೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅಭ್ಯರ್ಥಿಯು 5000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ವಾಸಮಾಡುತ್ತಿದ್ದರೆ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. 5000 ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ 12ನೇ ತರಗತಿ ಉತ್ತೀರ್ಣರಾಗಿರಬೇಕು. ಇತರೆ ವಿಮಾ ಕಂಪನಿ, ಸಂಸ್ಥೆ, ಸಂಘಗಳ ಏಜೆಂಟ್ ಆಗಿರಬಾರದು.

ನೇರ ಪ್ರತಿನಿಧಿ ಹುದ್ದೆ:

ನೇರ ಪ್ರತಿನಿಧಿ ಹುದ್ದೆಗೆ ನಿರುದ್ಯೋಗಿ, ಸ್ವಯಂ ಉದ್ಯೋಗ ನಿರತ ಯುವಕರು, ಮಾಜಿ ವಿಮಾ ಕಂಪನಿಗಳ ಸಲಹೆಗಾರರು, ಅಂಗನವಾಡಿ ಕಾರ್ಯಕರ್ತೆರು, ಮಹಿಳಾ ಮಂಡಳಿಯ ಕಾರ್ಯಕರ್ತೆಯರು, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಅರ್ಹರಾಗಿರುತ್ತಾರೆ.

ಫೀಲ್ಡ್ ಆಫೀಸರ್ ಹುದ್ದೆ:

ಫೀಲ್ಡ್ ಆಫೀಸರ್ ಹುದ್ದೆಗೆ ನಿವೃತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು, ನಿವೃತ್ತ ಗ್ರಾಮೀಣ ಅಂಚೆ ಸೇವಕರು ಸರ್ಹರಾಗಿರುತ್ತಾರೆ.

ಇದನ್ನೂ ಓದಿ: ಜಾಕ್ ಪಾಟ್ ಪ್ರೇಮೋತ್ಸವ ವೇದಿಕೆಯಲ್ಲಿ ಸಂಗೀತ ಸುಧೆ!

ಸಂದರ್ಶನ ಮೂಲಕ ಆಯ್ಕೆಯಾದ ಅಭ್ಯರ್ಥಿಯು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರದ ರೂಪದಲ್ಲಿ 5000 ರೂ.ಗಳನ್ನು ಭದ್ರತಾ ಠೇವಣಿ ಇಡಬೇಕು. ಆಯ್ಕೆಯಾದ ನೇರ ಪ್ರತಿನಿಧಿ, ಫೀಲ್ಡ್ ಆಫೀಸರ್‍ಗಳಿಗೆ ತಮ್ಮ ವ್ಯವಹಾರ ತಕ್ಕಂತೆ ಸೂಕ್ತ ಕಮೀಷನ್ ಇದ್ದು, ನಿಗದಿತ ವೇತನವಿರುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಅಭಿವೃದ್ಧಿ ಅಧಿಕಾರಿ ಮಾರುತಿ.ವಿ.ಯು ಅವರ ಮೊ.9481694420 ಅಥವಾ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ವಿ.ಎಲ್.ಚಿತ್‍ಕೋಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News